ನವದೆಹಲಿ: ಈ ವರ್ಷ ದೀಪಾವಳಿಯ ನಂತರದ ದೆಹಲಿಯಲ್ಲಿ ವಾಯು ಗುಣಮಟ್ಟದಲ್ಲಿ ಕುಸಿತ ಕಂಡಿದೆ. ಆದಾಗ್ಯೂ ಇದು ಕಳೆದ ವರ್ಷಕ್ಕಿಂತ ಗಮನಾರ್ಹವಾಗಿ ಸುಧಾರಿಸಿದೆ ಎನ್ನಲಾಗಿದೆ.


COMMERCIAL BREAK
SCROLL TO CONTINUE READING

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ನಿರ್ವಹಿಸುತ್ತಿರುವ ರಾಷ್ಟ್ರೀಯ ವಾಯು ಗುಣಮಟ್ಟ ಸೂಚ್ಯಂಕದ ಪ್ರಕಾರ, ದೆಹಲಿಯಲ್ಲಿ ಬೆಳಿಗ್ಗೆ 11 ಗಂಟೆಗೆ ಅತ್ಯಂತ ಕಳಪೆ ವಾಯು ಗುಣಮಟ್ಟ ಸೂಚ್ಯಂಕವನ್ನು ಆನಂದ್ ವಿಹಾರ್( 362 ) ಹೊಂದಿದೆ. ಕಳೆದ ವರ್ಷ ಇದು 642 ಎಕ್ಯೂಐ ಮತ್ತು  2017 ರಲ್ಲಿ 367 ಎಕ್ಯೂಐ ಆಗಿತ್ತು ಎನ್ನಲಾಗಿದೆ.


ಸಫಾರ್ ಪ್ರಕಾರ ವಾಯು ಮಾಲಿನ್ಯದ ಮಟ್ಟ ಕಳೆದ ಮೂರು ವರ್ಷಗಳ ಅವಧಿಗೆ ಹೋಲಿಸಿದಲ್ಲಿ ಉತ್ತಮ ಎಂದು ಹೇಳಿದೆ.ಇದಕ್ಕೆ ಪ್ರಮುಖವಾಗಿ ವೇಗವಾಗಿ ಬೀಸುವ ಗಾಳಿಯಿಂದಾಗಿ ಮಾಲಿನ್ಯದ ಮಟ್ಟ ಹೆಚ್ಚಿಲ್ಲ ಎನ್ನಲಾಗಿದೆ.


ಇನ್ನೂ ನೋಯ್ಡಾ ಪ್ರದೇಶವು ದೆಹಲಿಗಿಂತ ಹೆಚ್ಚು ಕಲುಷಿತಗೊಂಡಿದೆ, 388ರ ಎಕ್ಯೂಐ ಸೆಕ್ಟರ್ 1ರಲ್ಲಿ ದಾಖಲಾಗಿದೆ ಎಂದು ವರದಿಯಾಗಿದೆ. ಗುರುಗ್ರಾಮದಲ್ಲಿ ಮಾಲಿನ್ಯ ಪ್ರಮಾಣ ಮಧ್ಯಮ ಎನ್ನಲಾಗುತ್ತಿದೆ, ವಿಕಾಸ್ ಸದನ್‌ ದಲ್ಲಿ 360 ಎಕ್ಯೂಐ ದಾಖಲಾಗಿದೆ ಎನ್ನಲಾಗಿದೆ.