ಹೀಗೊಂದು `Ajab Prem Ki Gazab Kahani`, ತನ್ನ ವಧುವನ್ನು ಕರೆತರಲು ವರನ ಮನೆ ತಲುಪಿದ Girlfriend
ಬಿಹಾರದ ಬೇಗೂಸರಾಯಿನಿಂದ ಒಂದು ವಿಚಿತ್ರ ಪ್ರೇಮಕಥೆ ವರದಿಯಾಗಿದೆ.
ನವದೆಹಲಿ: ಬಿಹಾರದ ಬೇಗೂಸರಾಯಿನಿಂದ ಒಂದು ವಿಚಿತ್ರ ಪ್ರೇಮಕಥೆ ವರದಿಯಾಗಿದೆ. ಇಲ್ಲೋರ್ವ ನವವಿವಾಹಿತ ವಧು ತಾನು ಮದುವೆಯಾಗುವ ಮೊದಲೇ ಮತ್ತೋರ್ವ ಯುವತಿಯ ಜೊತೆಗೆ ಸಮಲೈಂಗಿಕ ಸಂಬಂಧ ಹೊಂದಿರುವುದಾಗಿ ಹೇಳಿ ತನ್ನ ಪತಿಯೊಂದಿಗೆ ವಾಸಿಸಲು ನಿರಾಕರಿಸಿದ್ದಾಳೆ. ಅಷ್ಟೇ ಅಲ್ಲ ಈ ನವವಿವಾಹಿತ ಯುವತಿಯನ್ನು ಕರೆದುಕೊಂಡು ಹೋಗಲು ಪ್ರೇಯಸಿ ಯುವತಿ ರಾಂಚಿಯಿಂದ ಬೇಗೂಸರಾಯಿ ಕೂಡ ತಲುಪಿದಕಾರಣ ಪ್ರಕರಣ ಸ್ಥಳೀಯ ಪೋಲೀಸ್ ಠಾಣೆವರೆಗೆ ತಲುಪಿದೆ. ಠಾಣೆಯಲ್ಲಿ ವಧು ತನ್ನನ್ನು ತನ್ನ ಪ್ರೇಯಸಿಯ ಜೊತೆಗೆ ವಾಸಿಸಲು ಬಿಡಬೇಕು ಎಂದು ವಾದಿಸಿದ್ದಾಳೆ.
ವಿಷಯ ಏನು ಅಂದರೆ, ರಾಂಚಿ ರಹವಾಸಿಯಾಗಿರುವ ಪೂಜಾ ಹೆಸರಿನ ಯುವತಿಯನ್ನು ಜೂನ್ 14ರಂದು ಆಕೆಯ ಸಂಬಂಧಿಕರು ಬೇಗೂಸರಾಯಿ ರಹವಾಸಿಯಾಗಿರುವ ಅಂಕಿತ್ ಕುಮಾರ್ ಕೊಟ್ಟು ಮದುವೆ ನೆರವೇರಿಸಿದ್ದಾರೆ. ಮದುವೆಯ ಬಳಿಕ ಪೂಜಾ ತನ್ನ ಪತಿಯ ಜೊತೆಗೆ ಬೇಗೂಸರಾಯಿ ತಲುಪಿದ್ದಾಳೆ. ಆದರೆ, 10 ದಿನಗಳ ಬಳಿಕ ಆಕೆ ತಾನು ಕಳೆದ ಎರಡು ವರ್ಷಗಳಿಂದ ತನ್ನ ಸಮಲೈಂಗಿಕ ಸಂಗಾತಿಯ ಜೊತೆಗೆ ಸಂಬಂಧ ಹೊಂದಿರುವುದಾಗಿ ಹೇಳಿ ಪತಿಯೊಂದಿಗೆ ವಾಸಿಸಲು ನಿರಾಕರಿಸಿದ್ದಾಳೆ. ಅಷ್ಟೇ ಅಲ್ಲ ತನ್ನ ಪ್ರೇಯಸಿ ಯುವತಿಯ ಜೊತೆಗೆ ಮದುವೆ ಕೂಡ ಆಗುವುದಾಗಿ ಹೇಳಿದ್ದಾಳೆ.
