Karnataka Election 2023: ಅಮುಲ್ vs ನಂದಿನಿ ವಿವಾದದ ನಡುವೆಯೇ ನಂದಿನಿ ಸ್ಟೋರ್‌ಗೆ ರಾಹುಲ್ ಗಾಂಧಿ ಭೇಟಿ, ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ
Karnataka Assembly Elections 2023: ಅಮುಲ್ vs ನಂದಿನಿ ವಿವಾದದ ನಡುವೆಯೇ ನಂದಿನಿ ಸ್ಟೋರ್‌ಗೆ ರಾಹುಲ್ ಗಾಂಧಿ ಭೇಟಿ ನೀಡಿದ್ದಾರೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
Rahul Gandhi Karnataka Rally: ಮಾರ್ಚ್ 29 ರಂದು ಕರ್ನಾಟಕ ವಿಧಾನಸಭಾ ಚುನಾವಣೆ ಘೋಷಣೆಯಾದ ನಂತರ ರಾಹುಲ್ ಗಾಂಧಿ ಅವರು ಭಾನುವಾರ (ಏಪ್ರಿಲ್ 16) ಮೊದಲ ಬಾರಿಗೆ ರಾಜ್ಯಕ್ಕೆ ಭೇಟಿ ನೀಡಿದ್ದರು. ಅಮುಲ್ vs ನಂದಿನಿ ವಿವಾದದ ನಡುವೆಯೇ ರಾಹುಲ್ ಗಾಂಧಿ ಬೆಂಗಳೂರಿನ ನಂದಿನಿ ಸ್ಟೋರ್‌ಗೆ ಹೋಗಿದ್ದರು. ಬಳಿಕ ಟ್ವೀಟ್ ಮಾಡಿರುವ ಅವರು, ಕರ್ನಾಟಕದ ಹೆಮ್ಮೆ - ನಂದಿನಿ ಅತ್ಯುತ್ತಮ ಎಂದು ಬರೆದಿದ್ದಾರೆ. ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಹೆದರುವುದಿಲ್ಲ. ನನ್ನನ್ನು ಸಂಸತ್ತಿನಿಂದ ತೆಗೆದುಹಾಕುವ ಮೂಲಕ, ಹೆದರಿಸಬಹುದೆಂದು ಅದು (ಬಿಜೆಪಿ) ಭಾವಿಸುತ್ತದೆ. ನನ್ನನ್ನು ಅನರ್ಹಗೊಳಿಸಿ, ಜೈಲಿಗೆ ಹಾಕಿ, ನಾನು ಅವರಿಗೆ ಹೆದರುವುದಿಲ್ಲ ಎಂದು ರಾಹುಲ್ ಗಾಂಧಿ ಪುನರುಚ್ಚರಿಸಿದ್ದಾರೆ.
ನೀವು ಅದಾನಿಗೆ ಮನಃಪೂರ್ವಕವಾಗಿ ಸಹಾಯ ಮಾಡಿದ್ದೀರಿ, ನಾವು ಕರ್ನಾಟಕದ ಜನರಿಗೆ ಮನಃಪೂರ್ವಕವಾಗಿ ಸಹಾಯ ಮಾಡುತ್ತೇವೆ. ಕರ್ನಾಟಕದ ಜನತೆಗೆ 4 ಭರವಸೆಗಳನ್ನು ನೀಡಿದ್ದೇವೆ. ಮೊದಲನೆಯದು ಪ್ರತಿ ಮನೆಯ ಕುಟುಂಬಕ್ಕೆ 200 ಯೂನಿಟ್ ಉಚಿತ ವಿದ್ಯುತ್, ಎರಡನೇಯ ಭರವಸೆ ಪ್ರತಿ ಮಹಿಳೆಗೆ ಪ್ರತಿ ತಿಂಗಳು 2000 ರೂಪಾಯಿ, ಮೂರನೇ ಭರವಸೆ ಪ್ರತಿ ಕುಟುಂಬಕ್ಕೆ ಪ್ರತಿ ತಿಂಗಳು 10 ಕೆಜಿ ಅಕ್ಕಿ ಉಚಿತವಾಗಿ ನೀಡಲಾಗುವುದು, ನಾಲ್ಕನೇ ಯೋಜನೆಯು ಕರ್ನಾಟಕದ ಪ್ರತಿ ಪದವೀಧರರಿಗೆ ರೂ 3000 ಮತ್ತು ಡಿಪ್ಲೋಮಾ ಹೊಂದಿರುವವರಿಗೆ 2 ವರ್ಷಗಳವರೆಗೆ ಪ್ರತಿ ತಿಂಗಳು ರೂ 1500 ನೀಡಲಾಗುವುದು ಎಂದು ರಾಹುಲ್ ಗಾಂಧಿ ಹೇಳಿದರು.
