ಇಂದಿನಿಂದ ಅಲಾಯನ್ಸ್ ಏರ್ ವಿಮಾನಯಾನ ಸಂಚಾರ ಪುನರಾರಂಭ
ಅಲಾಯನ್ಸ್ ಏರ್ ಸಂಸ್ಥೆಯ ವಿಮಾನವು ಮೇ-28, 30 ಹಾಗೂ 31 ರಂದು ಬೆಳಿಗ್ಗೆ 11-45 ಗಂಟೆಗೆ ಕಲಬುರಗಿ ವಿಮಾನ ನಿಲ್ದಾಣಕ್ಕೆ ಲ್ಯಾಂಡ್ ಆಗಿ ಮಧ್ಯಾಹ್ನ 12-25 ಗಂಟೆಗೆ ಬೆಂಗಳೂರಿಗೆ ಮರು ಪ್ರಯಾಣ ಬೆಳಸಲಿದೆ.
ಕಲಬುರಗಿ: ಲಾಕ್ಡೌನ್ ಕಾರಣ ಕಳೆದ ಎರಡು ತಿಂಗಳನಿಂದ ಸ್ಥಗಿತಗೊಂಡಿದ್ದ ದೇಶಿಯ ವಿಮಾನಯಾನ ಸಂಚಾರ ಪುನರಾರಂಭಗೊಂಡಿದ್ದು, ಗುರುವಾರ ಅಲಾಯನ್ಸ್ ಎರ್ ಸಂಸ್ಥೆಯು ಬೆಂಗಳೂರು-ಕಲಬುರಗಿ ನಡುವೆ ವಾಣಿಜ್ಯ ವಿಮಾನ ಸಂಚಾರ ಪುನರಾರಂಭಿಸಲಿದೆ ಎಂದು ಕಲಬುರಗಿ ವಿಮಾನ ನಿಲ್ದಾಣದ ಎ.ಎ.ಐ. ನಿರ್ದೇಶಕ ಜ್ಣಾನೇಶ್ವರ ರಾವ್ ತಿಳಿಸಿದ್ದಾರೆ.
ಅಲಾಯನ್ಸ್ ಏರ್ ಸಂಸ್ಥೆಯ ವಿಮಾನವು ಮೇ-28, 30 ಹಾಗೂ 31 ರಂದು ಬೆಳಿಗ್ಗೆ 11-45 ಗಂಟೆಗೆ ಕಲಬುರಗಿ ವಿಮಾನ ನಿಲ್ದಾಣಕ್ಕೆ ಲ್ಯಾಂಡ್ ಆಗಿ ಮಧ್ಯಾಹ್ನ 12-25 ಗಂಟೆಗೆ ಬೆಂಗಳೂರಿಗೆ ಮರು ಪ್ರಯಾಣ ಬೆಳಸಲಿದೆ.
ಜೂನ್-1 ರಿಂದ ವಿಮಾನ ಸಂಚಾರ ಸಮಯದಲ್ಲಿ ಬದಲಾವಣೆ: ಅಲಾಯನ್ಸ್ ಏರ್ ಸಂಸ್ಥೆಯ ವಿಮಾನವು ಜೂನ್-1 ರಿಂದ ಸೋಮವಾರ ಮತ್ತು ಮಂಗಳವಾರ ಕಲಬುರಗಿ ವಿಮಾನ ನಿಲ್ದಾಣಕ್ಕೆ ಬೆಳಿಗ್ಗೆ 8-45 ಗಂಟೆಗೆ ಆಗಮಿಸಿ 9-25ಕ್ಕೆ ಬೆಂಗಳೂರಿನತ್ತ ಮರು ಪ್ರಯಾಣ ಬೆಳಸಲಿದೆ. ಬುಧವಾರದಿಂದ ರವಿವಾರ ವರೆಗೆ ಬೆಳಿಗ್ಗೆ 11-45 ಗಂಟೆಗೆ ಆಗಮಿಸಿ 12-25ಕ್ಕೆ ಬೆಂಗಳೂರಿಗೆ ಟೇಕ್ ಆಫ್ ಆಗಲಿದೆ ಎಂದು ಜ್ಣಾನೇಶ್ವರ ರಾವ್ ತಿಳಿಸಿದರು.