ನವದೆಹಲಿ: ಆಧಾರ್, ಪಾನ್ ಕಾರ್ಡ್, ಪಾಸ್ ಪೋರ್ಟ್, ಡಿಎಲ್ ಎಲ್ಲಾ  ಪ್ರಮುಖ ದಾಖಲೆಗಳನ್ನು ಒಳಗೊಂಡ ಬಹು ಉಪಯೋಗಿ ಕಾರ್ಡ್ ಜಾರಿಗೆ ತರುವ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಚಿಂತನೆ ನಡೆಸಿದ್ದಾರೆ. 


COMMERCIAL BREAK
SCROLL TO CONTINUE READING

ದೆಹಲಿಯಲ್ಲಿ ಜನಗಣತಿ ಕಟ್ಟಡದ ಶಂಕುಸ್ಥಾಪನಾ ಸಮಾರಂಭದಲ್ಲಿ ಭಾಗಿಯಾಗಿ ಮಾತನಾಡಿದ ಅಮಿತ್ ಶಾ, ಆಧಾರ್, ಡಿಎಲ್, ಬ್ಯಾಂಕ್ ಖಾತೆ,  ವೋಟರ್ ಐಡಿ, ಪಾಸ್ ಪೋರ್ಟ್ ಗಳನ್ನು ಒಳಗೊಂಡ ಒಂದೇ ಕಾರ್ಡ್ ಇದ್ದರೆ ಬಹಳ ಸಹಾಯವಾಗುತ್ತದೆ. ಬಹು ಉಪಯೋಗಿ ಕಾರ್ಡ್(ಮಲ್ಟಿ ಪರ್ಪಸ್ ಕಾರ್ಡ್)ನಿಂದ ದೇಶದ ಹಲವು ಸಮಸ್ಯೆಗಳು ಶೀಘ್ರವೇ ಇತ್ಯರ್ಥವಾಗಲು ಸಾಧ್ಯವಾಗುತ್ತದೆ ಎಂದು ಶಾ ಅಭಿಪ್ರಾಯಪಟ್ಟರು.


"ಆಧಾರ್, ಪಾಸ್‌ಪೋರ್ಟ್, ಬ್ಯಾಂಕ್ ಖಾತೆ, ಚಾಲನಾ ಪರವಾನಗಿ, ಮತದಾರರ ಕಾರ್ಡ್‌ನಂತಹ ಎಲ್ಲಾ ಕಾರ್ಡುಗಳ ಬಳಕೆಗೆ ನಮ್ಮಲ್ಲಿ ಕೇವಲ ಒಂದು ಕಾರ್ಡ್ ಏಕೆ ಇರಬಾರದು? ಎಲ್ಲಾ ಡೇಟಾವನ್ನು ಒಂದೇ ಕಾರ್ಡ್‌ನಲ್ಲಿ ಸೇರಿಸುವ ವ್ಯವಸ್ಥೆ ಇರಬೇಕು. ಇದು ಸಾಧ್ಯವಾಗುತ್ತದೆ. ಅದಕ್ಕಾಗಿಯೇ ಡಿಜಿಟಲ್ ಜನಗಣತಿ ಬಹಳ ಮುಖ್ಯವಾಗಿದೆ" ಎಂದು ಹೇಳಿದರು.


ಇದೇ ವೇಳೆ 2021ರ ಜನಗಣತಿ ಬಗ್ಗೆ ಮಾತನಾಡಿದ ಶಾ, 2021ರಲ್ಲಿನ ಜನಗಣತಿಗೆ ಮೊಬೈಲ್ ಅಪ್ಲಿಕೇಶನ್ ಅನ್ನು ಬಳಸಲಾಗುತ್ತದೆ. ಇದು ಕಾಗದದ ಜನಗಣತಿಯಿಂದ ಡಿಜಿಟಲ್ ಜನಗಣತಿಗೆ ಪರಿವರ್ತನೆಯಾಗಲಿದೆ. ಹಿಮಮಳೆ ಸುರಿಯುವ ಜಮ್ಮು ಮತ್ತು ಕಾಶ್ಮೀರ , ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಲ್ಲಿ 2020ರ ಅಕ್ಟೋಬರ್ 1 ರಿಂದ ಮತ್ತು ಉಳಿದ ಪ್ರದೇಶಗಳಲ್ಲಿ 2021ರ ಮಾರ್ಚ್ 1 ರಿಂದ ಜನಗಣತಿ ನಡೆಯಲಿದೆ. ಸುಮಾರು12,000 ಕೋಟಿ ರೂ. ವೆಚ್ಚದಲ್ಲಿ 16 ಭಾಷೆಗಳಲ್ಲಿ ಜನಗಣತಿ ನಡೆಸಲಾಗುತ್ತಿದೆ ಶಾ ಹೇಳಿದರು.