ಈ ರಾಜ್ಯದಲ್ಲಿ ‘ಎಣ್ಣೆ’ ಬ್ಯಾನ್, ಆದರೂ ‘ಡ್ರಿಂಕ್ಸ್’ ವಿಚಾರದಲ್ಲಿ ಮಹಿಳೆಯರೇ ಫಸ್ಟ್..!
ಗುಜರಾತಿನಲ್ಲಿ ಸಂಪೂರ್ಣ ಪಾನ ನಿಷೇಧ ಜಾರಿಯಲ್ಲಿದೆ. ಈ ರಾಜ್ಯದಲ್ಲಿ ಆಲ್ಕೋಹಾಲ್ ಉತ್ಪಾದನೆ, ಮಾರಾಟ ಮತ್ತು ಬಳಕೆಯನ್ನು ಸಂಪೂರ್ಣ ನಿಷೇಧಿಸಲಾಗಿದೆ.
ಅಹಮದಾಬಾದ್ : ಇದು ತುಂಬಾ ಸ್ವಾರಸ್ಯಕರ ‘ಎಣ್ಣೆ’ಯ ವಿಷಯ. ದೇಶದಲ್ಲಿ ಐದು ರಾಜ್ಯಗಳಲ್ಲಿ ಪಾನ ನಿಷೇಧ ಜಾರಿಯಲ್ಲಿದೆ. ಅದರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ತವರೂರು ಗುಜರಾತ್ ಕೂಡಾ ಸೇರಿದೆ. ಗುಜರಾತಿನಲ್ಲಿ (Gujarat) ಸಂಪೂರ್ಣ ಪಾನ ನಿಷೇಧ ಜಾರಿಯಲ್ಲಿದೆ. ಈ ರಾಜ್ಯದಲ್ಲಿ ಆಲ್ಕೋಹಾಲ್ (alcohol ) ಉತ್ಪಾದನೆ, ಮಾರಾಟ ಮತ್ತು ಬಳಕೆಯನ್ನು ಸಂಪೂರ್ಣ ನಿಷೇಧಿಸಲಾಗಿದೆ. ಅದನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಬರಲಾಗುತ್ತದೆ
‘ಡ್ರಿಂಕ್ಸ್’ ವಿಚಾರದಲ್ಲಿ ಮಹಿಳೆಯರೇ ಫಸ್ಟ್..!
ಇದೀಗ 2019-20ರ ಸಾಲಿನ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ (NFHS) ವರದಿಯೊಂದು ಬಂದಿದೆ. ಅದರ ವರದಿ ಪ್ರಕಾರ ಕಳೆದ ನಾಲ್ಕು ವರ್ಷಗಳಲ್ಲಿ ಗುಜರಾತಿನಲ್ಲಿ(Gujarat) ‘ಎಣ್ಣೆ’ ಹೊಡಿಯುವ ಮಹಿಳೆಯರ ಸಂಖ್ಯೆ (women drinkers) ದುಪ್ಪಟ್ಟಾಗಿದೆಯಂತೆ. ‘ಡ್ರಿಂಕ್ಸ್’ ಮಾಡೋ ವಿಚಾರದಲ್ಲಿ ಮಹಿಳೆಯರೇ ಫಸ್ಟ್ ಎಂದು ಹೇಳುತ್ತಿದೆ ಈ ವರದಿ.
ಇದನ್ನೂ ಓದಿ : ಹಕ್ಕಿ ಜ್ವರದ ಭೀತಿ: ಇನ್ಮುಂದೆ ಇಲ್ಲಿ ಚಿಕನ್ ಮಾರುವಂತಿಲ್ಲ...!
ಒಟ್ಟು 33,343 ಮಹಿಳೆಯರು (Women) ಮತ್ತು 5351 ಪುರುಷರನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು. 2015 – 16ರಲ್ಲೂ ಇದೇ ರೀತಿಯ ಸಮೀಕ್ಷೆ ಮಾಡಲಾಗಿತ್ತು. ಈ ಸಮೀಕ್ಷೆಯಲ್ಲಿ 68 ಮಹಿಳೆಯರು ಮದ್ಯ ಸೇವಿಸುತ್ತಿರುವುದಾಗಿ ಹೇಳಿಕೊಂಡಿದ್ದರು. ಇದೀಗ ಈ ಸಂಖ್ಯೆ 68ರಿಂದ 200 ಕ್ಕೆ ಏರಿದೆ. 2015 – 16ರ ಸಮೀಕ್ಷೆಯಲ್ಲಿ (Survey) 618 ಪುರುಷರು ಮದ್ಯ ಸೇವಿಸುತ್ತಿರುವುದಾಗಿ ಹೇಳಿಕೊಂಡಿದ್ದರು. ಇದೀಗ ಅವರ ಸಂಖ್ಯೆ 310ಕ್ಕೆ ಏರಿದೆ.
ಕಿಕ್ಕೇರಿಸುವ ಪಾರ್ಟಿ ಸಂಸ್ಕೃತಿ ಕಾರಣ:
ಸಮಾಜ ಬದಲಾಗುತ್ತಿದೆ. ಜೊತೆಗೆ ಪಾರ್ಟಿ(Party) ಕಲ್ಚರ್ ಜೋರಾಗುತ್ತಿದೆ. ಪಾರ್ಟಿ ಸಂಸ್ಕೃತಿ ಮತ್ತು ಮಹಿಳೆಯರು ಮದ್ಯ ಸೇವಿಸುವುದನ್ನು ಸಮಾಜ (Society) ಒಪ್ಪುತ್ತಿರುವುದೇ ಈ ಬದಲಾವಣೆಗೆ ಪ್ರಮುಖ ಕಾರಣ ಎನ್ನಲಾಗಿದೆ. ಮೊದಲು ಮದ್ಯ ಸೇವನೆಗೆ ಪುರುಷರು ರಾಜ್ಯದ ಹೊರಗೆ ಹೋಗುತ್ತಿದ್ದರು. ಈಗ ಪಾರ್ಟಿ ಕಲ್ಚರ್ ಬಲವಾಗಿ ಬೇರೂರಿರುವುದರಿಂದ ಎಣ್ಣೆ ಹೊಡೆಯುವ ಮಹಿಳೆಯರ ಸಂಖ್ಯೆ ಹೆಚ್ಚಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಗಾಂಧಿನಾಡಿನ ಈ ಪರಿವರ್ತನೆಯನ್ನು ಮಡಿವಂತರು ಹೇಗೆ ಸ್ವೀಕರಿಸುತ್ತಾರೋ ನೋಡಬೇಕು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.