ನವದೆಹಲಿ: ಅಸಮಾಧಾನಗೊಂಡ ಶಾಸಕಿ ಅಲ್ಕಾ ಲಂಬಾ ಅವರು ಆಮ್ ಆದ್ಮಿ ಪಕ್ಷಕ್ಕೆ ಶುಕ್ರವಾರ ರಾಜಿನಾಮೆ ಸಲ್ಲಿಸುವುದಾಗಿ ಘೋಷಿಸಿದ್ದಾರೆ. ಈ ಮೂಲಕ 6 ವರ್ಷಗಳ ಪ್ರಯಾಣವನ್ನು 'ಉತ್ತಮ ಕಲಿಕೆ' ಎಂದಿರುವ ಅಲ್ಕಾ ಎಎಪಿಗೆ ವಿದಾಯ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಈ ಬಗ್ಗೆ ಟ್ವೀಟ್ ಮಾಡಿರುವ ಅಲ್ಕಾ, "ಎಎಪಿಗೆ 'ಗುಡ್ ಬೈ' ಹೇಳುವ ಮತ್ತು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವ ಸಮಯ ಬಂದಿದೆ. ಕಳೆದ 6 ವರ್ಷಗಳ ಪ್ರಯಾಣ ನನಗೆ ಉತ್ತಮ ಕಲಿಕೆಯಾಗಿತ್ತು. ಎಲ್ಲರಿಗೂ ಧನ್ಯವಾದಗಳು," ಎಂದಿದ್ದಾರೆ.

ಮುಂಬರುವ ದೆಹಲಿ ವಿಧಾನಸಭಾ ಚುನಾವಣೆಗೂ ಮುನ್ನ ಅಲ್ಕಾ ಅವರು ರಾಜೀನಾಮೆ ನೀಡಿದ್ದು, ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಹೇಳಿದ್ದಾರೆ.


ದೆಹಲಿಯ ಚಾಂದನಿ ಚೌಕ್ ಕ್ಷೇತ್ರದ ಶಾಸಕಿಯದ ಅಲ್ಕಾ ಲಾಂಬಾ ಅವರು ತಮ್ಮ ಕ್ಷೇತ್ರದಮತದಾರರೊಂದಿಗೆ ಸಭೆ ನಡೆಸಿ ಬಳಿಕ ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.