ಮದ್ಯ ಪ್ರಿಯರಿಗೆ ಸರ್ಕಾರದಿಂದ ಬಿಗ್ ಶಾಕ್..!! ರಾಜ್ಯದ ಈ ಭಾಗದಲ್ಲಿ ಮದ್ಯ ಮಾರಾಟ ನಿಷೇಧ
ಇದು ಮದ್ಯ ವ್ಯಸನಿಗಳಿಗೆ ಶಾಕ್ ನೀಡುವ ಸುದ್ದಿ... ರಾಜ್ಯದ ಈ ಭಾಗಗಳಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ... ಸರ್ಕಾರ ಈ ನಿರ್ಧಾರ ಕೈಗೊಳ್ಳಲು ಕಾರಣವೇನು? ಹೆಚ್ಚಿನ ಮಾಹಿತಿ ಈ ಕೆಳಗಿದೆ ನೋಡಿ..
Viral News : ಈಗ ನಾವು ಮಾತನಾಡಲು ಹೊರಟಿರುವ ಗ್ರಾಮ ಆದರ್ಶ ಗ್ರಾಮ. ಏಕೆಂದರೆ ಈ ಗ್ರಾಮದಲ್ಲಿ ಯಾರೂ ಮದ್ಯ ಸೇವಿಸುವುದಿಲ್ಲ. ಹೌದು.. ತೆಲಂಗಾಣ ರಾಜ್ಯದ ಸಂಗಾರೆಡ್ಡಿ ಜಿಲ್ಲೆಯ ದಾಸ್ ಗಡ್ಡಾ ಗಿರಿಜನ ತಾಂಡಾಗಳಲ್ಲಿ ಮದ್ಯ ಸೇವನೆ ನಿಷೇಧಿಸಲಾಗಿದೆ. ಈ ಗಿರಿಜನ ತಾಂಡಾದಲ್ಲಿ ಕಳೆದ 30 ವರ್ಷಗಳಿಂದ ಮದ್ಯಪಾನ ನಿಷೇಧಿಸಲಾಗಿದೆ.
ಈ ಊರಿನಲ್ಲಿ ಪ್ರಸಿದ್ಧ ಜಗದಂಬಾ ಭವಾನಿ ದೇವಸ್ಥಾನ ಇದೆ.. ಇದನ್ನು 30 ವರ್ಷಗಳ ಹಿಂದೆ ನಿರ್ಮಿಸಲಾಗಿದೆ. ಇಲ್ಲಿ ಆದಿವಾಸಿಗಳು ಜಾತಿ ದೇವತೆ ಜಗದಂಬೆಯನ್ನು ಪೂಜಿಸಿ ಅತ್ಯಂತ ಸಂಭ್ರಮದಿಂದ ನವರಾತ್ರಿಯನ್ನು ಆಚರಿಸುತ್ತಾರೆ.. ಮನೆ ದೇವರಿಗೆ ಗೌರವ ನೀಡುವ ಸಲುವಾಗಿ ಈ ತಾಂಡಾದಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ.
ಇದನ್ನೂ ಓದಿ: BIGG BOSS ಇತಿಹಾಸದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಸ್ಪರ್ಧಿ ಯಾರು ಗೊತ್ತೇ? ಹೆಸರು ಕೇಳಿದ್ರೆ ಶಾಕ್ ಆಗ್ತೀರಾ!!
ಕಳೆದ ಮುನ್ನೂರು ವರ್ಷಗಳಿಂದ ಈ ತಾಂಡಾದಲ್ಲಿ ದಾಸ್ ನಾಯಕ್ ಕುಟುಂಬ ವಾಸವಾಗಿತ್ತು. ಅಂದಿನಿಂದ, ಆ ಕುಟುಂಬವು 1000 ಜನಸಂಖ್ಯೆಯನ್ನು ಹೊಂದಿದೆ. ಹಾಗಾಗಿ ಈ ತಾಂಡಾಕ್ಕೆ ದಾಸ್ ಗಡ್ಡ ತಾಂಡಾ ಎಂದು ನಾಮಕರಣ ಮಾಡಲಾಗಿದೆ. ಕಳೆದ 30 ವರ್ಷಗಳಿಂದ ಈ ತಾಂಡಾದಲ್ಲಿ ಮದ್ಯ ಸೇವನೆ ಮಾಡುತ್ತಿಲ್ಲ...
ಮನೆ ದೇವರು ಜಗದಂಬಾ ಭವಾನಿ ದೇವಸ್ಥಾನ ಕಟ್ಟಿದಾಗ ಮದ್ಯಪಾನ ನಿಷೇಧ ಮಾಡಬೇಕು ಎಂದು ಹಿರಿಯರು ಹೇಳಿದ್ದರಿಂದ ತಾಂಡಾ ನಿವಾಸಿಗಳು ಒಗ್ಗಟ್ಟಾಗಿ ಈ ನಿರ್ಧಾರ ಕೈಗೊಂಡಿದ್ದೇವೆ.. ಈ ದಾಸು ಗಡ್ಡ ತಾಂಡಾದ ದಾಸು ನಾಯಕ್ ಅವರು ಜಗದಂಬಾ ಸೇವಾಲಾಲ್ ಮಹಾರಾಜರನ್ನು ಕುಟುಂಬ ಸಮೇತ ಪೂಜೆ ಮಾಡುವುದರಿಂದ ನಮ್ಮ ಪರಂಪರೆಯಲ್ಲಿ ಯಾರಿಗೂ ಮದ್ಯಪಾನ ಮಾಡಲು ಅವಕಾಶವಿಲ್ಲ ಎಂದು News18 ತೆಲುಗು ವಾಹಿನಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ...
ಅದೇ ರೀತಿ ಈ ತಾಂಡಾದಲ್ಲಿ ದಸರಾ ನವರಾತ್ರಿಯನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ.. ಈ ದಸರಾ ಹಬ್ಬದ 9 ದಿನ ಉಪವಾಸವಿದ್ದು ದೇವಿಯ ಆರಾಧನೆ ಮಾಡಲಾಗುತ್ತದೆ. ಈ ಗ್ರಾಮದಲ್ಲಿ ಮಹಿಳೆಯರು ಕೂಡ ಪ್ರತಿದಿನ ದೇವಿಗೆ ನೈವೇದ್ಯ ಅರ್ಪಿಸಿ ನಂತರ ಊಟ ಮಾಡುತ್ತಾರೆ ಎನ್ನುತ್ತಾರೆ ಗ್ರಾಮಸ್ಥರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.