ಮೊದಲನೇ ವಿಧಾನಸಭಾ ಚುನಾವಣೆಯಲ್ಲಿ ಅಖಿಲೇಶ್ ಯಾದವ್ ಗೆ ಪ್ರಚಂಡ ಗೆಲುವು...!
ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ತಮ್ಮ ಕುಟುಂಬದ ಭದ್ರಕೋಟೆಯಾದ ಮೈನ್‌ಪುರಿಯ ಕರ್ಹಾಲ್‌ನಿಂದ ತಮ್ಮ ಚೊಚ್ಚಲ ರಾಜ್ಯ ವಿಧಾನಸಭಾ ಚುನಾವಣೆ (UP Assembly Elections 2022) ಯಲ್ಲಿ ಬಿಜೆಪಿಯ ಎಸ್‌ಪಿ ಸಿಂಗ್ ಬಘೇಲ್ ಅವರನ್ನು 67,000 ಮತಗಳಿಂದ ಸೋಲಿಸಿದ್ದಾರೆ.
ನವದೆಹಲಿ: ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ತಮ್ಮ ಕುಟುಂಬದ ಭದ್ರಕೋಟೆಯಾದ ಮೈನ್‌ಪುರಿಯ ಕರ್ಹಾಲ್‌ನಿಂದ ತಮ್ಮ ಚೊಚ್ಚಲ ರಾಜ್ಯ ವಿಧಾನಸಭಾ ಚುನಾವಣೆ (UP Assembly Elections 2022) ಯಲ್ಲಿ ಬಿಜೆಪಿಯ ಎಸ್‌ಪಿ ಸಿಂಗ್ ಬಘೇಲ್ ಅವರನ್ನು 67,000 ಮತಗಳಿಂದ ಸೋಲಿಸಿದ್ದಾರೆ.
ಅಖಿಲೇಶ್ ಯಾದವ್ ಅವರು 1.47 ಲಕ್ಷ ಮತಗಳನ್ನು ಪಡೆದಿದ್ದು, ಬಘೇಲ್ ಅವರ 80,045 ಮತಗಳನ್ನು ಗಳಿಸಿದ್ದಾರೆ.ಅವರು ಕನೌಜ್‌ನಿಂದ ಮೂರು ಬಾರಿ ಲೋಕಸಭಾ ಸಂಸದರಾಗಿದ್ದಾರೆ,ಈಗ ಅವರು ಶಾಸಕರಾಗಿ ಮುಂದುವರೆಯಬೇಕಾದರೆ ಈಗ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗಿದೆ.
ಇದನ್ನೂ ಓದಿ: ಪಂಚರಾಜ್ಯ ಫಲಿತಾಂಶ.. ಆತ್ಮಾವಲೋಕನಕ್ಕೆ ಶೀಘ್ರದಲ್ಲೇ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ!
ಈ ಬಾರಿ ಯೋಗಿ ಆದಿತ್ಯನಾಥ್ ಸರ್ಕಾರಕ್ಕೆ ಸವಾಲು ಹಾಕಲು ಜಯಂತ್ ಚೌಧರಿ ಅವರ ರಾಷ್ಟ್ರೀಯ ಲೋಕದಳ ಮತ್ತು ಓಂ ಪ್ರಕಾಶ್ ರಾಜ್‌ಭರ್ ಅವರ ಸುಹೇಲ್‌ದೇವ್ ಭಾರತೀಯ ಸಮಾಜ ಪಕ್ಷ ಸೇರಿದಂತೆ ಪ್ರಾದೇಶಿಕ ಪಕ್ಷಗಳ 'ಕಾಮನಬಿಲ್ಲು' ಮೈತ್ರಿಯನ್ನು ಒಟ್ಟುಗೂಡಿಸಿದ್ದ ಅವರು ಬಿಜೆಪಿಗೆ ಸರ್ಕಾರಕ್ಕೆ ಅತಿ ದೊಡ್ಡ ಪ್ರತಿಸ್ಪರ್ಧಿಯಾಗಿ ಪರಿಣಮಿಸಿದ್ದರು.
ಇದನ್ನೂ ಓದಿ: ಶೀಘ್ರದಲ್ಲೇ ಆಮ್ ಆದ್ಮಿ ಪಕ್ಷಕ್ಕೆ ರಾಷ್ಟ್ರೀಯ ಪಕ್ಷದ ಸ್ಥಾನಮಾನ..!
ಇನ್ನೊಂದೆಡೆಗೆ ಸಿಎಂ ಯೋಗಿ ಆದಿತ್ಯನಾಥ್ ಅವರು ಚೊಚ್ಚಲ ವಿಧಾನಸಭೆ ಚುನಾವಣೆ (Election Result 2022)ಯಲ್ಲಿ ಗೋರಖ್ ಪುರ ನಗರ ಕ್ಷೇತ್ರದಿಂದ ಸಮಾಜವಾದಿ ಪಕ್ಷದ ಸುಭಾವತಿ ಶುಕ್ಲಾ ಅವರನ್ನು 90,000 ಮತಗಳಿಂದ ಸೋಲಿಸಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.