ಮುಂಬೈ: ಅನೇಕ ಬಾರಿ, ರೋಗಿಗಳಿಗೆ ಸಹಾಯ ಮಾಡಲು ವಾಯು ಸೇವೆಯನ್ನು ಸಹ ಬಳಸಲಾಗುತ್ತದೆ. ರೋಗಿಯೊಂದಿಗೆ ನಾಗ್ಪುರದಿಂದ ಹೈದರಾಬಾದ್‌ಗೆ ಹೋಗುತ್ತಿದ್ದ ವಿಮಾನವು ಮಧ್ಯದಲ್ಲಿ ಮುಂಬೈ ಕಡೆಗೆ ತಿರುಗಬೇಕಾಯಿತು. 


Flight) ಟೇಕ್ಆಫ್ ಆಗುವ ಸಂದರ್ಭದಲ್ಲಿ ಅದರ ಒಂದು ಟೈರ್ ನೆಲದ ಮೇಲೆ ಬಿದ್ದಿದೆ ಎಂದು ತಿಳಿದು ಬಂದಿದೆ. ಹಾಗಾಗಿ ವಿಮಾನವನ್ನು ಮುಂಬೈನಲ್ಲಿ ತುರ್ತು ಲ್ಯಾಂಡಿಂಗ್ ಮಾಡಲಾಯಿತು.


ತಮಿಳುನಾಡಿನ ನೂತನ ಸಚಿವ ಸಂಪುಟದಲ್ಲಿ ಸ್ಟಾಲಿನ್, ಗಾಂಧಿ, ನೆಹರು...!


COMMERCIAL BREAK
SCROLL TO CONTINUE READING

ವಿಮಾನದಲ್ಲಿದ್ದ ಎಲ್ಲರೂ ಸುರಕ್ಷಿತರಾಗಿದ್ದಾರೆ:
ಮುಂಬೈ (Mumbai) ವಿಮಾನ ನಿಲ್ದಾಣದಲ್ಲಿ ವಿಮಾನ ಲ್ಯಾಂಡ್ ಆದ ಬಳಿಕ ವಿಮಾನದಲ್ಲಿ ಜ್ವಾಲೆ (Fire) ಕಂಡು ಬಂದಿದೆ. ಆದರೆ ವಿಮಾನದಲ್ಲಿದ್ದ ಎಲ್ಲರೂ ಸುರಕ್ಷಿತರಾಗಿದ್ದು ಅವರನ್ನು ಸ್ಥಳಾಂತರಿಸಲಾಗಿದೆ. ಅದರಲ್ಲಿರುವ ಗಂಭೀರ ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಯನ್ನು ಮುಂಬೈನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.


ಇದನ್ನೂ ಓದಿ-  Steam ಪಡೆಯುವುದರಿಂದ ಕರೋನಾದಿಂದ ರಕ್ಷಣೆ ಪಡೆಯಬಹುದೇ? ಇಲ್ಲಿದೆ ಸತ್ಯಾಸತ್ಯತೆ


ಜೆಟ್ ಸರ್ವ್ ಏವಿಯೇಷನ್ ಸಿ -90 ವಿಮಾನ ವಿಟಿ-ಜೆಐಎಲ್ ಏರ್ ಆಂಬ್ಯುಲೆನ್ಸ್  ನಾಗ್ಪುರದಿಂದ ರೋಗಿಯೊಂದಿಗೆ ಹೊರಟಿತ್ತು. ಟೇಕ್ಆಫ್ ವೇಳೆ  ಒಂದು ಚಕ್ರ ವಿಮಾನದಿಂದ ಬೇರ್ಪಟ್ಟು ನೆಲಕ್ಕೆ ಉರುಳಿದೆ. ಬಳಿಕ ವಿಮಾನವನ್ನು ಮುಂಬೈನಲ್ಲಿ ತುರ್ತು ಲ್ಯಾಂಡಿಂಗ್ ಮಾಡಲಾಗಿದೆ. ಬಹಳ ಎಚ್ಚರಿಕೆಯಿಂದ ಕ್ಯಾಪ್ಟನ್ ಕೇಸರಿ ಸಿಂಗ್ ಮುಂಬೈನಲ್ಲಿ ಫೋಮ್ ಕಾರ್ಪೆಟ್ ಮೇಲೆ ವಿಮಾನವನ್ನು ಲ್ಯಾಂಡ್ ಮಾಡಿದರು. 


https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.