ನವ ದೆಹಲಿ: ಏರ್ಟೆಲ್ ಪ್ರತಿ ಕ್ಷೇತ್ರದಲ್ಲಿಯೂ ರಿಲಯನ್ಸ್ ಜಿಯೊ ಜೊತೆ ಸ್ಪರ್ಧಿಸಲು ಪ್ರಯತ್ನಿಸುತ್ತಿದೆ. ಇದೀಗ ಏರ್ಟೆಲ್ ಕಂಪನಿಯು ತನ್ನ ಡಾಟಾ ಕಾರ್ಡ್ ಪ್ರಕರಣದಲ್ಲಿ ತನ್ನ ಹಕ್ಕನ್ನು ಸಲ್ಲಿಸಿದೆ. ಈಗ ಏರ್ಟೆಲ್ ತನ್ನ 4G  ಹಾಟ್ಸ್ ಪಾಟ್ ಮತ್ತು 4G ಡಾಂಗಿಲ್ಗಳ ಬೆಲೆಯನ್ನು 50 ಪ್ರತಿಶತದಷ್ಟು ಕಡಿಮೆ ಮಾಡಿದೆ. ಅಕ್ಟೋಬರ್ನಲ್ಲಿ, ರಿಲಯನ್ಸ್ ಜಿಯೊ ತನ್ನ ಎಂ 2 ಎಸ್ ರೂಟರ್ ವೆಚ್ಚದಲ್ಲಿ 50 ಪ್ರತಿಶತದಷ್ಟು ಕಡಿಮೆಮಾಡಿತ್ತು. ಏರ್ಟೆಲ್ ಕಂಪನಿಯು ಅಗ್ಗದ ಬೆಲೆಗೆ 4G ಯ ಬಂಪರ್ ಕೊಡುಗೆ ನೀಡುವ ಮೂಲಕ ಜಿಯೋಫಿ ದೊಂದಿಗೆ ನೇರ ಸ್ಪರ್ಧೆಗಿಳಿದಿದೆ.


COMMERCIAL BREAK
SCROLL TO CONTINUE READING

999 ಕ್ಕೆ ಲಭ್ಯವಿದೆ ಏರ್ಟೆಲ್ 4 ಜಿ ಹಾಟ್ಸ್ಪಾಟ್!


ಈ ಮೊದಲು ರೂ. 1,950 ಇದ್ದ ಏರ್ಟೆಲ್ 4 ಜಿ ಹಾಟ್ಸ್ಪಾಟ್(ಹಾಟ್ಸ್ ಪಾಟ್) ಬೆಲೆ, ಇದೀಗೆ 50% ಕಡಿಮೆಗೊಳಿಸುವ ಮೂಲಕ ರೂ. 999 ಕ್ಕೆ ಲಭ್ಯವಿದೆ. ಜೊತೆಗೆ ರೂ. 3,000 ಇದ್ದ ಏರ್ಟೆಲ್ 4 ಜಿ ಡಾಂಗಲ್, ಇದೀಗ ರೂ. 1,500ಕ್ಕೆ ಸಿಗಲಿದೆ. 


ಮೊದಲು ಈ ಕೊಡುಗೆ ಕೇರಳದಲ್ಲಿ ಮಾತ್ರ ಇತ್ತು


ಏರ್ಟೆಲ್ ಕಂಪನಿಯು 4 ಜಿ ಹಾಟ್ ಸ್ಪಾಟ್ ಅನ್ನು 999 ರೂ.ಗೆ ಈಗಾಗಲೇ ಜಾರಿಗೆ ತಂದಿತ್ತು. ಆದರೆ ಆ ಸಮಯದಲ್ಲಿ ಕೇರಳ ರಾಜ್ಯಕ್ಕೆ ಮಾತ್ರ ಈ ಕೊಡುಗೆ ಅನ್ವಯವಾಗಿತ್ತು. ಆದಾಗ್ಯೂ, ನಂತರ ಅದರ ಬೆಲೆ ರೂ. 1500 ಕ್ಕೆ ಹೆಚ್ಚಾಯಿತು. ಆದರೆ, ಈಗ ಏರ್ಟೆಲ್ ಕಂಪನಿಯು ಜಿಯೋದೊಂದಿಗೆ ನೇರ ಸ್ಪರ್ಧೆಗೆ ಇಳಿದಿದ್ದು ಅದರ ಬೆಲೆ 50% ಅಗ್ಗವಾಗಿದೆ.


