ನವದೆಹಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅವರು ಯೋಗ ಗುರು ಬಾಬಾ ರಾಮದೇವ್ ಅವರನ್ನು  2019 ರ ಚುನಾವಣೆಗೆ ಬಿಜೆಪಿಗೆ ಬೆಂಬಲ ಸೂಚಿಸಲು ವಿನಂತಿಸಿಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಸೋಮವಾರದಂದು ರಾಮದೇವ್ ರನ್ನು ಭೇಟಿ ಮಾಡಿದ ಶಾ ಮುಂಬರುವ ಸಾರ್ವತ್ರಿಕ ಲೋಕಸಭಾ ಚುನಾವಣೆಗೆ ಬೆಂಬಲ ನೀಡಬೇಕೆಂದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅಮಿತ್ ಶಾ  "2014 ರ ವೇಳೆ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಯಾರೆಲ್ಲಾ ಬೆಂಬಲವನ್ನು ನೀಡಿದ್ದರೋ ಅವರನ್ನೆಲ್ಲಾ ಭೇಟಿ ಮಾಡುತ್ತಿದ್ದೇವೆ. ಅವರು ನಮಗೆ ಮಾಡಿದ ಎಲ್ಲ ಸಹಾಯವನ್ನು ನಾವು ಸ್ಮರಿಸುತ್ತೇವೆ ಮತ್ತು ಮುಂಬರುವ ಚುನಾವಣೆಗೆ ಬೆಂಬಲವನ್ನು ಸಹ ನೀಡಬೇಕೆಂದು ವಿನಂತಿಸಿಕೊಳ್ಳುತ್ತೇವೆ " ಎಂದು ತಿಳಿಸಿದರು. 


 ಇನ್ನು ಮುಂದುವರೆದು ಮಾತನಾಡುತ್ತಾ "ಬಾಬಾ ರಾಮದೇವ್ ರನ್ನು ಭೇಟಿ ಮಾಡುವುದೆಂದರೆ ಲಕ್ಷಾಂತರ ಜನರನ್ನು ಭೇಟಿ ಮಾಡಿದ ಹಾಗೆ,ನಮಗೆ ಅವರು ಮುಂಬರುವ ಚುನಾವಣೆಯಲ್ಲಿ ಬೆಂಬಲ ನೀಡುತ್ತಾರೆ ಎನ್ನುವ ಮಾತು ಕೊಟ್ಟಿದ್ದಾರೆ" ಎಂದು ಶಾ ತಿಳಿಸಿದರು.