ಅಲಹಾಬಾದ್: ಶೀಘ್ರದಲ್ಲೇ ಯೋಗಿ ಸರ್ಕಾರವು ಪ್ರಖ್ಯಾತ ನಗರವಾದ ಸಂಗಂ ನಗರಿ ಎಂದೂ ಸಹ ಕರೆಯಲ್ಪಡುವ ಅಲಹಾಬಾದ್ ಗೆ ಪ್ರಯಾಗ ರಾಜ್ ಎಂಬ ಹೆಸರನ್ನು ನೀಡಲಿದೆ.  ಹೆಸರು ಬದಲಿಸುವ ಪ್ರಕ್ರಿಯೆ 2019 ರ ಕುಂಭ ಮೇಳಕ್ಕೂ ಮುಂಚಿತವಾಗಿ  ಪೂರ್ಣಗೊಳ್ಳಲಿದೆ. ಆಜ್ಞೆಯನ್ನು ಸರ್ಕಾರವು ಬಿಡುಗಡೆ ಮಾಡಿದ ನಂತರ, ಅಲಹಾಬಾದ್ ಅನ್ನು ಅಧಿಕೃತವಾಗಿ ಪ್ರಯಾಗ ರಾಜ್ ಎಂದು ಕರೆಯಲಾಗುವುದು. ಹಿಂದೂಗಳಿಗೆ ಅಲಹಾಬಾದ್ ಒಂದು ಪವಿತ್ರ ಸ್ಥಳವಾಗಿದೆ. ಗಂಗಾ, ಯಮುನಾ ಮತ್ತು ಸರಸ್ವತಿ ಮೂರು ಪವಿತ್ರ ನದಿಗಳಲ್ಲಿ ಒಟ್ಟಾಗಿ ಭೇಟಿಯಾಗುತ್ತವೆ, ಇದರಿಂದ ಇದನ್ನು ತ್ರಿವೇಣಿ ಎಂದು ಕರೆಯಲಾಗುತ್ತದೆ. ಪ್ರತಿ 12 ವರ್ಷಕ್ಕೊಮ್ಮೆ ಅಲಹಾಬಾದ್ನಲ್ಲಿ ಕುಂಭ ಮೇಳವನ್ನು ಆಯೋಜಿಸಲಾಗುತ್ತದೆ.



COMMERCIAL BREAK
SCROLL TO CONTINUE READING

ರಾಜ್ಯದ ಉಪಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಸುದ್ದಿ ಸಂಸ್ಥೆ ANI ಜತೆ ಮಾತನಾಡುತ್ತಾ, ಅಲಹಾಬಾದ್ ಅನ್ನು ಶತಮಾನಗಳವರೆಗೆ ಪ್ರಯಾಗ್ ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು. ಆದ್ದರಿಂದ ಸರ್ಕಾರವು ಅಲಹಾಬಾದ್ ಹೆಸರನ್ನು ಪ್ರಯಾಗ ರಾಜ್ ಎಂದು ಬದಲಿಸಲು ನಿರ್ಧರಿಸಿದೆ ಎಂದು ತಿಳಿಸಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಹೆಸರು ಬದಲಿಸುವ ಪ್ರಕ್ರಿಯೆ 2019 ರ ಕುಂಭ ಮೇಳಕ್ಕೂ ಮುಂಚಿತವಾಗಿ  ಪೂರ್ಣಗೊಳ್ಳಲಿದೆ.