ನವದೆಹಲಿ: ಕೊರೋನಾಗೆ ಸಂಬಂಧ ಪಟ್ಟ ಹಾಗೆ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಪೂರೈಕೆ, ಅಗತ್ಯ ಔಷಧಿಗಳ ಲಭ್ಯತೆ, ಲಸಿಕೆ ವಿಧಾನದ ಬಗ್ಗೆ ನ್ಯಾಷನಲ್ ಪ್ಲಾನ್ ಅನ್ನು ವಿವರಿಸುವಂತೆ ಸುಪ್ರೀಂ ಕೋರ್ಟ್‌ ಇಂದು ಕೇಂದ್ರ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿದೆ.


COMMERCIAL BREAK
SCROLL TO CONTINUE READING

ದೇಶದ ಸಧ್ಯದ ಪರಿಸ್ಥಿತಿ "ರಾಷ್ಟ್ರೀಯ ತುರ್ತುಸ್ಥಿತಿ"(National Emergency) ಯಂತಿದೆ, ಇದೀಗ ವಿವಿಧ ಹೈಕೋರ್ಟ್‌ಗಳಿಂದ ಕೆಲವು ಸಮಸ್ಯೆಗಳನ್ನು ಹಿಂತೆಗೆದುಕೊಳ್ಳಲು ಮತ್ತು ಆ ಸಮಸ್ಯೆಗಳನ್ನು ತಾನೇ ವರ್ಗಾಯಿಸಲು ಯೋಜಿಸುತ್ತಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.


ಇದನ್ನೂ ಓದಿ : Corona vaccination : 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ, ಇಲ್ಲಿದೆ ಅತಿ ಮುಖ್ಯ ಮಾಹಿತಿ


"ನ್ಯಾಯಾಲಯವಾಗಿ ನಾವು ಕೆಲವು ವಿಷಯಗಳ ಬಗ್ಗೆ ಅರಿವು ಮೂಡಿಸಲು ಬಯಸುತ್ತೇವೆ. ಹೈಕೋರ್ಟ್‌ಗಳು ನ್ಯಾಯವ್ಯಾಪ್ತಿಯನ್ನು ಉತ್ತಮ ಹಿತಾಸಕ್ತಿಯಿಂದ ನಿರ್ವಹಿಸುತ್ತಿದ್ದಾರೆ. ಆದರೆ ಇದು ಗೊಂದಲ ಮತ್ತು ಸಂಪನ್ಮೂಲಗಳ ಕೊರತೆಯನ್ನು ಸೃಷ್ಟಿಸುತ್ತಿದೆ." ಎಂದು ಸುಪ್ರೀಂ ಕೋರ್ಟ್(Supreme Court) ಹೇಳಿದೆ.


ಇದನ್ನೂ ಓದಿ : Covid-19 ರೋಗಿಯನ್ನು ಯಾವಾಗ ಆಸ್ಪತ್ರೆಗೆ ಸೇರಿಸಬೇಕು? ಕೇವಲ 6 ನಿಮಿಷಗಳಲ್ಲಿ ಈ ರೀತಿ ಪತ್ತೆ ಹಚ್ಚಿ


ದೆಹಲಿ, ಬಾಂಬೆ ಸಿಕ್ಕಿಂ, ಮಧ್ಯ ಪ್ರದೇಶ, ಕಲ್ಕತ್ತಾ ಮತ್ತು ಅಲಹಾಬಾದ್ ಈ ಆರು ಹೈಕೋರ್ಟ್‌ಗಳು ಕೋವಿಡ್(COVID-19) ನಿರ್ವಹಣೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ವ್ಯವಹರಿಸುತ್ತಿವೆ ಮತ್ತು ಇದು ಗೊಂದಲವನ್ನು ಸೃಷ್ಟಿಸುತ್ತಿದೆ ಎಂದು ನ್ಯಾಯಪೀಠ ಗಮನಿಸಿದೆ.


ಇದನ್ನೂ ಓದಿ : AK Walia: ಹಿರಿಯ ಕಾಂಗ್ರೆಸ್ ಮುಖಂಡ ಎ.ಕೆ.ವಾಲಿಯಾ ಕೊರೋನಾಗೆ ಬಲಿ!


ಮುಖ್ಯ ನ್ಯಾಯಮೂರ್ತಿ ಎಸ್‌ಎ ಬೊಬ್ಡೆ(SA Bobde) ನೇತೃತ್ವದ ನ್ಯಾಯಪೀಠವು ಹಿರಿಯ ವಕೀಲ ಹರೀಶ್ ಸಾಲ್ವೆ ಅವರನ್ನು ಈ ವಿಷಯದಲ್ಲಿ ಅಮಿಕಸ್ ಕ್ಯೂರಿಯನ್ನಾಗಿ ನೇಮಿಸಿತು.


ಇದನ್ನೂ ಓದಿ : Covid Vaccine Report: ಮೊದಲ ಮತ್ತು ಎರಡನೇ ಡೋಸ್ ಲಸಿಕೆ ಪಡೆದ 21 ಸಾವಿರ ಜನರಿಗೆ ಕೊರೋನಾ ಪಾಸಿಟಿವ್!


ಆಸ್ಪತ್ರೆಗಳಲ್ಲಿ ಆಮ್ಲಜನ(oxygen)ಕದ ಕೊರತೆ, ಔಷಧಿಗಳ ಲಭ್ಯತೆ, ಮತ್ತು ಲಾಕ್‌ಡೌನ್ ವಿಧಿಸಲು ಅಥವಾ ಕೋವಿಡ್ -19 ವ್ಯಾಕ್ಸಿನೇಷನ್ ಡ್ರೈವ್ ಅನ್ನು ಶುಕ್ರವಾರ (ಏಪ್ರಿಲ್ 23) ಪ್ರಾರಂಭಿಸುವ ಹಕ್ಕನ್ನು ಯಾರು ಹೊಂದಿದ್ದಾರೆ ಎಂದು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಲಿದೆ.


ಇದನ್ನೂ ಓದಿ : Covid-19: ಭಾರತದಲ್ಲಿ ಕರೋನಾ 2ನೇ ಅಲೆ ಯಾವಾಗ ಉತ್ತುಂಗಕ್ಕೇರಲಿದೆ? CEA ಕೆ.ವಿ.ಸುಬ್ರಮಣಿಯನ್ ಹೇಳಿದ್ದೇನು?


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.