ನವದೆಹಲಿ: ಸೂಕ್ಷ್ಮ ಲಡಾಖ್ ವಲಯದ ಮತ್ತು ಉತ್ತರ ಭಾರತದ ಇತರ ಭಾಗಗಳ ವೈಮಾನಿಕ ರಕ್ಷಣೆಯನ್ನು ನೋಡಿಕೊಳ್ಳುವ ಭಾರತೀಯ ವಾಯುಸೇನೆಯ ವೆಸ್ಟರ್ನ್ ಏರ್ ಕಮಾಂಡ್ (ಡಬ್ಲ್ಯುಎಸಿ) ಯ ಹೊಸ ಕಮಾಂಡರ್-ಇನ್-ಚೀಫ್ ಆಗಿ ಏರ್ ಮಾರ್ಷಲ್ ವಿವೇಕ್ ರಾಮ್ ಚೌಧರಿ ಅವರನ್ನು ನೇಮಿಸಲಾಗಿದೆ ಎಂದು ಅಧಿಕಾರಿಗಳು ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಚೌಧರಿ ಪ್ರಸ್ತುತ ಈಸ್ಟರ್ನ್ ಏರ್ ಕಮಾಂಡ್‌ನಲ್ಲಿ ಹಿರಿಯ ವಾಯು ಸಿಬ್ಬಂದಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದು ಆಗಸ್ಟ್ 1 ರಂದು ಏರ್ ಮಾರ್ಷಲ್ ಬಿ ಸುರೇಶ್ ಅವರ ನಂತರ ಅಧಿಕಾರ ವಹಿಸಿಕೊಳ್ಳಲಿದ್ದಾರೆ.


ಈ ತಿಂಗಳ ಕೊನೆಯಲ್ಲಿ ವಾಯುಸೇನೆ ಸೇರ್ಪಡೆಗೊಳ್ಳಲಿವೆ 5 ರಫೇಲ್ ಯುದ್ಧ ವಿಮಾನಗಳು


ಚೀನಾದೊಂದಿಗಿನ ಗಡಿ ಉದ್ವಿಗ್ನತೆಯ ದೃಷ್ಟಿಯಿಂದ ಪೂರ್ವ ಲಡಾಖ್‌ನಲ್ಲಿ ಕಾರ್ಯಾಚರಣೆಯ ನಿಯೋಜನೆಯನ್ನು ಹೆಚ್ಚಿಸುತ್ತಿರುವುದರ ಭಾಗವಾಗಿ ಡಬ್ಲ್ಯುಎಸಿ ಮುಖ್ಯಸ್ಥರಾಗಿ ವಿವೇಕ್ ರಾಮ್ ಚೌಧರಿ ಅವರನ್ನು ನೇಮಕ ಮಾಡಲಾಗಿದೆ.


ಐಎಎಫ್ (IAF) ಕಳೆದ ಕೆಲವು ವಾರಗಳಲ್ಲಿ ಪೂರ್ವ ಲಡಾಖ್ ಪ್ರದೇಶದಲ್ಲಿ ರಾತ್ರಿ ಸಮಯದ ಯುದ್ಧ ವಾಯು ಗಸ್ತು ನಡೆಸುತ್ತಿದೆ.


ಇದು ಈಗಾಗಲೇ ತನ್ನ ಎಲ್ಲಾ ಮುಂಚೂಣಿಯ ಯುದ್ಧವಿಮಾನಗಳಾದ ಸುಖೋಯ್ 30 ಎಂಕೆಐ, ಜಾಗ್ವಾರ್ ಮತ್ತು ಮಿರಾಜ್ 2000 ವಿಮಾನಗಳನ್ನು ಲಡಾಖ್‌ನ ಗಡಿನಾಡಿನ ನೆಲೆಗಳಲ್ಲಿ ಮತ್ತು ಇತರ ಹಲವು ಸ್ಥಳಗಳಲ್ಲಿ ಲೈನ್ ಆಫ್ ಆಕ್ಚುಯಲ್ ಕಂಟ್ರೋಲ್ (LAC) ನಲ್ಲಿ  ನಿಯೋಜಿಸಲಾಗಿದೆ.


ಶೀಘ್ರದಲ್ಲೇ ಭಾರತಕ್ಕೆ ರಷ್ಯಾದ MIG29 ಮತ್ತು Sukhoi Su-30MKI ವಿಮಾನ


ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯ ಹಳೆಯ ವಿದ್ಯಾರ್ಥಿ, ಏರ್ ಮಾರ್ಷಲ್ ಚೌಧರಿ ಅವರನ್ನು ಡಿಸೆಂಬರ್ 29, 1982 ರಂದು ಐಎಎಫ್‌ನ ಫೈಟರ್ ಸ್ಟ್ರೀಮ್‌ಗೆ ನಿಯೋಜಿಸಲಾಯಿತು. ಅವರು ಮಿಗ್ -21, ಮಿಗ್ -23 ಎಮ್ಎಫ್, ಮಿಗ್ -29 ಮತ್ತು ಎಸ್‌ಯು -30 ಎಂಕೆಐ ಸೇರಿದಂತೆ ಹಲವಾರು ವಿಮಾನಗಳನ್ನು ಹಾರಿಸಿದ್ದಾರೆ.