ನವದೆಹಲಿ:ಒಂದು ವೇಳೆ ನಿಮ್ಮ ಮೊಬೈಲ್ ಗೆ ಯಾವುದಾದರು ಲಿಂಕ್ ಮೆಸೇಜ್ ಬಂದರೆ ಅಪ್ಪಿತಪ್ಪಿಯೂ ಕೂಡ ಅಂದನ್ನು ಕ್ಲಿಕ್ಕಿಸಬೇಡಿ. ತಪ್ಪಿ ಒಂದು ವೇಳೆ ನೀವು ಕ್ಲಿಕ್ಕಿಸಿದರೂ ಕೂಡ ಅದರಲ್ಲಿ ನೀಡಲಾಗಿರುವ ಸಾಫ್ಟ್ ವೇರ್ ಅಪ್ಡೇಟ್ ಡೌನ್ಲೋಡ್ ಮಾಡಬೇಡಿ. ಈ ರೀತಿ ಮಾಡುವುದು ನಿಮಗೆ ದುಬಾರಿಯಾಗಿ ಪರಿಣಮಿಸಲಿದೆ. ಇದಕ್ಕೆ ಸಂಬಂಧಿಸಿದಂತೆ ಗೂಗಲ್ ಪ್ಲೇ ಎಚ್ಚರಿಕೆಯ ಸಂದೇಶವೊಂದನ್ನು ರವಾನಿಸಿದೆ. ವಿಶೇಷವಾಗಿ ಅಂಡ್ರಾಯಿಡ್ ಬಳಕೆದಾರರಿಗೆ ಇದು ಖತರ್ನಾಕ್ ಎಚ್ಚರಿಕೆಯಾಗಿದೆ. ಗೂಗಲ್ ಪ್ಲೇ ಸ್ಟೋರ್ ನಲ್ಲಿ ಇಂತಹ ಹಲವಾರು ಆಪ್ ಗಳಿದ್ದು, ಈ ಆಪ್ ಗಳ ಸಹಾಯದಿಂದ ನಿಮ್ಮ ಫೋನ್ ಹ್ಯಾಕ್ ಆಗುವ ಸಾಧ್ಯತೆ ಇದೆ. ಆದರೆ, ಈ ಆಪ್ ಗಳಿಂದ ಯಾವುದೇ ತೊಂದರೆ ಇಲ್ಲ. ಈ ಆಪ್ ಗಳನ್ನು ಬಳಸುವ ಮೂಲಕ ನೀವು ಹ್ಯಾಕರ್ ಗಳ ಕಣ್ಣಿಗೆ ಬೀಳುವ ಸಾಧ್ಯತೆ ಹೆಚ್ಚಾಗಿದೆ.


COMMERCIAL BREAK
SCROLL TO CONTINUE READING

ಅಂಡ್ರಾಯಿಡ್ ಮಾಲ್ವೇಯರ್ ಆಪ್ ಗಳು ನಿಮ್ಮ ಮಾಹಿತಿ ಕದಿಯಲು ಸಹಕರಿಸುತ್ತವೆ. ಬೇರೆ ಆಪ್ ಗಳು ಹಾಗೂ ವೆಬ್ಸೈಟ್ ಗಳ ಮೇಲೆ ಕ್ರೆಡನ್ಸಿಯಲ್ ಲಾಗಿನ್  ಮಾಡಬಹುದಾಗಿದೆ. ಏಕೆಂದರೆ ಈ ಆಪ್ ಗಳನ್ನು ಇನ್ಸ್ಟಾಲ್ ಆಗುತ್ತಲೇ ನಿಮ್ಮ ಮೊಬೈಲ್ ಅನ್ನು ರಿಮೋಟ್ ಅಕ್ಸಸ್ ಮೇಲೆ ತೆರೆಯಬಹುದಾಗಿದೆ. ಆದರೆ, ರಿಮೋಟ್ ಮೇಲೆ ಆಕ್ಸಸ್ ಪಡೆಯಲು ನಿಮ್ಮ ಅನುಮತಿ ಬೇಕು. ಇಂತಹ ಅನುಮತಿ ನೀಡುವುದು ನಿಮಗೆ ಭಾರಿಯಾಗಿ ಪರಿಣಮಿಸಲಿದೆ. ಹ್ಯಾಕರ್ ಗಳೂ ಕೂಡ ಹಲವು ಬಾರಿ ಲಿಂಕ್ ಗಳನ್ನು ಕಳುಹಿಸಿ ನಿಮ್ಮ ಫೋನ್ ನ ರಿಮೋಟ್ ಅಕ್ಸಸ್ ಕೇಳುತ್ತಾರೆ. ಬಳಿಕ ಅವರು ನಿಮ್ಮ ಬ್ಯಾಂಕ್ ಗೆ ಸಂಬಂಧಿಸಿದ ಮಾಹಿತಿಯನ್ನು ಕದಿಯುವ ಸಾಧ್ಯತೆ ಇದೆ. ನಿಮ್ಮ ಅಧಿಕೃತ ಮೊಬೈಲ್ ಗೆ ಬರುವ OTP, UPI ಹಾಗೂ ಕ್ರೆಡಿಟ್ ಕಾರ್ಡ್ ಪಿನ್ ಗಳ ಡೀಟೇಲ್ಸ್ ಗಳೂ ಕೂಡ ಅವರ ಕೈಸೇರುವ ಸಾಧ್ಯತೆ ಇದೆ. ಇದರಿಂದ ನಿಮ್ಮ ಅಕೌಂಟ್ ಗೆ ಕನ್ನ ಬೀಳುವ ಸಾಧ್ಯತೆ ಇದೆ.


ಅಡ್ವೈಸರಿ ಜಾರಿಯಾಗುವ ಸಾಧ್ಯತೆ ಇದೆ
ಇತ್ತೀಚೆಗಷ್ಟೇ ಮಧ್ಯಪ್ರದೇಶದ ಸೈಬರ್ ಪೊಲೀಸರ ಗ್ವಾಲಿಯರ್ ಜೋನ್ ಇಂತಹ ಆಪ್ ಗಳಿಂದ ಎಚ್ಚರಿಕೆವಹಿಸುವಂತೆ ಅಡ್ವೈಸರಿ ಹೊರಡಿಸಿತ್ತು. ಈ ಕುರಿತು ಸಾಮಾಜಿಕ ಮಾಧ್ಯಮಗಳ ಮೇಲೆ ಎಚ್ಚರಿಕೆಯ ಸಂದೇಶ ರವಾನಿಸಿದ್ದ ಪೊಲೀಸರು ಇಂತಹ ಫೇಕ್ ಆಪ್ ಗಳು ಹಾಗೂ ಫ್ರಾಡ್ ಗಳಿಂದ ಎಚ್ಚರಿಕೆವಹಿಸುವಂತೆ ಮನವಿ ಮಾಡಿಕೊಂಡಿದ್ದರು. ಈ ಕುರಿತು ನಡೆದ ಒಂದು ರಿಸರ್ಚ್ ನಲ್ಲಿಯೂ ಕೂಡ ಸ್ಕ್ರೀನ್ ಶೆಯರಿಂಗ್ ಆಪ್ ಗಳ ಮೂಲಕ ನಡೆಸಲಾಗುತ್ತಿರುವ ವಂಚನೆಗಳ ಹಲವು ದೂರುಗಳು ದಾಖಲಾಗಿದ್ದವು. ಈ ಹಿನ್ನೆಲೆಯಲ್ಲಿ ಈ ಅಡ್ವೈಸರಿ ಜಾರಿಗೊಳಿಸಲಾಗಿತ್ತು.