ಅಮರನಾಥ ಯಾತ್ರೆ ಮತ್ತೆ ಆರಂಭ
ಅಮರನಾಥ್ ಯಾತ್ರೆಯ 28ನೇ ದಿನದಂದು 1, 629 ಯಾತ್ರಾರ್ಥಿಗಳು ದೇಗುಲದ ದರ್ಶನ ಪಡೆದಿದ್ದಾರೆ ಎಂದು ಶ್ರೀ ಅಮರನಾಥ ದೇಗುಲ ಮಂಡಳಿಯ ಅಧಿಕಾರಿಗಳು ತಿಳಿಸಿದ್ದಾರೆ.
ನವದೆಹಲಿ: ಪ್ರತಿಕೂಲ ಹವಾಮಾನದಿಂದಾಗಿ ಭಾನುವಾರ ರದ್ದಾಗಿದ್ದ ಅಮರನಾಥ ಯಾತ್ರೆಯು ಮತ್ತೆ ಸೋಮವಾರ ಆರಂಭವಾಗಿದೆ.
2,675 ಯಾತ್ರಾರ್ಥಿಗಳ ಒಂದು ತಂಡ ಭಗವತಿ ನಗರ ಯಾತ್ರಿ ನಿವಾಸದಿಂದ ಎರಡು ಭದ್ರತಾ ಬೆಂಗಾವಲು ಪಡೆಗಳೊಂದಿಗೆ ಕಣಿವೆಯಲ್ಲಿ ಹೊರಟಿದೆ. ಈ ಯಾತ್ರಾರ್ಥಿಗಳಲ್ಲಿ 1,131 ಮಂದಿ ಬಾಲ್ಟಾಲ್ ಬೇಸ್ ಕ್ಯಾಂಪ್‌ಗೆ ಹೋಗುತ್ತಿದ್ದರೆ, 1,544 ಮಂದಿ ಪೆಹಲ್ಗಮ್ ಬೇಸ್ ಕ್ಯಾಂಪ್‌ಗೆ ಹೋಗಲಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅದೇ ವೇಳೆ, ಅಮರನಾಥ್ ಯಾತ್ರೆಯ 28ನೇ ದಿನದಂದು 1, 629 ಯಾತ್ರಾರ್ಥಿಗಳು ದೇಗುಲದ ದರ್ಶನ ಪಡೆದಿದ್ದಾರೆ ಎಂದು ಶ್ರೀ ಅಮರನಾಥ ದೇಗುಲ ಮಂಡಳಿಯ ಅಧಿಕಾರಿಗಳು ತಿಳಿಸಿದ್ದಾರೆ. ಇಲ್ಲಿಯವರೆಗೆ 3,19,355 ಯಾತ್ರಿಗಳು ಪವಿತ್ರ ಗುಹಾ ದೇವಾಲಯದ ದರ್ಶನ ಪಡೆದಿದ್ದಾರೆ.
ಕಾಶ್ಮೀರದ ಹಿಮಾಲಯ ಪರ್ವತ ಶ್ರೇಣಿಗಳಲ್ಲಿ, ಸಮುದ್ರ ಮಟ್ಟದಿಂದ 3,888 ಮೀಟರ್ ಎತ್ತರದಲ್ಲಿರುವ ಅಮರನಾಥ ಗುಹೆಯಲ್ಲಿ ಮಂಜುಗಡ್ಡೆಯು ಶಿವಲಿಂಗದ ರೂಪದಲ್ಲಿ ರೂಪುಗೊಳ್ಳುತ್ತದೆ. ಭಕ್ತರ ಪ್ರಕಾರ, ಇದು ಶಿವನ ಪೌರಾಣಿಕ ಶಕ್ತಿಗಳ ಸಂಕೇತವಾಗಿದೆ.
ಜುಲೈ 1 ರಿಂದ ಪ್ರಾರಂಭವಾಗಿರುವ ಅಮರನಾಥ ಯಾತ್ರೆಯು ಆಗಸ್ಟ್ 15ರ ಶ್ರಾವಣ ಪೂರ್ಣಿಮೆಯವರೆಗೆ ನಡೆಯಲಿದೆ.