ನವದೆಹಲಿ: ಕೊರೊನಾಬಿಕ್ಕಟ್ಟಿಗೆ ಸಂಬಂಧಿಸಿದಂತೆ ಸಮಾಜವಾದಿ ಪಕ್ಷದ (ಎಸ್‌ಪಿ) ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಶುಕ್ರವಾರ (ಏಪ್ರಿಲ್ 23) ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರದ ಮೇಲೆ ದಾಳಿ ನಡೆಸಿದ್ದಾರೆ.


COMMERCIAL BREAK
SCROLL TO CONTINUE READING

ಯುಪಿ ಸರ್ಕಾರವನ್ನು ಖಂಡಿಸಿದ ಯಾದವ್, ಆರೋಗ್ಯ ವ್ಯವಸ್ಥೆಯ ಕುಸಿತಕ್ಕೆ ಆಡಳಿತಾರೂಢ ಬಿಜೆಪಿಯೇ ಕಾರಣ ಎಂದು ಆರೋಪಿಸಿದರು. ಹಲವಾರು ಜನರು COVID-19 ಔಷಧಿಗಳು, ಆಮ್ಲಜನಕ ಸಿಲಿಂಡರ್‌ಗಳನ್ನು ಬ್ಲಾಕ್ ನಲ್ಲಿ ಮಾರಾಟ ಮಾಡುತ್ತಿದ್ದಾರೆ. ಆದರೆ ಯೋಗಿ ಸರ್ಕಾರ ಮೂಕ ಪ್ರೇಕ್ಷಕನಂತೆ ನೋಡುತ್ತಿದೆ ಎಂದು ಹೇಳಿದರು.


ಇದನ್ನೂ ಓದಿ: Aravind Kejriwal: ಆಕ್ಸಿಜನ್‌ಗಾಗಿ ಯಾರಿಗೆ ಕರೆ ಮಾಡಬೇಕು ಹೇಳಿ: ಸಭೆಯಲ್ಲಿ ಪಿಎಂ ಮೋದಿಗೆ ದೆಹಲಿ ಸಿಎಂ ಪ್ರಶ್ನೆ!


ಲಕ್ನೋದಲ್ಲಿನ ಕೊರೊನಾ ನಿಯಂತ್ರಣ ಕೊಠಡಿಯ ಉಸ್ತುವಾರಿ ಅಧಿಕಾರಿಗಳು ಜನರನ್ನು ಭೇಟಿಯಾಗುತ್ತಿಲ್ಲ ಅಥವಾ ಸಂಕಷ್ಟದಲ್ಲಿರುವವರ ಕರೆಗಳನ್ನು ಸ್ವೀಕರಿಸುತ್ತಿಲ್ಲ ಎಂದು ಎಸ್‌ಪಿ ಮುಖ್ಯಸ್ಥರು ಆರೋಪಿಸಿದ್ದಾರೆ.'ಪ್ರತಿದಿನ ಮುಖ್ಯಮಂತ್ರಿ ಹಗುರವಾಗಿ ಪರಿಗಣಿಸುವ ಅಧಿಕಾರಿಗಳ ವಿರುದ್ಧ ಕಠಿಣವಾಗಿ ವರ್ತಿಸುವ ಬಗ್ಗೆ ಹೇಳಿಕೆ ನೀಡುತ್ತಿದ್ದಾರೆ. ಆದರೆ, ರಾಜ್ಯ ರಾಜಧಾನಿ ಲಕ್ನೋದಲ್ಲಿ ಅಧಿಕಾರಿಗಳು ಜನರನ್ನು ಭೇಟಿಯಾಗುತ್ತಿಲ್ಲ ಅಥವಾ ಅವರ ಕರೆಗಳನ್ನು ಸ್ವೀಕರಿಸುತ್ತಿಲ್ಲ. ತೊಂದರೆಗೊಳಗಾದ ಜನರ ಕುಂದುಕೊರತೆಗಳನ್ನು ಕೇಳಲು ಯಾರೂ ಇಲ್ಲ. ಅವರ ವಿರುದ್ಧ ಏಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅವರು ಪ್ರಶ್ನಿಸಿದರು.


ಇದನ್ನೂ ಓದಿ: Sumitra Mahajan: 'ನನ್ನ ಸಾವನ್ನು ಅಷ್ಟು ಬೇಗ ಅಂನೌನ್ಸ್ ಮಾಡುವ ಅರ್ಜೆಂಟ್ ಏನಿತ್ತು?'


ಆಮ್ಲಜನಕ ಮತ್ತು ಕರೋನಾ ಸಂಬಂಧಿತ ಔಷಧಿಗಳ ಕೊರತೆ ದೇಶದ ಹಲವಾರು ಭಾಗಗಳಲ್ಲಿ ವರದಿಯಾಗಿದೆ. ಉತ್ತರಪ್ರದೇಶದಲ್ಲಿ ಸುಮಾರು 34,379 COVID-19 ಪ್ರಕರಣಗಳು ಮತ್ತು 195 ಸಾವು ನೋವುಗಳು ವರದಿಯಾಗಿವೆ, ಆ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 9,76,765 ಕ್ಕೆ ತಲುಪಿದೆ. ಈ ಕಾಯಿಲೆಯಿಂದ ಸಾವನ್ನಪ್ಪಿದವರ ಸಂಖ್ಯೆ 10,541 ಕ್ಕೆ ಏರಿದೆ ಎಂದು ರಾಜ್ಯ ಸರ್ಕಾರ ಗುರುವಾರ ತಿಳಿಸಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.