ಕೊರೊನಾ ವೈರಸ್ ಸೋಂಕನ್ನು ತಡೆಗಟ್ಟಲು ಜನರು ಲಾಕ್‌ಡೌನ್ ಅನುಸರಿಸುತ್ತಿದ್ದಾರೆ. ಭಾರತದಲ್ಲಿ ಲಾಕ್ ಡೌನ್ ಘೋಷಣೆಗೆ  1 ತಿಂಗಳು ಪೂರ್ತಿಯಾಗಿದೆ. ಈ ಹಿನ್ನೆಲೆಯಲ್ಲಿ ಜನರು ಮನೆಯಲ್ಲಿದ್ದುಕೊಂಡು ಸಾಮಾಜಿಕ ಮಾಧ್ಯಮವನ್ನು ಹೆಚ್ಚು ಬಳಸುತ್ತಿದ್ದಾರೆ. ಇಂತಹ ಸಂಕಷ್ಟದ ಸಮಯದಲ್ಲಿ ಜನರು ಪರಸ್ಪರ ಸಂಪರ್ಕದಲ್ಲಿರಲು ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್ (ವಾಟ್ಸಾಪ್) ಅನ್ನು ಹೆಚ್ಚಾಗಿ ಬಳಸುತ್ತಿದ್ದಾರೆ. ಈ ಅವಧಿಯಲ್ಲಿ ಸ್ಪೈವೇರ್ ಪ್ರಕರಣಗಳಲ್ಲಿಯೂ ಕೂಡ ಏರಿಕೆ ಕಂಡುಬರಲಾರಂಭಿಸಿದ್ದು, ಬಳಕೆದಾರರು ತಮ್ಮ ಖಾತೆಯನ್ನು ಸುರಕ್ಷಿತವಾಗಿರಿಸಿಕೊಳ್ಳುವಂತೆ ಸೂಚನೆಗಳನ್ನು ನೀಡಲಾಗುತ್ತಿದೆ.


COMMERCIAL BREAK
SCROLL TO CONTINUE READING

ವಾಟ್ಸ್ ಆಪ್ ನಲ್ಲಿ ಕೆಲ ಸುರಕ್ಷತಾ ವೈಶಿಷ್ಟ್ಯಗಳನ್ನು ನೀಡಲಾಗಿದ್ದು, ಅವುಗಳನ್ನು ಬಳಸಿ ನೀವು ನಿಮ್ಮ ವೈಯಕ್ತಿಕ ಮಾಹಿತಿಯನ್ನು ಸುರಕ್ಷಿತವಾಗಿರಿಸಿಬಹುದು. ಇಂತಹುದೇ ಒಂದು ವೈಶಿಷ್ಟ್ಯ ಎಂದರೆ ಅದು Two Step Verification. ಈ ಫೀಚರ್ ಬಳಸಿ ನಿಮ್ಮ ವಾಟ್ಸ್ ಆಪ್ ಖಾತೆಯನ್ನು ಹ್ಯಾಕ್ ಆಗುವುದರಿಂದ ರಕ್ಷಿಸಿಕೊಳ್ಳಬಹುದು. ಅಷ್ಟೇ ಅಲ್ಲ ಈ ವೈಶಿಷ್ಟ್ಯದಿಂದ ನೀವು ನಿಮ್ಮ ಡೇಟಾ ಸೆಕ್ಯೂರಿಟಿಯನ್ನು ಇನ್ನಷ್ಟು ಸುಧಾರಿಸಬಹುದು. ಈ ವೈಶಿಷ್ಟ್ಯ ಒಂದು ವೇಳೆ ಆಕ್ಟಿವ್ ಆಗಿದ್ದರೆ, ಫೋನ್ ರಿಸೆಟ್ ಅಥವಾ ಸಿಮ್ ಬದಲಾವಣೆ ಮಾಡಿದ ಸಂದರ್ಭಗಳಲ್ಲಿ ವಾಟ್ಸ್ ಆಪ್ ಖಾತೆಗೆ ಲಾಗಿನ್ ಆಗಲು 6 ಸಂಖ್ಯೆಗಳ ಪಾಸ್ ಕೋಡ್ ಬಳಸುವುದು ಅವಶ್ಯಕವಾಗಲಿದೆ. ಇದನ್ನು ನೀವು ತುಂಬಾ ಸುಲಭವಾಗಿ ಆಕ್ಟಿವೇಟ್ ಮಾಡಬಹುದು.


ಹೇಗೆ ಸಕ್ರೀಯಗೊಳಿಸಬೇಕು


  • ಮೊದಲು ವಾಟ್ಸ್ ಆಪ್ ಅನ್ನು ತೆರೆದು ಸೆಟ್ಟಿಂಗ್ಸ್ ವಿಭಾಗಕ್ಕೆ ಭೇಟಿ ನೀಡಿ. 