ಇದನ್ನೂ ಓದಿ :
ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಏನು ಕೆಲಸ ಮಾಡಿದೆ. ಅವರು 40% ಕಮಿಷನ್ ತಿನ್ನುತ್ತಿದ್ದರು. ಕೆಲಸ ಮಾಡಿಸಲು ಬಿಜೆಪಿ ಸರ್ಕಾರ ಕರ್ನಾಟಕದ ಜನರ ಹಣ ದೋಚಿದೆ. ಏನೇ ಮಾಡಿದರೂ ಶೇ.40 ಕಮಿಷನ್ ತೆಗೆದುಕೊಂಡರು. ನಾನು ಇದನ್ನು ಹೇಳುತ್ತಿಲ್ಲ, ಗುತ್ತಿಗೆದಾರರ ಸಂಘವು ಪ್ರಧಾನಿಗೆ ಪತ್ರ ಬರೆದಿದೆ. ಈ ಪತ್ರಕ್ಕೆ ಪ್ರಧಾನಿ ಉತ್ತರ ನೀಡಿಲ್ಲ. ಪತ್ರಕ್ಕೆ ಉತ್ತರ ನೀಡಿಲ್ಲ ಎಂದರೆ ಕರ್ನಾಟಕದಲ್ಲಿ ಶೇ.40 ಕಮಿಷನ್ ತೆಗೆದುಕೊಳ್ಳುವುದನ್ನು ಪ್ರಧಾನಿ ಒಪ್ಪಿಕೊಂಡಿದ್ದಾರೆ ಎಂದರ್ಥ ಎಂದರು.
ಬೆಂಗಳೂರಿನ ಇಂದಿರಾಗಾಂಧಿ ಭವನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ, ದ್ವೇಷ, ಹಿಂಸಾಚಾರ, ಸಂಸ್ಥೆಗಳ ಮೇಲಿನ ದಾಳಿಯ ವಿಷಯದಲ್ಲಿ ಬಿಜೆಪಿ ದೇಶಕ್ಕಾಗಿ ಏನು ಮಾಡುತ್ತಿದೆ ಎಂಬುದು ನಮ್ಮಲ್ಲಿ ಹೆಚ್ಚಿನವರಿಗೆ ತಿಳಿದಿದೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದರು. ಇವು ಎಲ್ಲರಿಗೂ ಕಾಣುವ ಸಂಗತಿಗಳು. ನಮ್ಮ ದೇಶದ ಸ್ವರೂಪ ದಾಳಿಗೆ ಒಳಗಾಗುತ್ತಿದೆ. ಈಗ ನಾವು ಕರ್ನಾಟಕದಲ್ಲಿ ಚುನಾವಣೆಯನ್ನು ಎದುರಿಸುತ್ತಿದ್ದೇವೆ ಮತ್ತು ಕಾಂಗ್ರೆಸ್ ಪಕ್ಷದ ಪರವಾಗಿ ಬಲವಾದ ಬೆಂಬಲ ವ್ಯಕ್ತವಾಗಿರುವುದನ್ನು ನೋಡಿ ನನಗೆ ಸಂತೋಷವಾಗಿದೆ. ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲಲಿದೆ ಎಂದು ನಂಬಿದ್ದೇನೆ ಎಂದು ರಾಹುಲ್ ಹೇಳಿದರು.
ಇದನ್ನೂ ಓದಿ :
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.