ನವದೆಹಲಿ: ಕೊರೊನಾ ಮಹಾಮಾರಿ ವಿಶ್ವಾದ್ಯಂತ ಹಲವು ಉದ್ಯಮಗಳ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಹೀಗಾಗಿ ಕಂಪನಿಗಳು ಉದ್ಯೋಗಗಳಲ್ಲಿ ಹೊಸ ನೇಮಕಾತಿಯನ್ನು ಮಾಡುವುದರಿಂದ ದೂರಸರಿಯುತ್ತಿವೆ. ಇದರಿಂದಾಗಿ ನೌಕರಿ ಹುಡುಕುತ್ತಿರುವ ಯುವಕರು ತೊಂದರೆ ಎದುರಿಸುವಂತಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಅಮೆಜಾನ್ ಇಂಡಿಯಾ ಭಾರತದಲ್ಲಿ ತನ್ನ ಕೌಶಲ್ಲ್ಯ ಅಭಿವೃದ್ಧಿ ಕಾರ್ಯಕ್ರಮ ಆರಂಭಿಸಿದೆ. ಇದರಲ್ಲಿ ಭಾಗವಹಿಸುವ ಯುವಕರಿಗೆ ನೌಕರಿ ಮಾಡುವ ಅವಕಾಶ ಕೂಡ ಲಭಿಸುವ ಎಲ್ಲ ಸಾಧ್ಯತೆಗಳಿವೆ. ಕಂಪನಿ ತನ್ನ ಈ ತರಬೇತಿ ಕಾರ್ಯಕ್ರಮಕ್ಕೆ ನ್ಯಾಷನಲ್ ಅಪ್ರೆಂಟಿಶಿಪ್ ಪ್ರಮೋಷನ್ ಸ್ಕೀಮ್ (NAPS) ಎಂದು ಹೆಸರಿಸಿದೆ. ಈ ಕಾರ್ಯಕ್ರಮದ ಅಡಿ ಒಟ್ಟು 1000 ಯುವಕರನ್ನು ಸೇರಿಸಿ, ಅವರಿಗೆ ತರಬೇತಿ ನೀಡುವುದು ಮತ್ತು ಅವರ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವುದು ಇದರ ಗುರಿಯಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.


COMMERCIAL BREAK
SCROLL TO CONTINUE READING

ವೆಯರ್ ಹೌಸಿಂಗ್ ಹಾಗೂ ಇನ್ವೆಂಟ್ರೀ ಮ್ಯಾನೇಜ್ಮೆಂಟ್ ತರಬೇತಿ ನೀಡಲಾಗುವುದು
ಯಾವ ಯುವಕರ ತರಬೇತಿ ಹಾಗೂ ಪ್ಲೇಸ್ಮೆಂಟ್ ಮೇಲೆ ಕೊವಿಡ್ 19 ಪ್ರಕೋಪ ಪ್ರಭಾವ ಬೀರಿದೆಯೋ ಅಂತಹ ಯುವಕರಿಗೆ ತರಬೇತಿ ನೀಡುವುದು ಈ ಕಾರ್ಯಕ್ರಮದ ಗುರಿಯಾಗಿದೆ ಎಂದು ಕಂಪನಿ ಹೇಳಿದೆ. ಈ ಕಾರ್ಯಕ್ರಮದ ಅಡಿ ಯುವಕರಿಗೆ ಉಗ್ರಾಣ ಮತ್ತು ದಾಸ್ತಾನು ನಿರ್ವಹಣೆಯ ಕುರಿತು ತರಬೇತಿ ನೀಡಲಾಗುವುದು. ಇದು ಯುವಕರಿಗೆ ವೆಯರ್ ಹೌಸ್ ಅಸ್ಸೋಸಿಯೇಟ್ಸ್ ಹಾಗೂ ಪ್ರೋಸೆಸ್ ಅಸ್ಸೋಸಿಯೇಟ್ಸ್ ನೌಕರಿ ಮಾಡಲು ಸಹಾಯಕಾರಿಯಾಗಲಿದೆ. 


