ನವದೆಹಲಿ: ಇತ್ತೀಚಿಗೆ TIK TOK ವೇದಿಕೆಯ ಮೇಲೆ ಸ್ಕಲ್ ಬ್ರೋಕರ್ ಚಾಲೆಂಜ್ ಭಾರಿ ವೈರಲ್ ಆಗುತ್ತಿದ್ದು, ಭಾರಿ ಚರ್ಚೆ ಹುಟ್ಟುಹಾಕಿ ಯುವಕರನ್ನು ತನ್ನತ್ತ ಸೆಳೆಯುತ್ತಿದೆ. ಈ ಚಾಲೆಂಜ್ ಯಾರಾದರೊಬ್ಬರ ಪ್ರಾಣಕ್ಕೆ ಕುತ್ತು ತರುವ ಸಾಧ್ಯತೆ ಇದೆ ಎನ್ನಲಾಗಿದೆ. ಸೋಸಿಯಲ್ ಮೀಡಿಯಾದಲ್ಲಿ ಆರಂಭಗೊಂಡಿರುವ ಈ ಟ್ರೆಂಡ್ ನಿಮ್ಮನ್ನು ಜೀವನ ಪೂರ್ತಿ ವಿಲ್ ಚೇರ್ ಮೇಲೆ ಕೂರಿಸುವ ಸಾಧ್ಯತೆ ಇದೆ.


COMMERCIAL BREAK
SCROLL TO CONTINUE READING

ಏನಿದು ಸ್ಕಲ್ ಬ್ರೋಕರ್ ಚಾಲೆಂಜ್?
ಈ ಚಾಲೆಂಜ್ ನಲ್ಲಿ ಮೂವರು ಒಂದೇ ಲೈನ್ ನಲ್ಲಿ ನಿಂತುಕೊಳ್ಳುತ್ತಾರೆ. ಬಳಿಕ ಮಧ್ಯದಲ್ಲಿರುವವರನ್ನು ಜಿಗಿಯಲು ಹೇಳಲಾಗುತ್ತದೆ. ಬಳಿಕ ಆ ಯುವಕನ ಅಕ್ಕಪಕ್ಕದಲ್ಲಿ ನಿಂತ ಯುವಕರು ಆತನ ಎರಡೂ ಕಾಲುಗಳಿಗೆ ಒದೆಯುತ್ತಾರೆ. ಇದರಿಂದ ಮಧ್ಯದಲ್ಲಿರುವ ವ್ಯಕ್ತಿಯ ಬ್ಯಾಲೆನ್ಸ್ ತಪ್ಪಿ ಆತ ಹಿಂಬಾಗಕ್ಕೆ ಕುಸಿದು ಬೀಳುತ್ತಾನೆ. ಈ ರೀತಿ ತಲೆ ನೆಲಕ್ಕೆ ಅಪ್ಪಳಿಸಿ ಹಲವರು ಮೂರ್ಛೆ ಹೋಗಿದ್ದರೆ, ಇನ್ನೂ ಕೆಲವರ ತಲೆ ಬುರುಡೆಯಲ್ಲಿ ಬಿರುಕು ಬಿಟ್ಟಿವೆ. ಈ ಚಾಲೆಂಜ್ ನಿಂದ ಆಗುತ್ತಿರುವ ಹಾನಿಯ ಕಾರಣ ಹಲವರು ಈ ಚಾಲೆಂಜ್ ಅನ್ನು ಫಾಲೋ ಮಾಡಲಾರಂಭಿಸಿದ್ದಾರೆ.


ಈ ಚಾಲೆಂಜ್ ಭಾರಿ ವೈರಲ್ ಆಗುತ್ತಿರುವ ಹಿನ್ನೆಲೆ ಅಡ್ವೈಸರಿ ಜಾರಿಗೊಳಿಸಿರುವ Ministry of Electronics and information Technology, ಸಾಮಾಜಿಕ ಮಾಧ್ಯಮಗಳಾದ TikTok, ಯೂಟ್ಯೂಬ್, ಟ್ವಿಟ್ಟರ್ ಹಾಗೂ ಫೇಸ್ ಬುಕ್ ಸಂಸ್ಥೆಗಳಿಗೆ ಪತ್ರ ಬರೆದು ಈ ವಿಡಿಯೋಗಳನ್ನು ತೆಗೆದು ಹಾಕಲು ಮನವಿ ಮಾಡಿದೆ. ಈ ಚಾಲೆಂಜ್ ಕಾರಣ ವಿಶ್ವಾದ್ಯಂತ ಹಲವು ಜನರು ಗಾಯಗೊಂಡಿದ್ದಾರೆ.


ಅಷ್ಟೇ ಅಲ್ಲ ವೈದ್ಯರೂ ಕೂಡ ಯಾರೂ ಇಂತಹ ಚಾಲೆಂಜ್ ಅನ್ನು ಸ್ವೀಕರಿಸಬಾರದು ಎಂಬ ಎಚ್ಚರಿಕೆ ನೀಡಿದ್ದಾರೆ. ವೈದ್ಯರ ಪ್ರಕಾರ ತಲೆಗೂದಲು ಉದುರಿರುವವರ ತಲೆಗೆ ಇದರಿಂದ ಬಲವಾದ ಪೆಟ್ಟು ಬೀಳಲಿದ್ದು, ಕೀಲುಗಳು ಕೂಡ ಮುರಿತಕ್ಕೆ ಒಳಗಾಗುವ ಸಾಧ್ಯತೆ ಇದೆ. ಅಷ್ಟೇ ಯಾಕೆ ಆಕಸ್ಮಿಕವಾಗಿ ಬೀಳುವುದರಿಂದ ತಲೆಬುರುಡೆ ಒಡೆಯುವ ಸಾಧ್ಯತೆ ಕೂಡ ಇದೆ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ. ಇನ್ನೊಂದೆಡೆ ಬ್ಲೂ ವೆಲ್ ಚಾಲೆಂಜ್ ರೀತಿಯಲ್ಲೇ ಈ ಚಾಲೆಂಜ್ ವಿರುದ್ಧ ಕೂಡ ಕಠಿಣ ಕ್ರಮ ಕೈಗೊಳ್ಳುವ ಅವಶ್ಯಕತೆ ಇದೆ ಎಂಬ ಕೂಗೂ ಕೂಡ ಇದೀಗ ಕೇಳಿ ಬರಲಾರಂಭಿಸಿದೆ.