ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದ ಪ್ರಮುಖ ಆರೋಪಿ ಮೆಹುಲ್ ಚೋಕ್ಸಿ ಇದೀಗ ಜಾರಿ ನಿರ್ದೇಶನಾಲಯದ ವಿರುದ್ಧ ಗಂಭೀರ ಆರೋಪ ಮಾಡಿದ್ದು, ತನ್ನ ಮೇಲೆ ಜಾರಿ ನಿರ್ದೇಶನಾಲಯ ಮಾಡಿರುವ ಎಲ್ಲಾ ಆರೋಪಗಳೂ ನಿರಾಧಾರ ಮತ್ತು ಸುಳ್ಳು ಎಂದು ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಈ ಬಗ್ಗೆ ಎಎನ್ಐ ಸುದ್ದಿ ಸಂಸ್ಥೆಗೆ ಹೇಳಿಕೆ ನೀಡಿರುವ ಅವರು, ಜಾರಿ ನಿರ್ದೇಶನಾಲಯ ಮಾಡಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಅಲ್ಲದೇ ಜಾರಿ ನಿರ್ದೇಶನಾಲಯ ನಿಯಮ ಬಾಹಿರವಾಗಿ ನನ್ನ ಆಸ್ತಿ-ಪಾಸ್ತಿಗಳನ್ನ ಮುಟ್ಟುಗೋಲು ಹಾಕಿಕೊಂಡಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.



ಫೆ.16 ರಂದು ಭಾರತ ನನ್ನ ಪಾಸ್'ಪೋರ್ಟ್'ನ್ನು ರದ್ದು ಮಾಡಿದೆ. ಫೆ.20 ರಂದು ನನಗೆ ಪಾಸ್'ಪೋರ್ಟ್ ತಡೆಹಿಡಿರುವ ಕುರಿತು ಅಧಿಕಾರಿಗಳು ಇಮೇಲ್ ಮಾಡಿದ್ದಾರೆ. ಅಲ್ಲದೆ. ದೇಶದ ಭದ್ರತೆಗೆ ತೊಡಕಾಗುವ ಸಂಬಂಧ ಪಾಸ್'ಪೋರ್ಟ್ ತಡೆಹಿಡಿದಿರುವುದಾಗಿ ಹೇಳಿಕೆ ನೀಡಿದ್ದಾರೆ. ಈ ಸಂಬಂಧ ಮುಂಬೈ ಪ್ರಾದೇಶಿಕ ಪಾಸ್ ಪೋರ್ಟ್ ಕಚೇರಿಗೆ ಸ್ಪಷ್ಟೀಕರಣ ನೀಡುವಂತೆ ಮನವಿ ಮಾಡಿಕೊಂಡಿದ್ದರೂ ಯಾವುದೇ ರೀತಿಯ ಉತ್ತರ ಬಂದಿಲ್ಲ ಎಂದು ತಿಳಿಸಿದ್ದಾರೆ.