ALERT: DEBIT ಹಾಗೂ CREDIT ಕಾರ್ಡ್ ಗೆ ಸಂಬಂಧಿಸಿದ ಈ ಮಾಹಿತಿ ನಿಮಗೂ ತಿಳಿದಿರಲಿ
ಒಂದು ವೇಳೆ ನೀವು ನಿಮ್ಮ ಡೆಬಿಟ್ ಕಾರ್ಡ್ ಹಾಗೂ ಕ್ರೆಡಿಟ್ ಕಾರ್ಡ್ ನಿಂದ ಒಂದು ಬಾರಿಯೂ ಕೂಡ ಆನ್ಲೈನ್ ವ್ಯವಹಾರ ನಡೆಸಿಲ್ಲ ಎಂದಾದಲ್ಲಿ ಈ ಸುದ್ದಿ ನಿಮಗೆ ತಿಳಿಯುವುದು ಅವಶ್ಯಕವಾಗಿದೆ.
ಒಂದು ವೇಳೆ ನೀವು ನಿಮ್ಮ ಡೆಬಿಟ್ ಕಾರ್ಡ್ ಹಾಗೂ ಕ್ರೆಡಿಟ್ ಕಾರ್ಡ್ ನಿಂದ ಒಂದು ಬಾರಿಯೂ ಕೂಡ ಆನ್ಲೈನ್ ವ್ಯವಹಾರ ನಡೆಸಿಲ್ಲ ಎಂದಾದಲ್ಲಿ ಈ ಸುದ್ದಿ ನಿಮಗೆ ತಿಳಿಯುವುದು ಅವಶ್ಯಕವಾಗಿದೆ. ಏಕೆಂದರೆ ಮಾರ್ಚ್ 16ರ ನಂತರ ಭಾರತೀಯ ರಿಸರ್ವ್ ಬ್ಯಾಂಕ್ ನ ಆದೇಶ ಜಾರಿಗೆ ಬರಲಿದ್ದು, ಬಳಿಕ ನೀವು ನಿಮ್ಮ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ನಿಂದ ಯಾವುದೇ ಆನ್ಲೈನ್ ವ್ಯವಹಾರ ನಡೆಸುವಂತಿಲ್ಲ. ಜನವರಿ 15ರಂದು RBI ಜಾರಿಗೊಳಿಸಿರುವ ಆದೇಶದ ಪ್ರಕಾರ ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ ನ ಸುರಕ್ಷತೆಯನ್ನು ಹೆಚ್ಚಿಸಲು ಹಾಗೂ ಸೌಕರ್ಯಗಳನ್ನು ಹೆಚ್ಚಿಸಲು ಹಲವು ಘೋಷಣೆಗಳನ್ನು ಮಾಡಿತ್ತು.
ಈ ಕುರಿತು ಬ್ಯಾಂಕ್ ಗಳಿಗೆ ನಿರ್ದೇಶನ ನೀಡಿದ್ದ RBI ಯಾವುದೇ ಓರ್ವ ಗ್ರಾಹಕನಿಗೆ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ನೀಡಿದರೆ ಅದರಲ್ಲಿ ಕೇವಲ ATM ಹಾಗೂ PoS terminals ಗಳಲ್ಲಿ ವ್ಯವಹಾರ ನಡೆಸುವ ಸೌಲಭ್ಯ ಮಾತ್ರ ನೀಡಬೇಕು ಎಂದು ಹೇಳಿತ್ತು. ಅಷ್ಟೇ ಅಲ್ಲ ಅಂತಾರಾಷ್ಟ್ರೀಯ ವ್ಯವಹಾರ, ಆನ್ಲೈನ್ ವ್ಯವಹಾರ, card-not-present ವ್ಯವಹಾರ ಹಾಗೂ ಕಾಂಟಾಕ್ಟ್ ಲೆಸ್ ವ್ಯವಹಾರಕ್ಕಾಗಿ ಗ್ರಾಹಕರು ಖುದ್ದಾಗಿ ಈ ಸೇವೆಗಳನ್ನು ಪಡೆಯಬೇಕು ಎಂದು ಸೂಚಿಸಿತ್ತು.
