ನವದೆಹಲಿ: ಆಲ್ಕೋಹಾಲ್ ಪರೀಕ್ಷೆಯಲ್ಲಿ ವಿಫಲರಾದ ಬಳಿಕ ಏರ್ ಇಂಡಿಯಾದ  ಪೈಲಟ್‌ನನ್ನು ವಿಮಾನಯಾನ ಸಂಸ್ಥೆ  ಮೂರು ತಿಂಗಳ ಕಾಲ ಅಮಾನತ್ತು ಮಾಡಿ ಆದೇಶ ಹೊರಡಿಸಿದೆ. 


COMMERCIAL BREAK
SCROLL TO CONTINUE READING

ಸುದ್ದಿ ಸಂಸ್ಥೆ ಎಎನ್‌ಐ ಪ್ರಕಾರ, ಜುಲೈ 13 ರಂದು ಪೈಲಟ್ ದೆಹಲಿಯಿಂದ ಬೆಂಗಳೂರಿಗೆ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಕನಾಗಿ ತೆರಳುತ್ತಿದ್ದ ಸಂದರ್ಭದಲ್ಲಿ ಈ ಘಟನೆ  ನಡೆದಿದೆ.


ವಿಮಾನದಲ್ಲಿ ಒಂದೇ ಒಂದು ಆಸನ ಕೂಡ ಖಾಲಿ ಇಲ್ಲ, ಆದ್ದರಿಂದ ಹೆಚ್ಚುವರಿ ಸಿಬ್ಬಂದಿಯಾಗಿ ಕಾಕ್‌ಪಿಟ್‌ನಲ್ಲಿ ಕುಳಿತುಕೊಳ್ಳಲು ಅವರಿಗೆ ಅವಕಾಶ ನೀಡಿ ಎಂದು ಪೈಲಟ್ ವಿಮಾನದ ಸಿಬ್ಬಂದಿ ಸದಸ್ಯರಿಗೆ ತಿಳಿಸಿದರು. ನಿಯಮದ ಪ್ರಕಾರ, ಕ್ರ್ಯೂ ಮೆಂಬರ್ ಗಳಿಗೆ ಆಲ್ಕೋಹಾಲ್ ಪರೀಕ್ಷೆಯನ್ನು ನಡೆಸಿದ ಬಳಿಕವಷ್ಟೇ ಅವರನ್ನು ಕಾಕ್‌ಪಿಟ್‌ನಲ್ಲಿ ಕುಳಿತುಕೊಳ್ಳಲು ಅವಕಾಶ ಕಲ್ಪಿಸಲಾಗುತ್ತದೆ. ಆದರೆ, ಆಲ್ಕೋಹಾಲ್ ಪರೀಕ್ಷೆಯಲ್ಲಿ ಪೈಲಟ್ ವಿಫಲರಾಗಿದ್ದಾರೆ. ಅಲ್ಕೋಹಾಲ್ ಪರೀಕ್ಷೆಯಲ್ಲಿ ವಿಫಲವಾದ ಕೂಡಲೇ ಅವರನ್ನು ವಿಮಾನದಿಂದ ಕೆಳಗಿಳಿಸಲಾಯಿತು. ನಂತರ ವಿಮಾನಯಾನ ಸಂಸ್ಥೆ ಆತನನ್ನು ಮೂರು ತಿಂಗಳ ಕಾಲ ಅಮಾನತ್ತುಗೊಳಿಸಲು ನಿರ್ಧರಿಸಿದೆ.



ಕಳೆದ ತಿಂಗಳು ಏರ್ ಇಂಡಿಯಾ ಪೂರ್ವ ಪ್ರಾದೇಶಿಕ ನಿರ್ದೇಶಕ ರೋಹಿತ್ ಭಾಸಿನ್ ಅವರನ್ನು ಅಮಾನತುಗೊಳಿಸಿತ್ತು. ಈ ಘಟನೆಯು ಸಿಡ್ನಿಯಿಂದ ಬಂದಿದ್ದು, ಆಸ್ಟ್ರೇಲಿಯಾದ ಪ್ರಾದೇಶಿಕ ವ್ಯವಸ್ಥಾಪಕರೊಬ್ಬರು ಆತನ ವಿರುದ್ಧ ಕಳ್ಳತನದ ಬಗ್ಗೆ ದೂರು ನೀಡಿದ್ದಾರೆ. ವಾಸ್ತವವಾಗಿ, ಭಾಸಿನ್ ಸಿಡ್ನಿಯಲ್ಲಿ ಡ್ಯೂಟಿ ಫ್ರೀ ಅಂಗಡಿಯಿಂದ ಕೈಚೀಲವನ್ನು ಖರೀದಿಸಿದ್ದರು.