Alert! 15 ದಿನಗಳ ನಂತರ ರದ್ದುಗೊಳ್ಳಲಿದೆ ಪ್ಯಾನ್ ಕಾರ್ಡ್
ನಿಮ್ಮ ಬಳಿ ಪ್ಯಾನ್ ಕಾರ್ಡ್ ಇದ್ದು ಜೂನ್ 30 ರ ಮೊದಲು ಆಧಾರ್ಗೆ ಲಿಂಕ್ ಮಾಡದಿದ್ದರೆ 10 ಸಾವಿರ ರೂಪಾಯಿ ದಂಡವನ್ನು ಪಾವತಿಸಲು ಸಿದ್ಧರಾಗಿರಿ.
ನವದೆಹಲಿ: ನಿಮ್ಮ ಬಳಿ ಪ್ಯಾನ್ ಕಾರ್ಡ್ ಇದ್ದರೆ ಜೂನ್ 30ರ ಮೊದಲು ಆಧಾರ್ಗೆ ಲಿಂಕ್ ಮಾಡದಿದ್ದರೆ 10 ಸಾವಿರ ರೂಪಾಯಿಗಳ ದಂಡವನ್ನು ಪಾವತಿಸಲು ಸಿದ್ಧರಾಗಿರಿ. ಪ್ಯಾನ್ ಅನ್ನು ಆಧಾರ್ಗೆ ಲಿಂಕ್ ಮಾಡಲು ಕೊನೆಯ ದಿನಾಂಕ ಜೂನ್ 30 ಆಗಿದೆ. ಈ ನಿಟ್ಟಿನಲ್ಲಿ ಆದಾಯ ತೆರಿಗೆ ಇಲಾಖೆಯ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 272B ಅಡಿಯಲ್ಲಿ ಅಧಿಸೂಚನೆ ಹೊರಡಿಸಲಾಗಿದೆ.
ಕೊನೆಯ ಅವಕಾಶ! ಜೂನ್ 30 ರ ಮೊದಲು PAN-Aadhaar ಲಿಂಕ್ ಮಾಡಿ, ಇಲ್ಲದಿದ್ದರೆ...
ಇದಕ್ಕೂ ಮೊದಲು ಆಧಾರ್ ಅನ್ನು ಪ್ಯಾನ್ ಕಾರ್ಡ್ನೊಂದಿಗೆ ಲಿಂಕ್ ಮಾಡುವ ಕೊನೆಯ ದಿನಾಂಕ 31 ಮಾರ್ಚ್ 2020. ಆದರೆ ಕರೋನಾವೈರಸ್ ಸಾಂಕ್ರಾಮಿಕದಿಂದ ಉಂಟಾದ ಲಾಕ್ಡೌನ್ ಕಾರಣ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆಧಾರ್-ಪ್ಯಾನ್ ಲಿಂಕ್ ಮಾಡಲು ಕೊನೆಯ ದಿನಾಂಕವನ್ನು ಜೂನ್ 30ಕ್ಕೆ ವಿಸ್ತರಿಸಿದ್ದಾರೆ. ಇದಲ್ಲದೆ ಪ್ಯಾನ್ ಕಾರ್ಡ್ ತಯಾರಿಸಲು ಆಧಾರ್ ಕಾರ್ಡ್ ಕೂಡ ಅಗತ್ಯ.
ನಿಮ್ಮ PAN-Aadhaar ಲಿಂಕ್ ಮಾಡಲು ಕೇವಲ 1 SMS ಸಾಕು!
ಪ್ಯಾನ್ ಕಾರ್ಡ್ ರದ್ದು:
ಆದಾಯ ತೆರಿಗೆ ಕಾನೂನಿನ ಪ್ರಕಾರ ನಿಗದಿತ ದಿನಾಂಕದೊಳಗೆ ಆಧಾರ್-ಪ್ಯಾನ್ ಎರಡೂ ಕಾರ್ಡ್ಗಳನ್ನು ಲಿಂಕ್ ಮಾಡದಿದ್ದರೆ, ಜೂನ್ 30 ರ ನಂತರ ಪ್ಯಾನ್ ಕಾರ್ಡ್ ರದ್ದುಗೊಳ್ಳುತ್ತದೆ. ಇದರ ಜೊತೆಗೆ 10 ಸಾವಿರ ರೂ.ಗಳ ದಂಡವನ್ನೂ ವಿಧಿಸಲಾಗುತ್ತದೆ. ಆದ್ದರಿಂದ ಇನ್ನು 15 ದಿನಗಳಲ್ಲಿ ಆಧಾರ್ಗೆ ಲಿಂಕ್ ಮಾಡಿ.
ನಿಮ್ಮ ಪ್ಯಾನ್ ಆಧಾರ್ಗೆ ಲಿಂಕ್ ಆಗಿದೆಯೇ/ಇಲ್ಲವೇ ಎಂಬುದನ್ನು ಹೀಗೆ ಪರಿಶೀಲಿಸಿ
ಪ್ಯಾನ್-ಆಧಾರ್ ಲಿಂಕ್ ಆಗಿದೆಯೇ ಎಂದು ಪರಿಶೀಲಿಸಿ:
ಮೊದಲನೆಯದಾಗಿ, ಆದಾಯ ತೆರಿಗೆ ಇಲಾಖೆಯ www.incometaxindiaefiling.gov.in ನ ಇ-ಫೈಲಿಂಗ್ ವೆಬ್ಸೈಟ್ಗೆ ಹೋಗಿ.