RBIನ ಈ ಹೊಸ ನಿಯಮ ನೂತನವಾಗಿ ಜಾರಿಗೆ ಬರುವ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಗಳಿಗೆ ಮಾರ್ಚ್ 16, 2020ರಿಂದ ಅನ್ವಯಿಸಲಿದೆ. ಈಗಾಗಲೇ ಜಾರಿಯಲಿರುವ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಬಳಕೆದಾರರು ಯಾವ ವೈಶಿಷ್ಟ್ಯ ಬಳಸಬೇಕು ಅಥವಾ ಕೈಬಿಡಬೇಕು ಎಂಬುದನ್ನು ಆ ಕಾರ್ಡ್ ಮಾಲೀಕರೆ ನಿರ್ಧರಿಸಬೇಕು ಎಂದು RBI ಸೂಚಿಸಿದೆ. ಸದ್ಯ ಚಾಲ್ತಿಯಲ್ಲಿರುವ ಕಾರ್ಡ್ ಗಳಿಗೆ ಕಾರ್ಡ್ ಬಿಡುಗಡೆಗೊಳಿಸಿರುವ ಬ್ಯಾಂಕ್ ಗಳು ಕಾರ್ಡ್ ಗೆ ಇರುವ ಅಪಾಯಗಳನ್ನು ಪರಿಗಣಿಸಿ, card not present (ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ) ವ್ಯವಹಾರ, ಅಂತಾರಾಷ್ಟ್ರೀಯ ವ್ಯವಹಾರ ಹಾಗೂ ಕಾಂಟಾಕ್ಟ್ ಲೆಸ್ ವ್ಯವಹಾರಗಳ ಸೌಕರ್ಯ ಒದಗಿಸಬೇಕೆ ಅಥವಾ ಬೇಡವೇ ಎಂಬುದರ ಕುರಿತು ನಿರ್ಣಯ ಕೈಗೊಳ್ಳಬೇಕು ಎಂದು RBI ಹೇಳಿತ್ತು.
ಒಂದು ಈಗಾಗಲೇ ನೀವು ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಗಳನ್ನು ಹೊಂದಿದ್ದು, ಅದರಿಂದ ನೀವು ಆನ್ಲೈನ್ ವ್ಯವಹಾರ ಅಥವಾ ಅಂತಾರಾಷ್ಟ್ರೀಯ ಅಥವಾ ಕಾಂಟಾಕ್ಟ್ ಲೆಸ್ ವ್ಯವಹಾರ ನಡೆಸದೆ ಇದ್ದಲ್ಲಿ, ನಿಮ್ಮ ಕಾರ್ಡ್ ನಲ್ಲಿ ಈ ಸೌಕರ್ಯಗಳು ಸ್ಥಗಿತಗೊಳ್ಳಲಿವೆ.
ಮಾರ್ಚ್ 16 ರಿಂದ ಜಾರಿಗೆ ಬರುವ RBIನ ಈ ನಿಯಮ ಪ್ರಿಪೇಯ್ಡ್ ಗಿಫ್ಟ್ ಕಾರ್ಡ್ ಗಳಿಗೆ ಅನಿವಾರ್ಯವಲ್ಲ ಎಂಬುದು ಇಲ್ಲಿ ಗಮನಾರ್ಹ. ಹೆಚ್ಚಾಗುತ್ತಿರುವ ಸೈಬರ್ ಫ್ರಾಡ್ ಹಿನ್ನೆಲೆ RBI ನ ಈ ನಿಯಮ ಒಂದು ಮಹತ್ವಪೂರ್ಣ ಹೆಜ್ಜೆ ಎಂದೇ ಪರಿಗಣಿಸಲಾಗುತ್ತಿದೆ.