ಶ್ರೀನಗರ: ನಿನ್ನೆಯಷ್ಟೇ ಪ್ರಾರಂಭವಾದ ಅಮರನಾಥ ಯಾತ್ರೆ ಹವಾಮಾನ ವೈಪರಿತ್ಯದಿಂದಾಗಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ತಡರಾತ್ರಿ ಜಮ್ಮು-ಕಾಶ್ಮೀರದಲ್ಲಿ ಭಾರೀ ಮಳೆಯಿಂದಾಗಿ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದ್ದು, ಹವಾಮಾನ ಸರಿಹೋಗುವವರೆಗೂ ಪ್ರವಾಸಿಗರಿಗೆ ಶಿಬಿರದಲ್ಲೇ ಇರುವಂತೆ ಸೂಚಿಸಲಾಗಿದೆ. ಈ ವರ್ಷ ಅಮರನಾಥ ಯಾತ್ರೆಗೆ 2 ಲಕ್ಷ ಜನರು ನೋಂದಣಿ ಮಾಡಿದ್ದಾರೆ.


COMMERCIAL BREAK
SCROLL TO CONTINUE READING

60 ದಿನಗಳ ಕಾಲ ನಡೆಯಲಿರುವ ಅಮರನಾಥ ಯಾತ್ರೆಗೆ ಜೂನ್ 27ರಂದು ಮೊದಲ ಬ್ಯಾಚ್ ಪ್ರಯಾಣ ಆರಂಭಿಸಿತ್ತು. ಆದರೆ ಭಾರೀ ಮಳೆಯಿಂದಾಗಿ ಪ್ರಯಾಣ ತಾತ್ಕಾಲಿಕವಾಗಿ ಸ್ಥಗಿತಗೊಂಡಿತು. ಮುಂದಿನ 48 ಗಂಟೆ ಭಾರೀ ಮಳೆಯಾಗುವ ನಿರೀಕ್ಷೆ ಇರುವ ಕಾರಣ ಅಮರನಾಥ ಯಾತ್ರೆಯ ಪ್ರಯಾಣವನ್ನು ಸ್ವಲ್ಪ ಸಮಯದವರೆಗೆ ನಿಲ್ಲಿಸಲಾಗಿದೆ. ಈ ವರ್ಷ, ಆಡಳಿತವು ಅಮರನಾಥ ದೇವಸ್ಥಾನದ ಕಡೆಗೆ ಬರುವ ವಾಹನಗಳು ಟ್ರ್ಯಾಕ್ ಮಾಡಲು ರೇಡಿಯೊ ಫ್ರೀಕ್ವೆನ್ಸಿ (ಆರ್ಎಫ್) ಟ್ಯಾಗ್ ಅನ್ನು ಬಳಸುತ್ತಿದೆ.



ವಾರ್ಷಿಕ ಅಮರನಾಥ ಯಾತ್ರೆಯಲ್ಲಿ ಭದ್ರತೆಯನ್ನು ಖಾತರಿಪಡಿಸುವ ಪ್ರಯತ್ನದ ಭಾಗವಾಗಿ CRPF ವಿಶೇಷ ಮೋಟಾರ್ಸೈಕಲ್ ತಂಡವನ್ನು ಸ್ಥಾಪಿಸಿದೆ. "ಯಾತ್ರಿಕರ ಅನುಕೂಲತೆ ಮತ್ತು ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು CRPF ಒಂದು ವಿಶೇಷ ಮೋಟಾರ್ಸೈಕಲ್ ತಂಡವನ್ನು ಸಿದ್ಧಪಡಿಸಿದೆ. ಜಮ್ಮು ಮತ್ತು ಕಾಶ್ಮೀರ ಪೊಲೀಸ್, ಅರೆಸೈನಿಕ ಪಡೆಗಳು, ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್ಡಿಆರ್ಎಫ್) ಮತ್ತು ಭಾರತೀಯ ಸೈನ್ಯದ ಕನಿಷ್ಠ 40,000 ಭದ್ರತಾ ಸಿಬ್ಬಂದಿಯನ್ನು ಈ ವರ್ಷ ಅಮರನಾಥ ಯಾತ್ರೆಯಲ್ಲಿ ನಿಯೋಜಿಸಲಾಗಿದೆ.


ಯಾತ್ರೆಯ ಆರಂಭವಾಗುವ ಮೊದಲು, ಮೇ 24 ರಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು ಕಾಶ್ಮೀರ ಕಣಿವೆಗೆ ಭೇಟಿ ನೀಡಿ ಪ್ರಸ್ತುತ ಆರ್ಮಾನಾಥ ಯಾತ್ರೆಗೆ ಕೈಗೊಳ್ಳಲಾಗಿರುವ ವ್ಯವಸ್ಥೆಯನ್ನು ಪರಿಶೀಲಿಸಿದ್ದಾರೆ ಎಂದು ಶ್ರೀನಗರ ಮೂಲದ ರಕ್ಷಣಾ ವಕ್ತಾರ ಕೋಲ್ ರಾಜೇಶ್ ಕಾಲಿಯಾ ಹೇಳಿದ್ದಾರೆ.