ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರು ದಾಳಿಗೆ ಸುಮಾರು 40 ಸಿಆರ್ಎಪಿಎಫ್ ಯೋಧರು ಮೃತಪಟ್ಟಿದ್ದರು. ಈ ಹಿನ್ನಲೆಯಲ್ಲಿ ಸೈನಿಕರಿಗೆ ಬೆಂಬಲ ಸೂಚಿಸುವ ನಿಟ್ಟಿನಲ್ಲಿ ಅಖಿಲ್ ಭಾರತ ಸಿನಿಮಾ ಕಾರ್ಮಿಕರ ಸಂಘಟನೆ ಹಿಂದಿ ಚಲನಚಿತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪಾಕ್ ನಟ ನಟಿಯರ ಮೇಲೆ ಸಂಪೂರ್ಣ ನಿಷೇಧವನ್ನು ಹೇರಿದೆ.



COMMERCIAL BREAK
SCROLL TO CONTINUE READING

ಈಗ ನಿಷೇಧ ಹೇರಿರುವ ಪತ್ರವನ್ನು ಎಎನ್ಐ ಸುದ್ದಿ ಸಂಸ್ಥೆ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದೆ.ಪತ್ರದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿರುವಂತೆ ಅಧಿಕೃತ ನಿಷೇಧ ಹೇರಿಕೆಯ ನಡುವೆಯೂ ಯಾವುದಾದರು ಸಂಸ್ಥೆ ಪಾಕಿಸ್ತಾನದ ಕಲಾವಿದರ ಜೊತೆ ಕಾರ್ಯನಿರ್ವಹಿಸಿದ್ದೆ ಆದಲ್ಲಿ ಅಂತವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪತ್ರದಲ್ಲಿ ತಿಳಿಸಿದೆ.


ಪುಲ್ವಾಮಾ ದಾಳಿಯ ನಂತರ ಶಿವಸೇನಾ ಸಂಘಟನೆಯೂ ಮ್ಯೂಸಿಕ್ ಕಂಪನಿಗಳು ಪಾಕ್ ಗಾಯಕರೊಂದಿಗೆ ಕಾರ್ಯನಿರ್ವಹಿಸುವಂತಿಲ್ಲ ಎಂದು ಎಚ್ಚರಿಕೆ ನೀಡಿತ್ತು.ಈಗ ಇದಾದ ಬೆನ್ನಲ್ಲೇ ಅಖಿಲ್ ಭಾರತ ಸಿನಿಮಾ ಕಾರ್ಮಿಕರ ಸಂಘಟನೆ ಅಧಿಕೃತವಾಗಿ ಪಾಕ್ ನಟ ನಟಿಯರ ಮೇಲೆ ನಿಷೇಧ ಹೇರಿದೆ.