Akhilesh Yadav: ಇಂತಹ ಜನರು ಎಸ್‌ಪಿಗೆ ಮತ ಹಾಕಬೇಡಿ- ಅಖಿಲೇಶ್ ಯಾದವ್
UP Assembly Election 2022: ಎಲ್ಲಾ ವರ್ಗದ ಜನರ ಬೆಂಬಲ ನಮ್ಮ ಪಕ್ಷಕ್ಕೆ ಸಿಗುತ್ತಿದೆ ಎಂದು ಎಸ್‌ಪಿ ವರಿಷ್ಠ ಅಖಿಲೇಶ್ ಯಾದವ್ ಹೇಳಿದ್ದಾರೆ.
UP Assembly Election 2022: ಬರೇಲಿ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ನಡುವೆಯೇ ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್ ದೊಡ್ಡ ಹೇಳಿಕೆ ನೀಡಿದ್ದಾರೆ. ಪಕ್ಷದ ಪ್ರಚಾರಕ್ಕಾಗಿ ಉತ್ತರಪ್ರದೇಶದ ಬರೇಲಿಗೆ ಆಗಮಿಸಿದ್ದ ಅಖಿಲೇಶ್ ಯಾದವ್, ಅಲ್ಲಿ ಕಾನೂನು ಉಲ್ಲಂಘಿಸುವವರು ಸಮಾಜವಾದಿ ಪಕ್ಷಕ್ಕೆ (ಎಸ್‌ಪಿ) ಮತ ಹಾಕಬಾರದು ಎಂದು ಹೇಳಿದರು.
ಫೆಬ್ರವರಿ 10 ರಂದೇ ಫಲಿತಾಂಶ ಬಂದಿದೆ:
ಕಾನೂನು ಉಲ್ಲಂಘಿಸುವವರು ಎಸ್‌ಪಿಗೆ ಮತ ಹಾಕಬಾರದು ಎಂದು ಎಸ್‌ಪಿ ವರಿಷ್ಠ ಅಖಿಲೇಶ್ ಯಾದವ್ (Akhilesh Yadav) ಹೇಳಿದ್ದಾರೆ. ಮೊದಲ ಹಂತದ ಮತದಾನದ ನಂತರ ಫಲಿತಾಂಶ ಬಂದಿರುವುದು ಮಾರ್ಚ್ 10ಕ್ಕೆ ಅಲ್ಲ ಫೆಬ್ರವರಿ 10ಕ್ಕೆ. ಈ ಬಾರಿ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾಗಲಿದೆ. ರೈತರು, ಯುವಕರು ಹಾಗೂ ಎಲ್ಲ ವರ್ಗದ ಜನರ ಬೆಂಬಲ ನಮಗಿದೆ ಎಂದ ಅಖಿಲೇಶ್ ಯಾದವ್, ಇದೇ ಸಂದರ್ಭದಲ್ಲಿ ಡಬಲ್ ಇಂಜಿನ್ ಸರ್ಕಾರ ಭ್ರಷ್ಟಾಚಾರವನ್ನು ದ್ವಿಗುಣಗೊಳಿಸುವ ಕೆಲಸವನ್ನು ಮಾಡಿದೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿದರು.
ಇದನ್ನೂ ಓದಿ- Lakhimpur Kheri case: ಆಶಿಶ್ ಮಿಶ್ರಾಗೆ ಜಾಮೀನು ಮಂಜೂರು
ಮೊದಲ ಹಂತದ ಮತದಾನ ಮುಕ್ತಾಯವಾಗಿದೆ:
ಚುನಾವಣಾ ಆಯೋಗದ ಪ್ರಕಾರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ (Uttar Pradesh Assembly Election) ಮೊದಲ ಹಂತದ ಮತದಾನದಲ್ಲಿ ಗುರುವಾರ ಶೇ.60.17 ರಷ್ಟು ಮತದಾನವಾಗಿದೆ. ಮತದಾನ ನಡೆದ 11 ಜಿಲ್ಲೆಗಳ ಪೈಕಿ ಆಗ್ರಾದಲ್ಲಿ ಶೇ. 60.23, ಅಲಿಗಢದಲ್ಲಿ ಶೇ. 60.49, ಬಾಗ್‌ಪತ್‌ನಲ್ಲಿ ಶೇ. 61.25, ಬುಲಂದ್‌ಶಹರ್‌ನಲ್ಲಿ ಶೇ. 60.57, ಗೌತಮ್ ಬುದ್ಧ ನಗರದಲ್ಲಿ ಶೇ. 54.38, ಗಾಜಿಯಾಬಾದ್‌ನಲ್ಲಿ ಶೇ. 52.43 ಮತ್ತು ಹಾಪುರ್‌ನಲ್ಲಿ ಶೇ. 60.53 ರಷ್ಟು ಮತದಾನವಾಗಿದೆ.
ಮಥುರಾ-ಮೀರತ್‌ನಲ್ಲಿ ಎಷ್ಟು ಮತದಾನ ನಡೆದಿದೆ?
ಮಥುರಾದಲ್ಲಿ ಶೇ. 62.90, ಮೀರತ್‌ನಲ್ಲಿ ಶೇ. 60, ಮುಜಾಫರ್‌ನಗರದಲ್ಲಿ ಶೇ. 65.32 ಮತ್ತು ಶಾಮ್ಲಿಯಲ್ಲಿ ಶೇ. 66.14 ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗದ ಅಂಕಿಅಂಶಗಳು ತೋರಿಸುತ್ತವೆ.
ಇದನ್ನೂ ಓದಿ- ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದ ದಿ ಗ್ರೇಟ್ ಖಲಿ
ಉತ್ತರ ಪ್ರದೇಶ ವಿಧಾನಸಭೆಯ 403 ಸ್ಥಾನಗಳ ಪೈಕಿ ಏಳು ಹಂತದ ಚುನಾವಣೆಯ ಮೊದಲ ಹಂತದಲ್ಲಿ 58 ಸ್ಥಾನಗಳಿಗೆ ಗುರುವಾರ ಮತದಾನ ನಡೆಯಿತು. ಈ ಹಂತದಲ್ಲಿ ಒಟ್ಟು 634 ಅಭ್ಯರ್ಥಿಗಳು ಕಣದಲ್ಲಿದ್ದು, 73 ಮಂದಿ ಮಹಿಳಾ ಅಭ್ಯರ್ಥಿಗಳಿದ್ದರು. ಎರಡನೇ ಹಂತದ ಮತದಾನ ಫೆಬ್ರವರಿ 14 ರಂದು ನಡೆಯಲಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.