ನವದೆಹಲಿ: ಗೃಹ ಸಚಿವ ಅಮಿತ್ ಶಾ (Amit Shah) ಅವರನ್ನು ಮತ್ತೊಮ್ಮೆ ಏಮ್ಸ್ ಗೆ ದಾಖಲಿಸಲಾಗಿದೆ. ಮೂಲಗಳಿಂದ ಬಂದ ಮಾಹಿತಿಯ ಪ್ರಕಾರ, ಅವರು ಉಸಿರಾಡಲು ತೊಂದರೆ ಅನುಭವಿಸುತ್ತಿದ್ದರು, ನಂತರ ಅವರನ್ನು ಶನಿವಾರ ತಡರಾತ್ರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ,  ಏಮ್ಸ್ ಆಡಳಿತ ಇದನ್ನು ಅಧಿಕೃತವಾಗಿ ದೃಢಪಡಿಸಿಲ್ಲ. ಏಮ್ಸ್ ಮೂಲಗಳ ಪ್ರಕಾರ, ಶಾ ಅವರನ್ನು ಸಿಎನ್ ಟವರ್‌ನಲ್ಲಿ ಇರಿಸಲಾಗಿದೆ. ಡಾ. ರಂದೀಪ್ ಗುಲೇರಿಯಾ ಅವರ ನೇತೃತ್ವದಲ್ಲಿ ತಜ್ಞ ವೈದ್ಯರ ತಂಡ ಅವರ ಆರೋಗ್ಯ ಸ್ಥಿತಿಯ ಮೇಲೆ ನಿಗಾವಹಿಸಿದೆ. ಸದ್ಯ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎನ್ನಲಾಗಿದೆ.


COMMERCIAL BREAK
SCROLL TO CONTINUE READING

ಇದಕ್ಕೂ ಮೊದಲು ಆಗಸ್ಟ್ 18ರಂದು ಶಾ ಅವರನ್ನು AIIMSಗೆ ದಾಖಲಿಸಲಾಗಿತ್ತು. ಕೊರೊನಾ ಸೋಂಕಿಗೆ ಗುರಿಯಾದ ಬಳಿಕ ಅವರ ಆರೋಗ್ಯ ಸ್ಥಿತಿಯ ಮೇಲೆ ನಿಗಾವಹಿಸಲು ಅವರನ್ನು AIIMSಗೆ ದಾಖಲಿಸಲಾಗಿತ್ತು. 12 ದಿನಗಳ ಬಳಿಕ ಅವರಿಗೆ ಡಿಸ್ಚಾರ್ಜ್ ನೀಡಲಾಗಿತ್ತು. ಆಗಸ್ಟ್ 2 ರಂದು ಶಾ ಕೊರೊನಾ ಸೋಂಕಿಗೆ ಗುರಿಯಾಗಿದ್ದರು. ಸ್ವತಃ ಅವರೇ ಟ್ವೀಟ್ ಮಾಡುವ ಮೂಲಕ ಈ ಮಾಹಿತಿ ನೀಡಿದ್ದರು. ಆಗಸ್ಟ್ 14 ರಂದು ಅವರ ಕೊರೊನಾ ವರದಿ ಋಣಾತ್ಮಕ ಹೊರಬಂದಿತ್ತು. ಆ ಬಳಿಕ ಅವರಿಗೆ ಡಿಸ್ಚಾರ್ಜ್ ನೀಡಲಾಗಿತ್ತು.