ನವದೆಹಲಿ: ನಟ ಅಲೋಕ್ ನಾಥ್ ಸೋಮವಾರ ತಮ್ಮ ಬಂದಿರುವ ಲೈಂಗಿಕ ಕಿರುಕುಳದ ಆರೋಪಗಳನ್ನು ವಿಚಾರವಾಗಿ  ನಿರ್ಮಾಪಕಿ ವಿಂಟಾ ನಂದಾ ವಿರುದ್ಧ  ಮಾನನಷ್ಟ ಮೊಕದ್ದಮೆ ಹೂಡಿ ಲಿಖಿತ ಕ್ಷಮಾಪಣೆ ಮತ್ತು ರೂ 1 ಅನ್ನು ಪರಿಹಾರವಾಗಿ ನೀಡಲು ಕೋರಿದ್ದಾರೆ.ಲೈಂಗಿಕ  ಕಿರುಕುಳದ ಆರೋಪ ಬಂದ ನಂತರ ನಟ ಆ ನಿರ್ಮಾಪಕಿಯ ಮೇಲೆ ಪ್ರಕರಣ ದಾಖಲಿಸುವುದಾಗಿ ಹೇಳಿದ್ದರು. 


COMMERCIAL BREAK
SCROLL TO CONTINUE READING

ಈಗ ಈ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದ ಅಲೋಕ್ ನಾಥ್ನ ವಕೀಲ ಅಶೋಕ್ ಸರಗೊ "ಅವರು ನೀಡಿದ ಅನಗತ್ಯವಾದ ಮಾನನಷ್ಟ ಹೇಳಿಕೆಗಳಿಗಾಗಿ ನಾವು ಅವರ ವಿರುದ್ಧ ಕ್ರಮ ಕೈಗೊಳ್ಳಲಿದ್ದೇವೆ" ಎಂದು ಹೇಳಿದ್ದಾರೆ.


ಈ ಎಲ್ಲ ಆಪಾದನೆಗಳು 19 ವರ್ಷದ ಹಿಂದಿನ ಘಟನೆಗೆ ಸಂಬಂಧಿಸಿವೆ ಎಂದು ಅಶೋಕ್ ಸಾರೋಗಿ ಹೇಳಿದ್ದಾರೆ. ನಿರ್ಮಾಪಕಿಯ ಹೇಳಿಕೆಯು ಅಲೋಕ್ ನಾಥ್ ಅವರ ಹೆಸರನ್ನು  ಹಾಳುಗೆಡುವ ಉದ್ದೇಶದಿಂದ ನೀಡಲಾಗಿದೆ.ಅಲ್ಲದೆ ನಿರ್ಮಾಪಕಿ ಮಾಡಿರುವ ಎಲ್ಲ ಹೇಳಿಕೆಯು ಸುಳ್ಳು ಎಂದು ವಕೀಲರು ತಿಳಿಸಿದ್ದಾರೆ.