ನವದೆಹಲಿ: ಸೆಪ್ಟೆಂಬರ್ 27ರಿಂದ ಅಮೃತಸರ್-ದೆಹಲಿ-ಟೊರೊಂಟೊ ಮಾರ್ಗದಲ್ಲಿ ಏರ್ ಇಂಡಿಯಾ ವಿಮಾನ ಹಾರಾಟ ಆರಂಭವಾಗಲಿದೆ ಎಂದು ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಶುಕ್ರವಾರ ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಶ್ರೀ ಅಮೃತ್ಸರ್ ಸಾಹಿಬ್ ಮತ್ತು ಕೆನಡಾ ನಡುವೆ ವಾರಕ್ಕೆ ಮೂರು ಬಾರಿ ಏರ್ ಇಂಡಿಯಾ ವಿಮಾನ ಹಾರಾಟವನ್ನು ಘೋಷಿಸಲು ಸಂತೋಷವಾಗುತ್ತಿದೆ. ಅಮೃತರ್-ದೆಹಲಿ-ಟೊರೊಂಟೊ ವಿಮಾನವು 27 ಸೆಪ್ಟೆಂಬರ್ 2019 ರಂದು ವಿಶ್ವ ಪ್ರವಾಸೋದ್ಯಮ ದಿನಾಚರಣೆಯಂದು ಹಾರಾಟ ಆರಂಭಿಸಲಿದೆ ಎಂದು ನಾಗರೀಕ ವಿಮಾನಯಾನ ಸಚಿವರು ಟ್ವೀಟ್ ಮೂಲಕ ತಿಳಿಸಿದ್ದಾರೆ.



"ಗುರು ನಾಗ್ರಿ ಮತ್ತು ಉತ್ತರ ಅಮೇರಿಕಾದಿಂದ ಶ್ರೀ ಹರ್ಮಂದಿರ್ ಸಾಹಿಬ್, ದುರ್ಗಿಯಾನಾ ಮಂದಿರ ಮತ್ತು ಇತರ ಪವಿತ್ರ ಸ್ಥಳಗಳಿಗೆ ಪ್ರಯಾಣಿಸುವ ಭಕ್ತರ ದೀರ್ಘಾವಧಿ ಬೇಡಿಕೆಯನ್ನು ಪೂರೈಸುವ ಮೂಲಕ ಅವರಿಗೆ ಸಹಾಯವಾಗಲಿದೆ" ಎಂದು ಅವರು ಹೇಳಿದ್ದಾರೆ.


ಪ್ರಸ್ತುತ ರಾಜ್ಯಸಭೆ ಸದಸ್ಯರಾಗಿರುವ ಪುರಿ, ಅಮೃತಸರ ಲೋಕಸಭಾ ಕ್ಷೇತ್ರದಿಂದ 2019 ರ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಆದರೆ ಕಾಂಗ್ರೆಸ್ ಅಭ್ಯರ್ಥಿ ಗುರ್ಜೀತ್ ಸಿಂಗ್ ಔಜ್ಲಾ ವಿರುದ್ಧ ಸೋಲನುಭವಿಸಿದರು.