ನವದೆಹಲಿ:ಅಲರ್ಟ್! ಒಂದು ವೇಳೆ ನೀವೂ ಕೂಡ Google Chromeನ ಬಳಕೆ ಮಾಡುತ್ತಿದ್ದರೆ, ಈ ಸುದ್ದಿ ನಿಮ್ಮ ಪಾಲಿಗೆ ಮಹತ್ವದ್ದಾಗಿದೆ. ಏಕೆಂದರೆ Google ತನ್ನ ಎಲ್ಲ ಬಳಕೆದಾರರಿಗೆ ಎಚ್ಚರಿಕೆಯಿಂದ ಇರಲು ಸೂಚಿಸಿದೆ. ಇತ್ತೀಚೆಗಷ್ಟೇ Google Chromeನಲ್ಲಿ ಹಲವು ನೂನ್ಯತೆಗಳನ್ನು ಗಮನಿಸಲಾಗಿದೆ. ಇದರಿಂದ ನಿಮ್ಮ ಪಿಸಿ ಅಥವಾ ಲ್ಯಾಪ್ ಟಾಪ್ ಗೆ ಹಾನಿಯಾಗುವ ಸಾಧ್ಯತೆ ಇದೆ. ಈ ನೂನ್ಯತೆಗಳನ್ನು ದೂರಗೊಳಿಸಲು ಇತ್ತೀಚೆಗಷ್ಟೇ ಗೂಗಲ್ ಕ್ರೋಮ್ ನ latest version 80.0.3987.122 ಬಿಡುಗಡೆಗೊಳಿಸಿದೆ. ಈ ಹೊಸ ಆವೃತ್ತಿಯನ್ನು ವಿಂಡೋಸ್, ಮ್ಯಾಕ್ ಹಾಗೂ ಲಿನಕ್ಸ್ ಬಳಕೆದಾರರಿಗೆ ಅಪ್ಡೇಟ್ ಮಾಡಲಾಗಿದೆ.


COMMERCIAL BREAK
SCROLL TO CONTINUE READING

ಕ್ರೋಮ್ ಅಪ್ಡೇಟ್ ಮಾಡುವುದು ಅವಶ್ಯಕವಾಗಿದೆ
ನಿಮ್ಮ ಕಂಪ್ಯೂಟರ್ ನಲ್ಲಿ ಕ್ರೋಮ್ ಅನ್ನು ಮೇಲ್ದರ್ಜೆಗೆ ಏರಿಸುವುದು ಅತ್ಯಾವಶ್ಯಕವಾಗಿದೆ. ಕ್ರೋಮ್ ನಲ್ಲಿರುವ ನ್ಯೂನ್ಯತೆಯನ್ನು ಟ್ರ್ಯಾಕ್ ಮಾಡಿ, ಸರಿಪಡಿಸಲು ಆರಂಭಿಸಿದೆ. ಆದರೆ, ಹ್ಯಾಕರ್ಸ್ ಗಳು ಈ ಮಧ್ಯೆ ಈ ನ್ಯೂನ್ಯತೆಯ ಲಾಭ ಪಡೆಯಲು ಆರಂಭಿಸಿದ್ದಾರೆ. ಈ ಕುರಿತು ತನ್ನ ಬ್ಲಾಗ್ ನಲ್ಲಿ ಗೂಗಲ್ ಈ ಕೊರತೆಯಿಂದ ಉಂಟಾಗುವ ಹಾನಿಯ ಕುರಿತು ಮಾಹಿತಿ ಹಂಚಿಕೊಂಡಿದೆ. ನಿಮ್ಮPCಯಿಂದ ಜಾವಾಸ್ಕ್ರಿಪ್ಟ್ ಅನ್ನು ಹ್ಯಾಕ್ ಮಾಡುವ ಕುರಿತು ತನ್ನ ಬ್ಲಾಗ್ ನಲ್ಲಿ ಗೂಗಲ್ ಉಲ್ಲೇಖಿಸಿದೆ. ಅಷ್ಟೇ ಅಲ್ಲ ನಿಮ್ಮ PCಯಲ್ಲಿ ಸೈಬರ್ ಕಳ್ಳರು Unrestricted ಕೋಡ್ ಕೂಡ ರನ್ ಮಾಡಬಹುದು ಎಂದು ಹೇಳಿದೆ.


ಗೂಗಲ್ ಕ್ರೋಮ್ ಅಪ್ಡೇಟ್ ಮಾಡುವುದು ಹೇಗೆ?
ನಿಮ್ಮ ಗೂಗಲ್ ಕ್ರೋಮ್ ನ ಮೇಲ್ಭಾಗದ ಮೂಲೆಯಲ್ಲಿ ಮೂರು ಡಾಟ್ ಗಳನ್ನು ನೀಡಲಾಗಿದೆ.
ಇದರ ಮೇಲೆ ಕ್ಲಿಕ್ಕಿಸಿ help ಮೇಲೆ ಕ್ಲಿಕ್ಕಿಸಿ, ನಂತರ About Chrome ಮೇಲೆ ಕ್ಲಿಕ್ಕಿಸಿ.
ಬಳಿಕ ಅಪ್ಡೇಟ್ to download ಹಾಗೂ install ಮೇಲೆ ಕ್ಲಿಕ್ಕಿಸಿ ಅನುಮತಿ ನೀಡಿ.
ವೆಬ್ ಅಕ್ಸಸ್ ಮಾಡಲು ಹೆಚ್ಚಿನ ಬಳಕೆದಾರರು chrome ಬಳಕೆ ಮಾಡುತ್ತಾರೆ.
ಇಂತಹುದರಲ್ಲಿ chrome ನಲ್ಲಿರುವ ಈ ದೋಷದಿಂದ ಕೋಟ್ಯಂತರ ಬಳಕೆದಾರರ ವೈಯಕ್ತಿಕ ಮಾಹಿತಿ ಸೋರಿಕೆಯಾಗುವ ಆತಂಕ ಎದುರಾಗಿದೆ.