ನವದೆಹಲಿ: ಕೊರೊನಾ ವೈರಸ್ ಸೋಂಕಿನಿಂದ ಪೀಡಿತ ವಿಶ್ವದ ನಾಲ್ಕನೇ ಅತಿ ದೊಡ್ಡ ದೇಶ ಇದೀಗ ಭಾರತವಾಗಿದೆ. ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ 3 ಲಕ್ಷದ ಗಡಿ ದಾಟಿದೆ. ಕೆಳೆದ ಕೆಲ ದಿನಗಳಿಂದ ದೇಶಾದ್ಯಂತ ನಿತ್ಯ ಸರಾಸರಿ 10 ಸಾವಿರ ಹೊಸ ಪರಕರಣಗಳು ಪತ್ತೆಯಾಗುತ್ತಿವೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡಿರುವ ಅಂಕಿ-ಅಂಶಗಳ ಪ್ರಕಾರ ನೂನ್ 14ರ ಬೆಳಗಿನ 8 ಗಂಟೆಯವರೆಗೆ ದೇಶಾದ್ಯಂತ ಕೊವಿಡ್ 19 ನ ಸಕಾರಾತ್ಮಕ ಪ್ರಕರಣಗಳ ಸಂಖ್ಯೆ 3 ಲಕ್ಷ 20 ಸಾವಿರ 992ಕ್ಕೆ ಏರಿಕೆಯಾಗಿವೆ. ಇನ್ನೊಂದೆಡೆ ಕೊರೊನಾ ವೈರಸ್ ನಿಂದ ಇದುವರೆಗೆ 9195 ಜನರು ಮರಣಹೊಂದಿದ್ದರೆ, ಒಟ್ಟು 1, 62,379  ರೋಗಿಗಳು  ಗುಣಮುಖರಾಗಿ ತಮ್ಮ ತಮ್ಮ ಮನೆಗಳಿಗೆ ತೆರಳಿದ್ದಾರೆ. ಇದುವೆರೆಗೆ ದೇಶಾದ್ಯಂತ ಒಟ್ಟು 1,49, 348 ಸಕ್ರೀಯ ಪ್ರಕರಣಗಳಿವೆ. ಕಳೆದ 24 ಗಂಟೆಗಳ ಕುರಿತು ಹೇಳುವುದಾದರೆ, ದೆಹ್ಸದಲ್ಲಿ ಒಟ್ಟು 11,992 ಹೊಸ ಪ್ರಕರಣಗಳು ಬೆಳಕಿಗೆ ಬಂದಿದ್ದು, 311 ಜನರು ತಮ್ಮ ಪ್ರಾಣಕಳೆದುಕೊಂಡಿದ್ದಾರೆ. ದೇಶದಲ್ಲಿ ಕೊರೊನಾ ಪ್ರಕೋಪಕ್ಕೆ ಅತಿ ಹೆಚ್ಚು ತುತ್ತಾದ ಭಾರತದಲ್ಲಿ ಸೋಂಕಿತರ ಸಂಖ್ಯೆ 1,04, 568ಕ್ಕೆ ತಲುಪಿದ್ದಾರೆ, ಪ್ರಾಣ ಕಳೆದುಕೊಂಡವರ ಸಂಖ್ಯೆ 3830ಕ್ಕೆ ತಲುಪಿದೆ.


COMMERCIAL BREAK
SCROLL TO CONTINUE READING

ಕೊರೊನಾ ವೈರಸ್ ಮಹಾಮಾರಿ ಇದುವರೆಗೆ ವಿಶ್ವದ 200 ದೇಶಗಳಿಗೆ ಹರಡಿದೆ. ವಿಶ್ವಾದ್ಯಂತ ಒಟ್ಟು ಕೊರೊನಾ ಪೀಡಿತರ ಸಂಖ್ಯೆ 7,865,716 ಕ್ಕೆ ತಲುಪಿದ್ದು, ಮೃತಪಟ್ಟವರ ಸಂಖ್ಯೆ 432,394ಕ್ಕೆ ತಲುಪಿದೆ. ಈ ರೋಗದಿಂದ ಇದುವರೆಗೆ 4,040,715 ಜನರು ಚೇತರಿಸಿಕೊಂಡಿದ್ದಾರೆ. ವಿಶ್ವದ ಶಕ್ತಿಶಾಲಿ ರಾಷ್ಟ್ರ ಎಂದು ಹೆಗ್ಗಳಿಕೆ ಗಳಿಸಿರುವ ಅಮೇರಿಕಾದಲ್ಲಿ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಲೇ ಇದೆ. ಅಮೆರಿಕಾದಲ್ಲಿ ಇದುವರೆಗೆ ಒಟ್ಟು ಪಾಸಿಟಿವ್ ಪ್ರಕರಣಗಳ ಸಂಖ್ಯೆ 2,142,224ಕ್ಕೆ ತಲುಪಿದ್ದರೆ, ಮೃತಪಟ್ಟವರ ಸಂಖ್ಯೆ 117,527ಕ್ಕೆ ತಲುಪಿದೆ. 


