ಕಾಶಿ ವಿಶ್ವನಾಥ್ ಕಾರಿಡಾರ್ ಗೆ ಅನುಮೋದನೆ ನೀಡಿದ್ದು ಸಮಾಜವಾದಿ ಪಕ್ಷದ ಸರ್ಕಾರ-ಅಖಿಲೇಶ್ ಯಾದವ್
ವಾರಣಾಸಿಯಲ್ಲಿ ಕಾಶಿ ವಿಶ್ವನಾಥ್ ಕಾರಿಡಾರ್ ಅನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸುವ ಒಂದು ದಿನ ಮೊದಲು, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಭಾನುವಾರದಂದು ತಮ್ಮ ಅವಧಿಯಲ್ಲಿ ಯೋಜನೆಗೆ ಅನುಮೋದನೆ ನೀಡಲಾಯಿತು ಮತ್ತು ಅದಕ್ಕೆ ಸಾಕ್ಷ್ಯಗಳಿವೆ ಎಂದು ಹೇಳಿದರು.
ನವದೆಹಲಿ: ವಾರಣಾಸಿಯಲ್ಲಿ ಕಾಶಿ ವಿಶ್ವನಾಥ್ ಕಾರಿಡಾರ್ ಅನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸುವ ಒಂದು ದಿನ ಮೊದಲು, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಭಾನುವಾರದಂದು ತಮ್ಮ ಅವಧಿಯಲ್ಲಿ ಯೋಜನೆಗೆ ಅನುಮೋದನೆ ನೀಡಲಾಯಿತು ಮತ್ತು ಅದಕ್ಕೆ ಸಾಕ್ಷ್ಯಗಳಿವೆ ಎಂದು ಹೇಳಿದರು.
ಇದನ್ನೂ ಓದಿ-7th Pay Commission : ಹೊಸ ವರ್ಷಕ್ಕೆ ಏರಿಕೆಯಾಗಲಿದೆ ಕೇಂದ್ರ ನೌಕರರ ಸಂಬಳ : ಸಂಪೂರ್ಣ ಲೆಕ್ಕಾಚಾರ ಇಲ್ಲಿದೆ ನೋಡಿ.
ರೈತರ ಆದಾಯವನ್ನು ದ್ವಿಗುಣಗೊಳಿಸುವಲ್ಲಿ ಪ್ರಧಾನಿ ವಿಫಲವಾಗಿರುವುದರಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಬಿಜೆಪಿ ಸರ್ಕಾರ ಕಾರಿಡಾರ್ ಆರಂಭಕ್ಕೆ ನಾಂದಿ ಹಾಡಲು ಸರಣಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಆರೋಪಿಸಿದರು.ರೈತರ ಆದಾಯ ದ್ವಿಗುಣಗೊಳಿಸುವ ಭರವಸೆ ನೀಡಿದವರು ಯಾರು ಎಂಬುದು ನಿಮಗೆಲ್ಲ ಗೊತ್ತೇ ಇದೆ, ಇಂದು ಬೆಲೆ ಏರಿಕೆಯಿಂದ ರಸಗೊಬ್ಬರ ಸಿಗುತ್ತಿಲ್ಲ, ಹೀಗಾದರೆ ರೈತರ ಆದಾಯ ದ್ವಿಗುಣವಾಗುವುದು ಹೇಗೆ? ಎಂದು ಅವರು ಪ್ರಶ್ನಿಸಿದರು.
ಇದನ್ನೂ ಓದಿ: Deepika Padukone : ಪ್ರಭಾಸ್ ಜೊತೆ ಸಿನಿಮಾ ಕೆಲಸ ಆರಂಭಿಸಿದ ದೀಪಿಕಾ : ಇದರಲ್ಲಿ ಬಿಗ್ ಬಿ ಕೂಡ ಇದ್ದಾರೆ!
'ಸಾರ್ವಜನಿಕರು ಈ ಪ್ರಶ್ನೆಯನ್ನು ಕೇಳಬಾರದು ಎಂಬ ಕಾರಣಕ್ಕಾಗಿ ಅವರು ಕಾಶಿ ವಿಶ್ವನಾಥ್ ಕಾರಿಡಾರ್ ಅನ್ನು ತರುತ್ತಿದ್ದಾರೆ ಮತ್ತು ಕಾಶಿ ವಿಶ್ವನಾಥ ಕಾರಿಡಾರ್ ಅನ್ನು ಅಂಗೀಕರಿಸಿದ ಯಾವುದೇ ಕ್ಯಾಬಿನೆಟ್ ಇದ್ದರೆ ಅದು ಸಮಾಜವಾದಿ ಪಕ್ಷದ ಸರ್ಕಾರ.ನಾವು ನಿಮಗೆ ದಾಖಲೆಗಳನ್ನು ನೀಡುತ್ತೇವೆ.ಏಕೆಂದರೆ ಈ ಬಾರಿ ನಾವು ಪುರಾವೆಯೊಂದಿಗೆ ಮಾತನಾಡುತ್ತೇವೆ' ಎಂದು ಅವರು ಹೇಳಿದರು.
ಡಿಸೆಂಬರ್ 13 ರಂದು ಐಕಾನಿಕ್ ದಶಾಶ್ವಮೇಧ ಘಾಟ್ ಬಳಿಯ ಐತಿಹಾಸಿಕ ಕಾಶಿ ವಿಶ್ವನಾಥ ದೇವಾಲಯದ ಸುತ್ತಮುತ್ತಲಿನ ಅತ್ಯಾಧುನಿಕ ಮೂಲಸೌಕರ್ಯ ಉದ್ಘಾಟನೆಯು ಮುಂದಿನ ವರ್ಷದ ಆರಂಭದಲ್ಲಿ ಯುಪಿಯಲ್ಲಿ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಬರುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.