ನವದೆಹಲಿ: ಬಿಜೆಪಿಯಲ್ಲಿ ಎಲ್ಲರು ಭಯದಿಂದ ಬದುಕುತ್ತಿದ್ದಾರೆ ಆದರೆ ನಾವು ಹಾಗಲ್ಲ ಎಂದು ಬಿಜೆಪಿಯ ಹಿರಿಯ ನಾಯಕ ಮಂಗಳವಾರದಂದು ಪಕ್ಷೇತರ ವೇದಿಕೆಯಾದ ರಾಷ್ಟ್ರ ಮಂಚ್ ಗೆ ಚಾಲನೆ ನೀಡುತ್ತಾ  ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರಾಷ್ಟ್ರ ಮಂಚ್ ಕೇಂದ್ರ ಸರ್ಕಾರದ  ಯೋಜನೆಗಳನ್ನು ವಿರೋಧಿಸಲು ವೇದಿಕೆಯನ್ನು ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು.


COMMERCIAL BREAK
SCROLL TO CONTINUE READING

ಇದೆ ಸಂದರ್ಭದಲ್ಲಿ ಈ ವೇದಿಕೆಗೆ ಬಿಜೆಪಿಯ ಶತ್ರುಘ್ನ ಸಿನ್ಹಾ, ತೃಣಮೂಲದ ದಿನೇಶ ತ್ರಿವೇದಿ, ಕಾಂಗ್ರೆಸ್ ನ ರೇಣುಕಾ ಚೌಧರಿ, ಮತ್ತು ಎನ್ಸಿಪಿ ಮಜೀದ್ ಮೆಮೊನ್, ಆಮ್ ಆದ್ಮಿ ಪಕ್ಷದ ಸಂಜಯ ಸಿಂಗ್, ಗುಜರಾತಿನ ಮಾಜಿ ಮುಖ್ಯಮಂತ್ರಿ ಸುರೇಶ ಮೆಹ್ತಾ, ಮತ್ತು ಜೆಡಿಯುನ ಪವನ್ ವರ್ಮಾ ಮುಂತಾದವರು ಈ ವೇದಿಕೆಗೆ ಬೆಂಬಲ ಸೂಚಿಸಿದ್ದಾರೆ. 


ಇದೆ ವೇಳೆ ಪ್ರತಿಕ್ರಯಿಸಿರುವ ಶತ್ರುಘ್ನ ಸಿನ್ಹಾ ತಮಗೆ ಪಕ್ಷದ ಒಳಗಡೆ ಮುಕ್ತವಾಗಿ ತಮ್ಮ ಅಭಿಪ್ರಾಯವನ್ನು ಅವಕಾಶ ನೀಡುತ್ತಿಲ್ಲ ಆದ್ದರಿಂದ ಈ ವೇದಿಕೆಗೆ ತಾವು ಸೇರಿರುವುದಾಗಿ ಎಂದು ತಿಳಿಸಿದರು. ಇನ್ನು ಮುಂದುವರೆದು ಯಶವಂತ್ ಸಿನ್ಹಾ ರವರ ಈ ಕ್ರಮವನ್ನು  ಪಕ್ಷ ವಿರೋಧಿ ಎನ್ನುವುದರ ಬದಲಾಗಿ ಇದು ರಾಷ್ಟ್ರ ಹಿತಾಸಕ್ತಿಗೆ ಪೂರಕವಾದದ್ದು ಎಂದು ಅವರು ಅಭಿಪ್ರಾಯಪಟ್ಟರು.


ಈ ವೇದಿಕೆಗೆ ಚಾಲನೆ ನೀಡಿ ಮಾತನಾಡಿದ ಯಶವಂತ ಸಿನ್ಹಾ ಈ ದೇಶದಲ್ಲಿ ಸಂವಾದ ಮತ್ತು ಚರ್ಚೆಗಳು ಏಕಮುಖವಾಗಿರುವುದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ ಎಂದು ಕಳವಳ ವ್ಯಕ್ತಪಡಿಸಿದರು.