ಇದೇ ಕಾರಣದಿಂದ ಪೂಜಾಳ ಸಮಲೈಂಗಿಕ ಸಂಗಾತಿ ಸಪನಾ ವರ್ಮಾ ಬೇಗೂಸರಾಯಿ ತಲುಪಿದ್ದಾಳೆ ಹಾಗೂ ಪೂಜಾ ಜೊತೆಗೆ ಇರಲು ಹಠ ಹಿಡಿದಿದ್ದಾಳೆ. ಇದಾದ ಬಳಿಕ ಪೂಜಾಳ ಪತಿ ನಗರದ ಪೋಲೀಸ್ ಠಾಣೆಗೆ ಸೂಚನೆ ನೀಡಿದ್ದಾರೆ. ಸೂಚನೆ ಪಡೆದ ಪೊಲೀಸರು ಎಲ್ಲರನ್ನು ಕಚೇರಿಗೆ ಬರಮಾಡಿಕೊಂಡಿದ್ದಾರೆ. ವಿಚಾರಣೆಯ ವೇಳೆ ಪೂಜಾ ಹಾಗೂ ಸಪ್ನಾ ತಾವು ರಾಂಚಿಯ ಒಂದು ವಸ್ತ್ರದ ಅಂಗಡಿಯಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದ ವೇಳೆ ಇಬ್ಬರ ಮಧ್ಯೆ ಪ್ರೇಮಾಂಕುರವಾಗಿದೆ ಮತ್ತು ಪರಸ್ಪರ ಒಂದಾಗಿ ಬಾಳಿ ಬದುಕುವ ನಿರ್ಣಯ ಕೈಗೊಂಡು ಕಳೆದ ಎರಡು ವರ್ಷದಿಂದ ಒಟ್ಟಾಗಿ ವಾಸಿಸುತ್ತಿರುವುದಾಗಿ ಹೇಳಿದ್ದಾರೆ. ಈ ನಡುವೆ ಪೂಜಾ ಸಂಬಂಧಿಕರು ಜೂನ್ 14ರಂದು ಆಕೆಯ ವಿವಾಹವನ್ನು ಬೇಗೂಸರಾಯಿನಲ್ಲಿ ನೆರವೇರಿಸಿದ್ದಾರೆ ಎಂಬುದನ್ನು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಪೂಜಾ ತಾನು ತನ್ನ ಪತಿಯ ಜೊತೆಗೆ ವಾಸಿಸಲು ನಿರಾಕರಿಸಿದ್ದಾಳೆ. ತಾನು ಸಪ್ನಾ ಜೊತೆಗೆ ಪ್ರೀತಿಸುತ್ತಿದ್ದು, ಜೇವನ ಪೂರ್ತಿ ಆಕೆಯ ಜೊತೆಗೆ ಇದ್ದು, ಆಕೆಯನ್ನೇ ವರಿಸುವುದಾಗಿ ಹೇಳಿದ್ದಾಳೆ. ಸಪ್ನಾ ಕೂಡ ಪೂಜಾಳನ್ನು ತನ್ನ ಪತ್ನಿ ಎಂದು ಸ್ವೀಕರಿಸುತ್ತಾಳೆ ಹಾಗೂ ಇಬ್ಬರು ಒಟ್ಟಾಗಿ ಬಾಳಲು ಬಯಸುತ್ತಿದ್ದಾರೆ. ತನ್ನ ಸಂಬಂಧಿಕರು ತನ್ನ ಅನುಮತಿ ಇಲ್ಲದೆಯೇ ತನ್ನ ವಿವಾಹವನ್ನು ನೆರವೇರಿಸಿದ್ದಾರೆ ಎಂದು ಪೂಜಾ ಪೊಲೀಸರ ಬಳಿ ದೂರಿದ್ದಾಳೆ. ಎಲ್ಲಾ ವಿಷಯವನ್ನು ತಿಳಿದ ಅಂಕಿತ್ ಕೂಡ ಇದೀಗ ಪೂಜಾಳನ್ನು ವಿವಾಹ ಬಂಧನದಿಂದ ಮುಕ್ತ ಮಾಡಲು ನಿರ್ಧರಿಸಿದ್ದು, ಪೂಜಾ ಇನ್ಮುಂದೆ ಸಪ್ನಾ ಜೊತೆಗೆ ಪತಿ-ಪತ್ನಿಯಾಗಿ ವಾಸಿಸಲಿದ್ದಾಳೆ.