ಮೇಲ್ಭಾಗದಲ್ಲಿರುವ 'ಕ್ವಿಕ್ ಲಿಂಕ್ಸ್' ಮೇಲೆ 'ಲಿಂಕ್ ಆಧಾರ್' ಕ್ಲಿಕ್ ಮಾಡಿ.
ಇದರ ನಂತರ, ಪರದೆಯ ಮೇಲೆ ಹೊಸ ಪುಟ ತೆರೆಯುತ್ತದೆ.
ಈ ಪುಟದ ಮೇಲ್ಭಾಗದಲ್ಲಿ ಹೈಪರ್ಲಿಂಕ್ ಇರುತ್ತದೆ, ಅದನ್ನು ಇಂಗ್ಲಿಷ್ನಲ್ಲಿ ಬರೆಯಲಾಗಿರುತ್ತದೆ, ನೀವು ಈಗಾಗಲೇ ಆಧಾರ್ ಲಿಂಕ್ ಮಾಡಲು ವಿನಂತಿಸಿದ್ದರೆ ಸ್ಟೇಟಸ್ ಪರಿಶೀಲಿಸಿ ಮೇಲೆ ಕ್ಲಿಕ್ ಮಾಡಿ.
ಈ ಹೈಪರ್ ಲಿಂಕ್ ಅನ್ನು ಕ್ಲಿಕ್ ಮಾಡಿದ ನಂತರ ನಿಮ್ಮ ಪ್ಯಾನ್ ಮತ್ತು ಆಧಾರ್ ವಿವರಗಳನ್ನು ನೀವು ನಮೂದಿಸಬೇಕಾಗುತ್ತದೆ.
'ವ್ಯೂ ಲಿಂಕ್ ಆಧಾರ್ ಸ್ಥಿತಿ' ಕ್ಲಿಕ್ ಮಾಡಿ. ಅದರ ಫಲಿತಾಂಶದಲ್ಲಿ ಪ್ಯಾನ್ ನಿಮ್ಮ ಆಧಾರ್ ಗೆ ಸಂಪರ್ಕಗೊಂಡಿದೆಯೆ ಅಥವಾ ಇಲ್ಲವೇ ಎಂಬುದು ನಿಮಗೆ ತಿಳಿಯುತ್ತದೆ.
ಪ್ಯಾನ್-ಆಧಾರ್ಗೆ ಲಿಂಕ್ ಮಾಡುವುದು ಹೇಗೆ?
ಪ್ಯಾನ್-ಆಧಾರ್ ಲಿಂಕ್ (PAN-Aadhaar Link) ಮಾಡಲು ಆದಾಯ ತೆರಿಗೆ ಇ-ಫೈಲಿಂಗ್ ವೆಬ್ಸೈಟ್ಗೆ ಭೇಟಿ ನೀಡಿ.
ಸೈಟ್ ಪುಟದ ಎಡಭಾಗದಲ್ಲಿ ತ್ವರಿತ ಲಿಂಕ್ಗಳ ಆಯ್ಕೆಯನ್ನು ನೀವು ಕಾಣಬಹುದು. ಇಲ್ಲಿ ನೀವು 'ಲಿಂಕ್ ಆಧಾರ್' ಆಯ್ಕೆಯನ್ನು ಕ್ಲಿಕ್ ಮಾಡಬೇಕು.
ಇಲ್ಲಿ ನೀವು ನಿಮ್ಮ ಪ್ಯಾನ್, ಆಧಾರ್ ಸಂಖ್ಯೆ ಮತ್ತು ಹೆಸರನ್ನು ನಮೂದಿಸಬೇಕು. ಈ ಮಾಹಿತಿಯನ್ನು ನೀಡಿದ ನಂತರ ನಿಮಗೆ ಒಟಿಪಿ ಕಳುಹಿಸಲಾಗುತ್ತದೆ.
ಒಟಿಪಿಯನ್ನು ನಮೂದಿಸಿದ ನಂತರ ನಿಮ್ಮ ಆಧಾರ್ ಮತ್ತು ಪ್ಯಾನ್ ಅನ್ನು ಲಿಂಕ್ ಮಾಡಲಾಗುತ್ತದೆ.
ನಿಮ್ಮ ಆಧಾರ್ ಮತ್ತು ಪ್ಯಾನ್ ಮಾಹಿತಿಯು ಮಾನ್ಯವಾಗಿದೆಯೆ ಅಥವಾ ಇಲ್ಲವೇ ಎಂಬುದನ್ನು ಆದಾಯ ತೆರಿಗೆ ಇಲಾಖೆ ನಿಮ್ಮ ವಿವರಗಳನ್ನು ಪರಿಶೀಲಿಸುತ್ತದೆ ಎಂಬುದನ್ನು ನೆನಪಿನಲ್ಲಿಡಿ.