ನವದೆಹಲಿ:ಕೊರೊನಾ ವೈರಸ್ ನಿಂದ ಘೋಷಿಸಲಾಗಿರುವ ಲಾಕ್ ಡೌನ್ ಹಿನ್ನೆಲೆ ಬಹುತೇಕ ಜನರು ತಮ್ಮ ಮನೆಯಿಂದಲೇ ಕಚೇರಿಯ ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ. ಇಂತಹುದರಲ್ಲಿ ಕಂಪನಿಗಳಿಂದ ನೌಕರರಿಗೆ ಬರುತ್ತಿರುವ ಇ-ಮೇಲ್ ಗಳ ಸಂಖ್ಯೆಯಲ್ಲಿಯೂ ಕೂಡ ವ್ಯಾಪಕ ವೃದ್ಧಿಯಾಗಿದೆ. ಸದ್ಯ ಬಹುತೇಕ ಕಂಪನಿಗಳು ತಮ್ಮತಮ್ಮ ಉದ್ಯೋಗಿಗಳಿಗೆ ಅನೇಕ ನೀತಿ ನಿಯಮಗಳನ್ನು ಮತ್ತು ಬದಲಾವಣೆಗಳನ್ನು ಮೇಲ್ ಮುಖಾಂತರವೇ ತಿಳಿಸುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ, ಹ್ಯಾಕರ್‌ಗಳ ಗಮನ ನೌಕರರ ಅಧಿಕೃತ ಇ-ಮೇಲ್ ಐಡಿಯತ್ತ ಹರಿದಿದೆ. ಈ ಪರಿಸ್ಥಿತಿಯಲ್ಲಿ, ಕಂಪನಿಯ ಮೇಲ್ ಖಾತೆಯನ್ನು ಹ್ಯಾಕ್ ಮಾಡುವ ಮೂಲಕ ಅವರೇ ನೌಕರರಿಗೆ ಇ-ಮೇಲ್ ಗಳನ್ನು ಕಳುಹಿಸುತ್ತಿದ್ದಾರೆ ಎಂಬ ವರದಿಯೊಂದ ಬಹಿರಂಗವಾಗಿದೆ.


COMMERCIAL BREAK
SCROLL TO CONTINUE READING

ಈ ಕಂಪನಿ ಎಚ್ಚರಿಕೆ ನೀಡಿದೆ
ಕರೋನಾ ವೈರಸ್‌ನಿಂದಾಗಿ ಸೈಬರ್‌ ಅಪರಾಧಿಗಳು ನೌಕರರಿಗೆ ನಕಲಿ ಇಮೇಲ್‌ಗಳನ್ನು ಕಳುಹಿಸುವ ಮೂಲಕ ಪ್ರಸ್ತುತ ಅವರನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ನಾರ್ಟನ್ಲಿಫ್ಲಾಕ್ ಸಂಸ್ಥೆ ತನ್ನ ಬ್ಲಾಗ್‌ನಲ್ಲಿ ಬಹಿರಂಗಪಡಿಸಿದೆ. ಹ್ಯಾಕರ್ ಗಳು ಕಳುಹಿಸುವ ಇಮೇಲ್‌ಗಳು, ಕಂಪನಿಯ ಹಿರಿಯ ಅಧಿಕಾರಿಗಳು ಕಳುಹಿಸುವ ಇಮೇಲ್ ಗಳಂತೆಯೇ ತೋರುತ್ತವೆ. ಆದರೆ ಹಾಗಲ್ಲ. ಇಮೇಲ್‌ನಲ್ಲಿ ಲಿಂಕ್ ವೊಂದನ್ನು ನೀಡಿ, ಇದು ಕಂಪನಿಯ ಹೊಸ ನೀತಿಯ ಲಿಂಕ್ ಎಂದು ಹೇಳಲಾಗುತ್ತದೆ, ಒಂದು ವೇಳೆ ನೀವು ಲಿಂಕ್ ಅನ್ನು ಕ್ಲಿಕ್ ಮಾಡಿದರೆ, ಅದು ಲ್ಯಾಪ್‌ಟಾಪ್‌ನಲ್ಲಿ ಮಾಲ್‌ವೇರ್ ಅನ್ನು ಡೌನ್‌ಲೋಡ್ ಮಾಡಿ ಇನ್ಸ್ಟಾಲ್ ಮಾಡುತ್ತದೆ. ಹೀಗಾಗಿ ಇಂತಹ ಯಾವುದೇ ಲಿಂಕ್ ಅನ್ನು ಕ್ಲಿಕ್ ಮಾಡುವ ಮೊದಲು, ನಿಮ್ಮ ಮ್ಯಾನೇಜರ್ ಅಥವಾ ಎಚ್‌ಆರ್‌ಗೆ ಕರೆ ಮಾಡುವ ಮೂಲಕ ಅದನ್ನು ಖಚಿತಪಡಿಸಿಕೊಳ್ಳಿ ಎಂದು ಸಂಸ್ಥೆ ತನ್ನ ಬ್ಲಾಗ್ ನಲ್ಲಿ ಹೇಳಿದೆ.


