Air India Flight news : ಟೇಕ್ ಆಫ್ ಆದ ಕೆಲವೇ ಸಮಯದಲ್ಲಿ ಏರ್ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿತ್ತು.. ಹೈಡ್ರಾಲಿಕ್ ವ್ಯವಸ್ಥೆಯಲ್ಲಿ ತಾಂತ್ರಿಕ ದೋಷ ಪತ್ತೆಯಾದ ತಕ್ಷಣ ಪೈಲಟ್ ತುರ್ತು ಪರಿಸ್ಥಿತಿ ಘೋಷಿಸಿದರು. ಇದರಿಂದ ಎಟಿಸಿ ಅಲರ್ಟ್ ಆಗಿತ್ತು.


COMMERCIAL BREAK
SCROLL TO CONTINUE READING

ಎರಡೂವರೆ ಗಂಟೆಗೂ ಹೆಚ್ಚು ಕಾಲ ಗಾಳಿಯಲ್ಲಿ ವಿಮಾನ ಸುತ್ತಾಡಿದೆ. ವಿಮಾನದ ಇಂಧನ ಖಾಲಿ ಮಾಡುವ ಪ್ರಕ್ರಿಯೆಯನ್ನು ಮುಂದುವರೆಸಲಾಗಿತ್ತು.. ಕೊನೆಗೂ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್‌ ಮಾಡಲಾಗಿದೆ.. ಇದರಿಂದ ವಿಮಾನದಲ್ಲಿದ್ದ 140 ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ..


ಇದನ್ನೂ ಓದಿ:ವಿಮೆ ತಿರಸ್ಕರಿಸಿದ ಮ್ಯಾಗಮಾ ವಿಮಾ ಕಂಪನಿಗೆ 1 ಲಕ್ಷ 80 ಸಾವಿರ ರೂ, ದಂಡ 


ಏರ್ ಇಂಡಿಯಾ ವಿಮಾನ ಎಎಕ್ಸ್‌ಬಿ-613 ತಿರುಚ್ಚಿಯಿಂದ ಶಾರ್ಜಾಕ್ಕೆ ಹೊರಡುವಾಗ ಇದ್ದಕ್ಕಿದ್ದಂತೆ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿತು. ವಿಮಾನದಲ್ಲಿ 140 ಪ್ರಯಾಣಿಕರಿದ್ದರು.. ಮತ್ತೊಂದೆಡೆ, ಎಟಿಸಿ ನೆಟ್‌ವರ್ಕ್‌ಗೆ ಎಚ್ಚರಿಕೆ ನೀಡಲಾಗಿದೆ. ತಿರುಚ್ಚಿ ವಿಮಾನ ನಿಲ್ದಾಣದ ಬಳಿ 20 ಆಂಬ್ಯುಲೆನ್ಸ್‌ಗಳು ಮತ್ತು 20 ಅಗ್ನಿಶಾಮಕ ವಾಹನಗಳು ಸೇರಿದಂತೆ ವೈದ್ಯಕೀಯ ತಂಡಗಳನ್ನು ಸಿದ್ಧಪಡಿಸಲಾಯಿತು.


ಹೆಚ್ಚಿನ ಸಂಖ್ಯೆಯಲ್ಲಿ ಅರೆವೈದ್ಯಕೀಯ ಸಿಬ್ಬಂದಿಯನ್ನೂ ಸಹ ನಿಯೋಜಿಸಲಾಯಿತು. ಇದರ ಮಧ್ಯ ಸಾಮಾನ್ಯ ಲ್ಯಾಂಡಿಂಗ್ ಸಾಧ್ಯವಿಲ್ಲ ಎಂದು ಎಟಿಸಿ ಹೇಳಿದ್ದು, ಭಯಾನಕವಾಗಿತ್ತು. ಆದರೆ ದೇವರ ದಯೆ ಅಂತಿಮವಾಗಿ ಪೈಲಟ್ ಎಟಿಸಿ ಮಾರ್ಗದರ್ಶನದೊಂದಿಗೆ ತಾಂತ್ರಿಕ ದೋಷವನ್ನು ಸರಿಪಡಿಸಲಾಯಿತು.. ಇದರಿಂದಾಗಿ 140 ಮಂದಿ ಸುರಕ್ಷಿತವಾಗಿ ಪಾರಾಗಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.