ನವದೆಹಲಿ: ಈ ಬಾರಿ ಫೆಬ್ರುವರಿ ತಿಂಗಳಿನಲ್ಲಿ ಒಟ್ಟು 29 ದಿನಗಳು ಬಂದಿವೆ. ಅವುಗಳಲ್ಲಿಯೂ ಕೂಡ ಒಟ್ಟು 12 ದಿನಗಳ ಕಾಲ ಬ್ಯಾಂಕ್ ಗಳು ಬಂದ್ ಇರಲಿವೆ. ಹೀಗಿರುವಾಗ ನೀವು ನಿಮ್ಮ ನಿತ್ಯದ ವ್ಯವಹಾರಗಳಲ್ಲಿ ತೊಂದರೆ ಅನುಭವಿಸುವ ಸಾಧ್ಯತೆ ಇದೆ. ಬ್ಯಾಂಕ್ ಗಳ ವತಿಯಿಂದ ನಡೆಸಲಾಗುತ್ತಿರುವ ದೀರ್ಘಕಾಲದ ಮುಷ್ಕರ ಹಾಗೂ ರಾಷ್ಟ್ರೀಯ ರಜೆಗಳ ಕಾರಣ ಮುಂದಿನ ತಿಂಗಳ ಬ್ಯಾಂಕ್ ಕೆಲಸಗಳನ್ನು ಮುಗಿಸಲು ಇಂದಿನಿಂದಲೇ ಪ್ರಾರಂಭಿಸಿ.


COMMERCIAL BREAK
SCROLL TO CONTINUE READING

ಬ್ಯಾಂಕ್ ಗಳು 12ದಿನಗಳ ಕಾಲ ಏಕೆ ಬಂದ್ ಇರಲಿವೆ?
ಬ್ಯಾಂಕ್ ನೌಕರರ ಒಕ್ಕೂಟ ವೇತನ ಹೆಚ್ಚಳ ಸೇರಿದಂತೆ ತನ್ನ ಇತರೆ ಬೇಡಿಕೆಗಳ ಈಡೇರಿಕೆಗಾಗಿ ಫೆಬ್ರುವರಿ 1,12,13 ಹಾಗೂ14ರಂದು ಮುಷ್ಕರ ನಡೆಸಲು ನಿರ್ಣಯ ಕೈಗೊಂಡಿದೆ. ಈ ದಿನಾಂಕಗಳನ್ನು ಹೊರತುಪಡಿಸಿದರೆ ಒಟ್ಟು ಆರು ದಿನಗಳು ರಾಷ್ಟ್ರೀಯ ರಜೆ ಇರುತ್ತದೆ (ಎರಡನೇ, ನಾಲ್ಕನೇ ಶನಿವಾರ ಹಾಗೂ ರವಿವಾರಗಳು). ಜೊತೆಗೆ ಫೆಬ್ರುವರಿ 21ಕ್ಕೆ ಮಹಾಶಿವರಾತ್ರಿ ರಜೆ ಇರಲಿದೆ. ಹೀಗಾಗಿ ತಿಂಗಳಿನಲ್ಲಿ ಒಟ್ಟು 12ದಿನಗಳ ಕಾಲ ಬ್ಯಾಂಕ್ ಗಳು ಬಂದ್ ಇರಲಿವೆ.


ಈ ರಜೆಗಳಲ್ಲಿ ನಿಮ್ಮ ಕೆಲಸಗಳನ್ನು ಹೇಗೆ ನಿರ್ವಹಿಸಬೇಕು?
ಈ ಸಂಭವನೀಯ ರಜೆಗಳ ಹಿನ್ನೆಲೆ ನೀವು ನಿಮ್ಮ ಎಲ್ಲ ಬ್ಯಾಂಕ್ ಕೆಲಸಗಳನ್ನು ಬ್ಯಾಂಕ್ ಗಳು ಕಾರ್ಯನಿರ್ವಹಿಸುವ ದಿನಗಳಂದೇ ಪೂರ್ಣಗೊಳಿಸಬೇಕು. ನಿಮ್ಮ ಮಾಸಿಕ ಕಂತುಗಳಿಗಾಗಿ ಮುಂಗಡವಾಗಿ ನಿಮ್ಮ ಖಾತೆಯಲ್ಲಿ ಹಣ ಠೇವಣಿ ಮಾಡಿ, ಚೆಕ್ ಬೌನ್ಸ್ ಆಗದಂತೆ ಮುಂಜಾಗ್ರತೆ ವಹಿಸಿ. ಟ್ಯಾಕ್ಸ್ ಗೆ ಸಂಬಂಧಿಸಿದ ಕೆಲಸಗಳನ್ನು ಅಂತಿಮ ದಿನಾಂಕದ ನಿರೀಕ್ಷೆ ಮಾಡದೆ, ಮೊದಲೇ ಪೂರ್ಣಗೊಳಿಸಿ. ಅವಶ್ಯಕ ಪೇಮೆಂಟ್ ಗಳಿಗಾಗಿ ಒಂದು ದಿನ ಮೊದಲು ಠೇವಣಿ ಮಾಡುವುದರಿಂದ ಬಚಾವಾಗಿ. ನಿಮ್ಮ ದಿನನಿತ್ಯದ ಖರ್ಚುಗಳಿಗಾಗಿ ಹಣವನ್ನು ಮೊದಲೇ ಡ್ರಾ ಮಾಡಿ ಇಟ್ಟುಕೊಳ್ಳಿ. ಏಕೆಂದರೆ ಬಂದ್ ATM ವಹಿವಾಟಿನ ಮೇಲೆ ನೇರ ಪರಿಣಾಮ ಬೀರಲಿದೆ. ಇಂತಹ ಸಂದರ್ಭಗಳಲ್ಲಿ ಕರೆನ್ಸಿ ಬಿಕ್ಕಟ್ಟು ಎದುರಾಗುವ ಸಾಧ್ಯತೆ ಇರುತ್ತದೆ.