ಈ ಕಾರ್ಯಕ್ರಮದ ಅಡಿ ದೆಹಲಿ, ಮುಂಬೈ, ಬೆಂಗಳೂರು ಮತ್ತು ಹೈದರಾಬಾದ್ ಕೇಂದ್ರಗಳಲ್ಲಿ ಕ್ಲಾಸ್ ರೂಮ್ ನಿಂದ ಹಿಡಿದು ಆನ್-ದಿ ಜಾಬ್ ಲರ್ನಿಂಗ್ ಹಾಗೂ ಮೌಲ್ಯಮಾಪನಗಳ ಕೆಲಸ ನಡೆಯಲಿದೆ. ಇದಕ್ಕಾಗಿ ಯುವಕರ ಆಯ್ಕೆಯನ್ನು ಹಲವು ಸಂಸ್ಥೆಗಳ ಮೂಲಕ ನಡೆಸಲಾಗುತ್ತಿದ್ದು, ಇದರಲ್ಲಿ NSDC ನಿಂದ ಮಾನ್ಯತೆ ಪಡೆದ ತರಬೇತಿ ಕೇಂದ್ರಗಳು ಹಾಗೂ NSDC ಸ್ಕಿಲ್ಲಿಂಗ್ ಡೇಟಾಬೇಸ್ ಗಳೂ ಕೂಡ ಶಾಮೀಲಾಗಿವೆ.


ಮಾಸಿಕ ಸ್ಟೈಪೆಂಡ್ ಜೊತೆಗೆ ಪ್ರಮಾಣ ಪತ್ರ ಕೂಡ ಸಿಗಲಿದೆ
ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಯುವಕರಿಗೆ ಮಾಸಿಕ ಸ್ಟೈಪೆಂಡ್ ಸಿಗಲಿದೆ, ಈ ತರಬೇತಿ ಕಾರ್ಯಕ್ರಮದ ಕೊನೆಯಲ್ಲಿ, ಲಾಜಿಸ್ಟಿಕ್ಸ್ ಸೆಕ್ಟರ್ ಸ್ಕಿಲ್ ಕೌನ್ಸಿಲ್ ಯುವಕರ ಮೌಲ್ಯಮಾಪನ ನಡೆಸಲಿದೆ ಮತ್ತು ಮೌಲ್ಯಮಾಪನದ ಆಧಾರದ ಮೇಲೆ ಅವರಿಗೆ ಪ್ರಮಾಣಪತ್ರ ಕೂಡ ನೀಡಲಿದೆ. ಇದಲ್ಲದೆ ಎಲ್ಲ ಯುವಕರಿಗೆ ಪ್ರಸ್ತುತ ಸಿಜನಲ್ ಅಥವಾ ಫುಲ್ ಟೈಮ್ ಉದ್ಯೋಗಾವಕಾಶ ಕೂಡ ಕಲ್ಪಿಸಲಾಗುವುದು.


ಆರೋಗ್ಯ ಮತ್ತು ಸುರಕ್ಷತಾ ಕ್ರಮಗಳ ಉನ್ನತ ಗುನಮತ್ತಗಳನ್ನು ಅನುಸರಿಸುವ ಮೂಲಕ ಎಲ್ಲಾ ತರಬೇತಿ ಅವಧಿಗಳನ್ನು ನಡೆಸಲಾಗುವುದು ಎಂದು ಅಮೆಜಾನ್ ಹೇಳಿದೆ. ಇದರಲ್ಲಿ ಸಾಮಾಜಿಕ ಅಂತರ ಮತ್ತು ನಿಯಮಿತ ಸ್ಯಾನಿಟೈಸೆಷನ್ ನಿಯಮಗಳು ಒಳಗೊಂಡಿದೆ. ಕಂಪನಿಯ ಪ್ರಕಾರ, ಈ ಕಾರ್ಯಕ್ರಮದ ಮೂಲಕ, ಅಮೆಜಾನ್ ಇಂಡಿಯಾ ಯುವಕರ ಕೌಶಲ್ಯಾಭಿವೃದ್ಧಿ  ಹಾಗೂ ಅದನ್ನು ಸುಧಾರಿಸುವ ಸರ್ಕಾರದ ಬದ್ಧತೆಗೆ ಕೊಡುಗೆ ನೀಡಲಿದೆ ಎಂದು ಹೇಳಿದೆ.