ಲಿಂಕ್ ಕ್ಲಿಕ್ಕಿಸಿದರೆ ಈ ಹಾನಿ ಉಂಟಾಗಲಿದೆ
ಒಂದು ವೇಳೆ ಯಾವುದೇ ಉದ್ಯೋಗಿ ಮೋಸಹೋಗಿ ಇಂತಹ ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿದರೆ, ಸೈಬರ್ ಅಪರಾಧಿಗಳು ಆ ಉದ್ಯೋಗಿಯ ಲ್ಯಾಪ್ ಟಾಪ್ ಮೇಲೆ ನಿಯಂತ್ರಣ ಸಾಧಿಸುತ್ತಾರೆ. ನಂತರೆ ನಿಮ್ಮ ಕಂಪ್ಯೂಟರ್ ನಲ್ಲಿನ ಎಲ್ಲಾ ಸೂಕ್ಷ್ಮ ವ್ಯವಹಾರದ ಮಾಹಿತಿ ಮತ್ತು ಹಣಕಾಸಿಗೆ ಸಂಬಂಧಿಸಿದ ಮಾಹಿತಿಗೆ ಕನ್ನಹಾಕುತ್ತಾರೆ.


ಗೂಗಲ್ ಕೂಡ ಇದೇ ರೀತಿಯ ಎಚ್ಚರಿಕೆ ನೀಡಿದೆ
ಈ ರೀತಿಯ ಅಪಾಯಗಳ ಬಗ್ಗೆ ಗೂಗಲ್ ಕೂಡ ಕಳೆದ ತಿಂಗಳು ಎಚ್ಚರಿಕೆ ನೀಡಿತ್ತು. ಇಂತಹ ವಂಚನೆಗಳು ಇಮೇಲ್ ಮೂಲಕ ನಡೆಯುತ್ತಿವೆ ಎಂದು ಗೂಗಲ್ ಹೇಳಿತ್ತು. ಇಂತಹ  ಪರಿಸ್ಥಿತಿಯಲ್ಲಿ, ಬಳಕೆದಾರರು ತಮ್ಮ ಮನೆಯ ವಿಳಾಸ ಅಥವಾ ಬ್ಯಾಂಕ್ ವಿವರಗಳನ್ನು ಯಾರೊಂದಿಗೂ ಹಂಚಿಕೊಳ್ಳಬಾರದು. ಇಮೇಲ್ ಕಳುಹಿಸುವ ವೆಬ್‌ಸೈಟ್‌ನ URL ಅನ್ನು ಪರಿಶೀಲಿಸಿ ಇದರಿಂದ ಯಾವುದೇ ರೀತಿಯ ಅನುಮಾನವಿದ್ದಲ್ಲಿ ಅದರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಬೇಕು ಎಂದು ಗೂಗಲ್ ಸಲಹೆ ನೀಡಿತ್ತು.