ನವದೆಹಲಿ: ಅಮೆಜಾನ್ ಇಂಡಿಯಾ ತನ್ನ ಬಳಕೆದಾರರಿಗೆ ಅದ್ಭುತ ಸೇವೆಯೊಂದನ್ನು ಹೊತ್ತು ತರುತ್ತಿದೆ. COVID-19 ಕಾರಣದಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ತಮ್ಮ ಉದ್ಯೋಗವನ್ನು ಕಳೆದುಕೊಳ್ಳುತ್ತಿದ್ದಾರೆ. ಈ ಕಠಿಣ ಪರಿಸ್ಥಿತಿಯಲ್ಲಿ ಅಮೆಜಾನ್ ಅನೇಕ ಜನರಿಗೆ ಅರೆಕಾಲಿಕ ಕೆಲಸ ಮಾಡಿ ಹಣ ಗಳಿಸುವ ಅವಕಾಶವನ್ನು ನೀಡುತ್ತಿದೆ. ಈ ನಿಟ್ಟಿನಲ್ಲಿ, ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಜೆಫ್ ಬೆಜೋಸ್ ತನ್ನ ಫ್ಲೆಕ್ಸ್ ಸ್ವತಂತ್ರ ವಿತರಣಾ ಕಾರ್ಯಕ್ರಮ((Flex Freelance Delivery Program) )ವನ್ನು ಭಾರತದ 35 ಕ್ಕೂ ಹೆಚ್ಚು ನಗರಗಳಿಗೆ ವಿಸ್ತರಿಸುವುದಾಗಿ ಘೋಷಿಸಿದ್ದಾರೆ.



COMMERCIAL BREAK
SCROLL TO CONTINUE READING

ಈ ಸೇವೆಯ ಮೂಲಕ ಬಳಕೆದಾರರು ತಮ್ಮ ಬಿಡುವಿನ ಸಮಯದಲ್ಲಿ ದಿನವೊಂದಕ್ಕೆ 120-140 ರೂ. ಗಳಿಕೆ ಮಾಡಬಹುದು. ಕಳೆದ ವರ್ಷ ಆರಂಭಿಸಲಾಗಿರುವ ಈ ಫ್ಲೆಕ್ಸ್ ವಿತರಣಾ ಕಾರ್ಯಕ್ರಮ ಬಳಕೆದಾರರಿಗೆ ಕಂಪನಿಯ ಜೊತೆಗೆ ಸೇರಲು ಮತ್ತು ಫ್ರೀಲಾನ್ಸ್ ಕೆಲಸದ ಮೂಲಕ ಪ್ಯಾಕೇಜ್ ಗಳನ್ನು ಗ್ರಾಹಕರಿಗೆ ತಲುಪಿಸಲು ಸಹಾಯ ಮಾಡುತ್ತದೆ.


ಈ ಸೇವೆಯನ್ನು ಕಳೆದ ವರ್ಷ ಜೂನ್ 2019 ರಲ್ಲಿ ಪ್ರಾರಂಭಿಸಲಾಗಿತ್ತು. ಇದನ್ನು ಮೊದಲು 3 ನಗರಗಳಿಗೆ ಸೀಮಿತಗೊಳಿಸಲಾಗಿತ್ತು. ಆದರೆ, ಈಗ ಅದು 2020 ರ ಜೂನ್‌ನಲ್ಲಿ 35 ನಗರಗಳನ್ನು ತಲುಪಿದೆ. ಈ ಕಾರ್ಯಕ್ರಮದ ಮೂಲಕ, ಮೆಟ್ರೊ ಮತ್ತು ಮೆಟ್ರೋಗಳಲ್ಲದ ನಗರಗಲಾಗಿರುವ ರಾಯ್‌ಪುರ, ಹೂಗ್ಲಿ, ಗ್ವಾಲಿಯರ್ ಮತ್ತು ನಾಸಿಕ್ ಮುಂತಾದ ಜನರಿಗೆ ಸಾವಿರಾರು ಅರೆಕಾಲಿಕ ಕೆಲಸದ ಅವಕಾಶಗಳನ್ನು ಕಲ್ಪಿಸಲಾಗುತ್ತಿದೆ. ಕರೋನಾದ ಕಾರಣದಿಂದಾಗಿ ಹೆಚ್ಚಿನ ಜನರು ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡುತ್ತಿದ್ದಾರೆ. ಇದರಿಂದಾಗಿ ಮನೆ ವಿತರಣೆಯ ಬೇಡಿಕೆಯೂ ಕೂಡ ಹೆಚ್ಚುತ್ತಿದೆ.


ಈ ಸೇವೆಯಲ್ಲಿ, ಅರೆಕಾಲಿಕ ಕೆಲಸ ಮಾಡಲು ಬಯಸುವ ಬಳಕೆದಾರರು, ವಿತರಣಾ ಪಾಲುದಾರರಾಗಿ ಅಂದರೆ ಡಿಲೆವರಿ ಪಾರ್ಟ್ನರ್ ಆಗಿ ಸೈನ್ ಅಪ್ ಮಾಡಬಹುದು ಮತ್ತು ತಮ್ಮ ವೇಳಾಪಟ್ಟಿಯನ್ನು ಆಯ್ಕೆ ಮಾಡಿ, ಪ್ಯಾಕೇಜ್‌ಗಳನ್ನು ತಲುಪಿಸಬಹುದು. ಅಲ್ಲದೆ, ನೀವು ಅಮೆಜಾನ್ ಫ್ಲೆಕ್ಸ್ ಅಪ್ಲಿಕೇಶನ್ ಬಳಸಿ ಈ ಸೇವೆಯನ್ನು ಇನ್ನಷ್ಟು ಸುಲಭವಾಗಿ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ ಬಳಕೆದಾರರು https://flex.amazon.in ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ತನ್ನ ಫ್ಲೆಕ್ಸ್ ಪಾಲುದಾರರ ಸುರಕ್ಷತೆ ಖಚಿತಪಡಿಸಿಕೊಳ್ಳಲು ಸಂಪೂರ್ಣ ಕಾಳಜಿ ವಹಿಸಲಿದೆ ಎಂದು ಹೇಳಿದೆ.