ದೆಹಲಿಯಲ್ಲಿ ಹೆಚ್ಚಾಗುತ್ತಿರುವ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆಯ ಹಿನ್ನೆಲೆ ಇಂದು ಕೇಂದ್ರ ಗೃಹ ಸಚಿವ ಅಮಿತ್ ಷಾ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೆಜ್ರಿವಾಲ್ ಹಾಗೂ LG ಅನಿಲ್ ಬೈಜಲ್ ಅವರ ಜೊತೆಗೆ ಸಭೆ ನಡೆಸಿದ್ದಾರೆ. 


ಸಭೆಯ ಬಳಿಕ ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿರುವ ಅಮಿತ್ ಷಾ, ರಾಷ್ಟ್ರರಾಜಧಾನಿ ದೆಹಲಿಯಲ್ಲ್ಲಿ ಕೊರೊನಾ ಸೋಂಕನ್ನು ತಡೆಗಟ್ಟಲು ಮೋದಿ ಸರ್ಕಾರ ಬದ್ಧವಾಗಿದೆ. ಕೊರೊನಾ ಪ್ರಕೋಪವನ್ನು ತಡೆಗಟ್ಟಲು ಕೊರೊನಾ ಟೆಸ್ಟಿಂಗ್ ಅನ್ನು ದುಪ್ಪಟ್ಟು ಹೆಚ್ಚಿಸಲಾಗುತ್ತಿದ್ದು, 6 ದಿನಗಳ ಬಳಿಕ ಟೆಸ್ಟಿಂಗ್ ಅನ್ನು ಮೂರು ಪಟ್ಟು ಹೆಚ್ಚಿಸಲಾಗುವುದು ಎಂದು ಹೇಳಿದ್ದಾರೆ. ಇದಲ್ಲದೆ ಕಂಟೆನ್ಮೆಂಟ್ ಜೋನ್ ಗಳಲ್ಲಿ ಪ್ರತಿಯೊಂದು ಪೋಲಿಂಗ್ ಸ್ಟೇಷನ್ ಗಳಲ್ಲಿ ಟೆಸ್ಟಿಂಗ್ ವ್ಯವಸ್ಥೆ ಆರಂಭಿಸಲಾಗುವುದು. ದೆಹಲಿಯಾ ಸಣ್ಣ ಸಣ್ಣ ಆಸ್ಪತ್ರೆಗಳವರೆಗೂ ಕೂಡ ಕೊರೋನಾಗೆ ಸಂಬಂಧಿಸಿದ ಮಾಹಿತಿ ಮಾರ್ಗಸೂಚಿಗಳನ್ನು ನೀಡಲು ಮೋದಿ ಸರ್ಕಾರ AIIMSನಲ್ಲಿ ಮಾರ್ಗದರ್ಶನ ನೀಡಲು ಹಿರಿಯ ವೈದ್ಯರ ಕಮೀಟಿ ಸಹ ರಚಿಸಲಾಗುವುದು ಎಂದು ಷಾ ಹೇಳಿದ್ದಾರೆ. 


ಇದಲ್ಲದೆ ಕಂಟೆಂನ್ಮೆಂಟ್ ಜೋನ್ ಗಳಲ್ಲಿ ಕಾಂಟಾಕ್ಟ್ ಮ್ಯಾಪಿಂಗ್ ವ್ಯವಸ್ಥೆಯನ್ನು ಉತ್ತಮಗೊಳಿಸಲು ಮನೆ ಮನೆಗೆ ತೆರಳಿ ಪ್ರತಿಯೊಬ್ಬ ವ್ಯಕ್ತಿಗಳ ಆರೋಗ್ಯದ ಸಮೀಕ್ಷೆ ನಡೆಸಲಾಗುವುದು ಹಾಗೂ ಇದರ ವರದಿ 1 ವಾರದಲ್ಲಿ ಬರಲಿದೆ. ಈ ಪ್ರಕ್ರಿಯೆಯನ್ನು ಉತ್ತಮವಾಗಿ ಮಾನೆಟರಿಂಗ್ ಮಾಡಲು ಪ್ರತಿ ವ್ಯಕ್ತಿಯ ಮೊಬೈಲ್ ನಲ್ಲಿ ಆರೋಗ್ಯ ಸೇತು ಆಪ್ ಇರುವಿಕೆಯನ್ನು ಸುನಿಶ್ಚಿತಗೊಳಿಸಲಾಗುವುದು.