ನವದೆಹಲಿ: ಭಾರತದಲ್ಲಿ ಮಾರಕ ನಾವೆಲ್ ಕೊರೊನಾ ವೈರಸ್ ಪ್ರಭಾವಕ್ಕೆ ಒಳಗಾಗುತ್ತಿರುವವರ ಸಂಖ್ಯೆಯಲ್ಲಿ ಕ್ರಮೇಣ ವೃದ್ಧಿಯಾಗುತ್ತಲೇ ಇದೆ. ಈ ವೈರಸ್ ಸೋಂಕಿಗೆ ಗುರಿಯಾದವರ ಸಂಖ್ಯೆ ಇದೀಗ 31ಕ್ಕೆ ತಲುಪಿದೆ. ಇಂದು ಕೇರಳದಲ್ಲಿ ಮತ್ತೆ ಐದು ಹೊಸ ಪ್ರಕರಣಗಳು ಬೆಳಕಿಗೆ ಬಂದಿವೆ. ಈ ವೈರಸ್ ನಿಂದ ನಿರ್ಮಾಣಗೊಂಡ ಭೀತಿಯ ಹಿನ್ನೆಲೆ ಜನರು ಇಂಟರ್ನೆಟ್ ಮುಖಾಂತರ ಹಬ್ಬುತ್ತಿರುವ ವದಂತಿಗಳನ್ನು ನಿಜವೆಂದು ಭಾವಿಸುತ್ತಿದ್ದಾರೆ. ಇಂತಹುದೇ ಒಂದು ವದಂತಿಯ ಪ್ರಕಾರ ಮದ್ಯ ಸೇವನೆಯಿಂದ ಕೊರೊನಾ ವೈರಸ್ ಸೋಂಕು ಸಾವನ್ನಪ್ಪುತ್ತದೆ ಎಂದು ಹೇಳಲಾಗುತ್ತಿದೆ. ಆದರೆ, ವಿಶ್ವ ಆರೋಗ್ಯ ಸಂಸ್ಥೆ ಈ ಕುರಿತಾದ ಸುಳ್ಳು ವದಂತಿಯನ್ನು ಅಲ್ಲಗಳೆದಿದೆ.


COMMERCIAL BREAK
SCROLL TO CONTINUE READING

CORONAVIRUS ಕುರಿತಾಗಿ ಹಬ್ಬುತ್ತಿರುವ ಸುಳ್ಳು ಸುದ್ದಿಗಳು ಹಾಗೂ ಕಾಲ್ಪನಿಕ ವರದಿಗಳನ್ನು ಹೊಡೆದು ಹಾಕಿರುವ ವಿಶ್ವ ಆರೋಗ್ಯ ಸಂಸ್ಥೆ, ಶರೀರದಲ್ಲಿ ಒಂದು ಬಾರಿಗೆ ಯಾವುದೇ ವೈರಸ್ ಪ್ರವೇಶಿಸಿದರೆ, ಕ್ಲೋರಿನ್ ಅಥವಾ ಅಲ್ಕೋಹಾಲ್ ಸಿಂಪಡಿಸುವುದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ಹೇಳಿದೆ. ಅಷ್ಟೇ ಅಲ್ಲ ಈ ಕುರಿತಾದ ಪದಾರ್ಥಗಳನ್ನು ಮುಖ, ಕಣ್ಣು ಹಾಗೂ ಬಟ್ಟೆಗಳ ಮೇಲೆ ಸಿಂಪದಿಸುವುದು ಶರೀರಕ್ಕೆ ಹಾನಿಕಾರಕ ಎಂದೂ ಕೂಡ WHO ಎಚ್ಚರಿಕೆ ನೀಡಿದೆ.


ಕ್ಲೋರಿನ್ ಹಾಗೂ ಅಲ್ಕೋಹಾಲ್ ಸಿಂಪಡನೆ ಭೂಮಿಯ ಮೇಲ್ಮೈ ಮೇಲಿನ ಕೀಟನಾಶಕ್ಕೆ ಲಾಭಕಾರಿಯಾಗಿದೆ. ಆದರೆ, ಇದನ್ನು  ತಜ್ಞರ ಸಲಹೆ ಪಡೆದು ಮಾಡಬೇಕು. ಕೊರೊನಾ ವೈರಸ್ ನಿಂದ ಪಾರಾಗಲು ನಿಮ್ಮ ಕೈಗಳನ್ನು ಪದೆ ಪದೆ ಶುಚಿಗೊಳಿಸಿ. ಹಾಗೂ ಅಲ್ಕೋಹಾಲ್ ಆಧಾರಿತ ಹ್ಯಾಂಡ್ ಸ್ಯಾನಿಟೈಸರ್ ಅನ್ನು ಕೇವಲ ನಿಮ್ಮ ಕೈಗಳ ಶುಚಿತ್ವಕ್ಕೆ ಮಾತ್ರ ಬಳಕೆ ಮಾಡಬೇಕು ಎಂದು ಸಂಸ್ಥೆ ಹೇಳಿದೆ.


ಕೇವಲ ಬಿಸಿ ನೀರಿನಿಂದ ಸ್ನಾನ ಮಾಡುವುದರಿಂದ ನೀವು ಕೊರೊನಾ ವೈರಸ್ ನಿಂದ ಪಾರಾಗಲು ಸಾಧ್ಯವಿಲ್ಲ. ಇದೆ ವೇಳೆ ಚೈನಾದಲ್ಲಿ ತಯಾರಿಸಲಾಗಿರುವ ವಸ್ತುಗಳಿಂದ ಈ ವೈರಸ್ ಹರಡುವುದಿಲ್ಲ ಎಂದು ಇದೇ ವೇಳೆ WHO ಸ್ಪಷ್ಟಪಡಿಸಿದೆ. ವಿಶ್ವಾದ್ಯಂತ ಈ ಮಾರಕ ಕೊರೊನಾ ವೈರಸ್ ದಾಳಿಗೆ ಇದುವರೆಗೆ ಸುಮಾರು 100,000ಕ್ಕಿಂತ ಅಧಿಕ ಜನರು ಪ್ರಭಾವಿತರಾಗಿದ್ದು, 3000 ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ.


ಕಳೆದ ಶನಿವಾರದವರೆಗೆ ವಿಶ್ವಾದ್ಯಂತ ಸುಮಾರು 101,492 ಪ್ರಕರಣಗಳು ಬೆಳಕಿಗೆ ಬಂದಿದ್ದು, 3,485 ಮಂದಿ ಸಾವನ್ನಪ್ಪಿದ್ದಾರೆ.