ಲಕ್ನೋ: ರಾಮಮಂದಿರದ ಹೆಸರಿನಲ್ಲೇ ಅಧಿಕಾರದ ಚುಕ್ಕಾಣಿ ಹಿಡಿದ ಬಿಜೆಪಿ ಯೋಜನೆಗೆ ಪರ್ಯಾಯವಾಗಿ ಸಮಾಜವಾದಿ ಪಕ್ಷ ಈಗ ವಿಷ್ನು ಮಂದಿರವನ್ನು ನಿರ್ಮಿಸಲು ಮುಂದಾಗಿದೆ.


COMMERCIAL BREAK
SCROLL TO CONTINUE READING

ಕಾಂಬೋಡಿಯಾದಲ್ಲಿರುವ ದೇವಸ್ಥಾನದ ಸಂಕೀರ್ಣ ರೀತಿಯಲ್ಲಿ ಈ ವಿಷ್ಣು ದೇವಸ್ಥಾನವನ್ನು ಸಮಾಜವಾದಿ ಪಕ್ಷವು ಅಧಿಕಾರಕ್ಕೆ ಬಂದರೆ ನಿರ್ಮಿಸುವುದಾಗಿ ತಿಳಿಸಿದೆ.


ಈ ಕುರಿತಾಗಿ ಮಾತನಾಡಿದ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ ಯಾದವ್ " ನಾವು ಇತ್ವಾ ಹತ್ತಿರ 2 ಸಾವಿರ ಎಕರೆ ಪ್ರದೇಶದಲ್ಲಿ ನಾವು ವಿಷ್ಣು ಹೆಸರಿನಲ್ಲಿ  ನಗರವನ್ನು ಅಭಿವೃದ್ದಿಪಡಿಸುತ್ತೇವೆ.ಚಂಬಲ್ ಕಣಿವೆಯ ಹತ್ತಿರ ಸಾಕಷ್ಟು ಜಾಗವಿದ್ದು,ಈ ನಗರದಲ್ಲಿ ಅಂಗೋಟ ವಾಟ್ ದೇವಸ್ಥಾನದ ಮಾದರಿಯಲ್ಲಿ  ದೇವಸ್ಥಾನವನ್ನು ಕಟ್ಟಲಾಗುತ್ತದೆ" ಎಂದು ಘೋಷಿಸಿದರು.


ಅಖಿಲೇಶ್ ಅವರ ಹೇಳಿಕೆಯು ಪ್ರಮುಖವಾಗಿ ಇತ್ತೀಚಿಗೆ  ಉತ್ತರ ಪ್ರದೇಶದ  ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ರಾಮ ಮಂದಿರ ಕಟ್ಟುವ ವಿಚಾರವಾಗಿ ನೀಡಿದ ಹೇಳಿಕೆಯ ನಂತರ ಬಂದಿದೆ.ಮೌರ್ಯ ಅವರು ಅಗತ್ಯ ಬಿದ್ದರೆ  ಪಾರ್ಲಿಮೆಂಟ್ ನಲ್ಲಿ  ರಾಮಮಂದಿರ ಕಟ್ಟುವ ವಿಚಾರವಾಗಿ ಮಸೂದೆಯನ್ನು ತರುವ ಅಗತ್ಯವಿದೆ.ಮಂದಿರ ಕಟ್ಟುವ ವಿಚಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದ್ದರು.