ಅಮೇಥಿ: ಅಮೇಥಿ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದೆ ಸ್ಮೃತಿ ಇರಾನಿ ನಿಕಟವರ್ತಿ, ಮಾಜಿ ಮುಖಂಡ ಹಾಗೂ ಸುರೇಂದ್ರ ಕುಮಾರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ಬಂಧಿಸಿದ್ದು, ಐವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. 


COMMERCIAL BREAK
SCROLL TO CONTINUE READING

ಉತ್ತರಪ್ರದೇಶದ ಅಮೇಥಿಯ ಬರೌಲಿಯಾ ಗ್ರಾಮದಲ್ಲಿ ಶನಿವಾರ ತಡರಾತ್ರಿ ದುಷ್ಕರ್ಮಿಗಳಿಂದ ಸುರೇಂದ್ರ ಸಿಂಗ್ ಹತ್ಯೆಯಾಗಿತ್ತು. ಬಳಿಕ ಮೃತನ ಕುಟುಂಬದವರು ಈ ಬಗ್ಗೆ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಸಂಬಂಧ ವಸೀಮ್, ನಸೀಮ್, ಗೋಲು, ಧರ್ಮನಾಥ್ ಮತ್ತು ಬ್ಲಾಕ್ ಡೆವಲಪ್ ಮೆಂಟ್ ಕಮಿಟಿ ಸದಸ್ಯ ಹಾಗೂ ಕಾಂಗ್ರೆಸ್ ನಾಯಕ ರಾಮಚಂದ್ರ ಎಂಬುವರ ವಿರುದ್ಧ ಐಪಿಸಿ ಸೆಕ್ಷನ್ 302 ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದ ಪೋಲಿಸ್ ಅಧೀಕ್ಷಕ ದಯಾರಾಮ್ ಮಾಹಿತಿ ನೀಡಿದ್ದಾರೆ.


ನಸೀಮ್, ವಸೀಮ್ ಮತ್ತು ಗೋಲು ವಿರುದ್ಧ ಹತ್ಯೆ ಆರೋಪಿಗಳಾಗಿದ್ದು, ಲೋಕಸಭೆ ಚುನಾವಣೆ ಮತ್ತು ಪಂಚಾಯತ್ ಚುನಾವಣೆಗೆ ಸಂಬಂಧಿಸಿದಂತೆ ಹತ್ಯೆ ಎಸಗಲಾಗಿದೆ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ಅವರು ಹೇಳಿದ್ದಾರೆ. 


ಅಮೇಥಿಯಲ್ಲಿ ಸುರೇಂದ್ರ ಸಿಂಗ್ ಹತ್ಯೆ ವಿಚಾರ ತಿಳಿಯುತ್ತಿದ್ದಂತೆ ದೆಹಳಿಯಿಂದ ಆಗಮಿಸಿದ ಬಿಜೆಪಿ ಸಂಸದೆ ಸ್ಮೃತಿ ಇರಾನಿ, ಸುರೇಂದ್ರ ಸಿಂಗ್ ಅಂತಿಮ ಯಾತ್ರೆಯಲ್ಲಿ ಭಾಗಿಯಾಗಿದ್ದಲ್ಲದೆ, ಅವರ ಪಾರ್ಥಿವ ಶರೀರಕ್ಕೆ ಹೆಗಲು ಕೊಟ್ಟು ನಡೆದಿದ್ದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಈ ಘಟನೆಯಿಂದ ಬಹಳ ದುಃಖವಾಗಿದೆ, ಅವರ ಕೊಲೆ ಮಾಡಿದ ಹಾಗೂ ಕೊಲೆಗೆ ಸುಪಾರಿ ಕೊಟ್ಟವರನ್ನು ನಾನು ಸುಪ್ರೀಂ ಕೋರ್ಟ್ ಗೆ ಕರೆದೊಯ್ಯುತ್ತೇನೆ. ಅದು ಯಾರೇ ಆಗಿರಲಿ ಮರಣದಂಡನೆಯಾಗಬೇಕು. ಇದಕ್ಕಾಗಿ ಮೋದಿ ಹಾಗೂ ಯೋಗಿ ಆದಿತ್ಯನಾಥ್ ಸಹಕಾರ ನೀಡಬೇಕೆಂದು ಅವರು ಕೋರಿದ್ದರು.