ಏರ್ಟೆಲ್ ಫೋನ್ಗಳಲ್ಲಿ ಅಗ್ಗದ ಯೋಜನೆ


ರಿಲಯನ್ಸ್ ಜಿಯೊ ಜೊತೆ ಸ್ಪರ್ಧಿಸಲು, ಏರ್ಟೆಲ್ ತನ್ನ ಸ್ಮಾರ್ಟ್ಫೋನ್ನೊಂದಿಗೆ ಹೊಸ ಯೋಜನೆಯನ್ನು ಪ್ರಾರಂಭಿಸಿದೆ. ಇದು 199 ರೂ. ಗೆ 28 ದಿನಗಳ ಕೊಡುಗೆಯನ್ನು ನೀಡಿದೆ. ಇತ್ತೀಚೆಗೆ, ಮೈಕ್ರೋಮ್ಯಾಕ್ಸ್ನ ವಿಶೇಷ ಸ್ಮಾರ್ಟ್ಫೋನ್ಗಳಿಗಾಗಿ ಜಿಯೋ 199 ರೂ. ಬೆಲೆ ನಿಗದಿ ಯೋಜನೆಯನ್ನು ಪ್ರಾರಂಭಿಸಿದೆ. ಇದು ಅನಿಯಮಿತ ಕರೆಗಳು ಮತ್ತು 1 ಜಿಬಿ ಡೇಟಾವನ್ನು ಪ್ರತಿದಿನ ನೀಡುತ್ತದೆ.


ಈ ಯೋಜನೆಯಲ್ಲಿ ನೀವು ಏನು ಪಡೆಯುತ್ತೀರಿ


ಏರ್ಟೆಲ್ನ 199 ರೂಪಾಯಿ ಯೋಜನೆಯಡಿಯಲ್ಲಿ ಗ್ರಾಹಕರು ಅನಿಯಮಿತ ಕರೆ ಪಡೆಯುತ್ತಾರೆ. ರಾಷ್ಟ್ರೀಯ ಮತ್ತು ಸ್ಥಳೀಯ ರೋಮಿಂಗ್ ಅನ್ನು ಈ ಯೋಜನೆಯಲ್ಲಿ ಸೇರಿಸಲಾಗಿದೆ. ಒಂದು ವರದಿಯ ಪ್ರಕಾರ, 199 ರೂಪಾಯಿ ಯೋಜನೆಗಳು ಪ್ರತಿದಿನ 1 ಜಿಬಿ ಡೇಟಾವನ್ನು ಪಡೆಯುತ್ತದೆ ಮತ್ತು ಲೋಕಲ್ ನ್ಯಾಶನಲ್ ಎಸ್ಎಂಎಸ್ ಸಹ ಮುಕ್ತವಾಗಿರುತ್ತದೆ. ವಾಯಿದೆ ಪ್ರಕಾರ, ಈ ಯೋಜನೆಯೊಂದಿಗೆ ನೀವು 28 ಜಿಬಿ ಡೇಟಾವನ್ನು ಪಡೆಯುತ್ತೀರಿ. ದೆಹಲಿ-ಎನ್ಸಿಆರ್, ಮುಂಬೈ, ಚೆನ್ನೈ ಮತ್ತು ಕರ್ನಾಟಕ ಸರ್ಕಲ್ಗಳಿಗೆ ಏರ್ಟೆಲ್ ರೂ. 199 ಯೋಜನೆ ಲಭ್ಯವಿದೆ.