  • ಸೆಟ್ಟಿಂಗ್ಸ್ ನ ಅಕೌಂಟ್ ಸೆಕ್ಷನ್ ನಲ್ಲಿ Two Step Verification ಆಪ್ಶನ್ ನಿಮಗೆ ಸಿಗಲಿದ್ದು, ಅದರ ಸೆಟ್ಟಿಂಗ್ಸ್ ನಲ್ಲಿ ಹೋಗಿ ಎನೇಬಲ್ ಮಾಡಿ.

  • ಇದೀಗ ನಿಮಗೆ 6 ಅಂಕಗಳ ಪಾಸ್ ಕೋಡ್ ನೀಡುವುದು ಅನಿವಾರ್ಯವಾಗಲಿದೆ. ಇದನ್ನು ಕಂಪರ್ಮ್ ಮಾಡಿದ ಬಳಿಕ ವಾಟ್ಸ್ ಆಪ್ ನಿಮಗೆ ನಿಮ್ಮ ಅಧಿಕೃತ ಇ-ಮೇಲ್ ನಮೂದಿಸಲು ಕೇಳಿಕೊಳ್ಳುತ್ತದೆ. ಈ ಇ-ಮೇಲ್ ಅಡ್ರೆಸ್ ಬಳಕೆಯನ್ನು ನೀವು ನಿಮ್ಮ ಪಾಸ್ ಕೋಡ್ ಅಥವಾ PIN ಕಳೆದುಹೋದ ಸಂದರ್ಭದಲ್ಲಿ ಬಳಕೆ ಮಾಡಬಹುದು.

  • ಇ-ಮೇಲ್ ನಮೂದಿಸುವಾಗ ಯಾವುದೇ ತಪ್ಪು ಮಾಡಬೇಡಿ. ಕಾರಣ ವಾಟ್ಸ್ ಆಪ್ ನೀವು ನಮೂದಿಸಿರುವ ಇ-ಮೇಲ್ ವೆರಿಫಿಕೆಶನ್ ಮಾಡುವುದಿಲ್ಲ. ಹೀಗಾಗಿ ಒಂದು ವೇಳೆ ನೀವು ಪಿನ್ ಮರೆತುಹೋದರೆ, ರಿಸೆಟ್ ಮಾಡುವ ವೇಳೆ ನೀವು ನಿಮ್ಮ ವಾಟ್ಸ್ ಆಪ್ ಖಾತೆಗೆ ಲಾಗಿನ್ ಆಗುವಾಗ ಅಡಚಣೆ ಉಂಟಾಗುವ ಸಾಧ್ಯತೆ ಇದೆ.


ಆದರೆ, ಇ-ಮೇಲ್ ಅಡ್ರೆಸ್ಸ್ ನೀಡುವುದು ಅಥವಾ ಬಿಡುವುದು ಇದು ನಿಮ್ಮ ವಿವೇಚನೆಗೆ ಬಿಟ್ಟ ವಿಚಾರ. ಬೇಕಿದ್ದರೆ ನೀವು ಈ ಹಂತವನ್ನು ಸ್ಕಿಪ್ ಮಾಡಬಹುದು.


ನಿಮ್ಮ ಖಾತೆಯನ್ನು ಸೇಫ್ ಮಾಡಲು ನೀವು ನಿಮ್ಮ ಫಿಂಗರ್ ಪ್ರಿಂಟ್ ವೈಶಿಷ್ಟ್ಯದ ಬಳಕೆ ಕೂಡ ಮಾಡಬಹುದಾಗಿದೆ. ಈ ವೈಶಿಷ್ಟ್ಯವನ್ನು ಬಳಸಿ ನೀವು ನಿಮ್ಮ ಬೆರಳಚ್ಚನ್ನು ಬಳಸಿ ನಿಮ್ಮ ಡೇಟಾ ಅನ್ನು ಸೆಕ್ಯೂರ್ ಮಾಡಬಹುದು. ಇದನ್ನು ಸಕ್ರೀಯಗೊಳಿಸಲು ಸೆಟ್ಟಿಂಗ್ಸ್ ನಲ್ಲಿ ನೀಡಲಾಗಿರುವ ಅಕೌಂಟ್ ಆಪ್ಶನ್ ಗೆ ಭೇಟಿ ನೀಡಿ ಅಲ್ಲಿ ಪ್ರೈವೆಸಿ ಮೇಲೆ ಕ್ಲಿಕ್ಕಿಸಿ. ಅಲ್ಲಿ ಎಲ್ಲಕ್ಕಿಂತ ಕೊನೆಗೆ ನೀಡಲಾಗಿರುವ ಫಿಂಗರ್ ಪ್ರಿಂಗ್ ಲಾಕ್ ಅನ್ನು ಟಾಗಲ್ ಆನ್ ಮಾಡಿ ಅದನ್ನು ಸಕ್ರೀಯಗೊಳಿಸಬಹುದು.