ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮತ್ತು ಫೋಟೋಗಳು ವೈರಲ್ ಆಗುತ್ತಿರುವುದು ಹೊಸತೇನಲ್ಲ. ಆದರೆ ಈ ಮಾಧ್ಯಮದ ಮೂಲಕ ಬರುವಂತಹ ವರದಿಗಳು ಅನೇಕ ಭಾರಿ ಆಘಾತಕಾರಿಯಾಗಿರುತ್ತವೆ. ಬಂಗಾಳದ ಅಲಿಪುರ್ದಾರ್ ನ ಒಂದು ಶಾಲೆಯ ವೀಡಿಯೊವು ವೈರಲ್ ಆಗಿ ಮಾರ್ಪಟ್ಟಿದೆ. ಈ ವೀಡಿಯೊದಲ್ಲಿ, ಶಾಲಾ ಶಿಕ್ಷಕರು ಬಾಲಿವುಡ್ ಹಾಡಿಗೆ ನೃತ್ಯ ಮಾಡುತ್ತಿದ್ದಾರೆ.


COMMERCIAL BREAK
SCROLL TO CONTINUE READING

ಈ ಘಟನೆಯು ಅಲಿಪುರ್ದಾರ್ ನಿಂದ ಬಂದಿದ್ದು, ಅಲ್ಲಿ ಶಾಲೆಯ ವೈರಲ್ ವೀಡಿಯೋ ಬೆಳಕಿಗೆ ಬಂದಿದೆ. ಈ ಶಾಲೆಯ ಹೆಸರು ಬಾರಾಬಿಶಾ ಬಾಲಕಿಯರ ಶಾಲೆ. ಆಗಸ್ಟ್ 15 ರಂದು ಈ ಶಾಲೆಯ ಹೊಸ ದ್ವಾರವನ್ನು ಉದ್ಘಾಟಿಸಲಾಯಿತು. ಹಿಂದಿ ಹಾಡಿಗೆ ಮಹಿಳಾ ಶಿಕ್ಷಕರು ಹೇಗೆ ನೃತ್ಯ ಮಾಡುತ್ತಿದ್ದಾರೆ ಎಂಬುದನ್ನು ಈ ವಿಡಿಯೋ ತೋರಿಸುತ್ತದೆ. ಈ ವೈರಲ್ ವಿಡಿಯೋ ಬಗ್ಗೆ ಜನರಿಂದ ಬಹಳಷ್ಟು ಟೀಕೆಗಳು ವ್ಯಕ್ತವಾಗಿವೆ. 


ಆಗಸ್ಟ್ 15 ರಂದು, ಶಾಲೆಯಲ್ಲಿ ಆರ್ಕೆಸ್ಟ್ರಾವನ್ನು ಆಯೋಜಿಸಲಾಗಿತ್ತು, ಇದರಲ್ಲಿ ಹಿಂದಿ ಹಾಡುಗಳ ಅಬ್ಬರ ಜೋರಾಗಿತ್ತು. ಆದಾಗ್ಯೂ, ಶಾಲಾ ಆಡಳಿತವು ಈ ಬಗ್ಗೆ ಇನ್ನೂ ಪ್ರತಿಕ್ರಿಯಿಸಿಲ್ಲ. ಆ ಭಾಗದ ಶಿಕ್ಷಣಾಧಿಕಾರಿ ಶಾಲೆಯ ಆಡಳಿತದಿಂದ ಪ್ರಶ್ನೆಗೆ ಉತ್ತರಿಸುತ್ತಾರೆ ಎಂದು ಹೇಳಿದರು. ಮತ್ತೊಂದೆಡೆ, ತೃಣಮೂಲ ಕಾಂಗ್ರೆಸ್ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಕಣಿಮ್ ಬಲ್ಬ್ ಗೋಸ್ವಾಮಿ, ಇದು ಬಂಗಾಳ ಸಂಸ್ಕೃತಿ ಅಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.