Pongal ದಿನ ತಮಿಳುನಾಡಿಗೆ ಭೇಟಿ ನೀಡಲಿರುವ ಅಮಿತ್ ಶಾ
ತಮ್ಮ ಭೇಟಿಯ ಸಮಯದಲ್ಲಿ, ದಿವಂಗತ ಚೋ ರಾಮಸ್ವಾಮಿಯ ತುಘಲಕ್ ನಿಯತಕಾಲಿಕೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಅಮಿತ್ ಶಾ ಭಾಗವಹಿಸಲಿದ್ದಾರೆ. ಚುನಾವಣೆಯಲ್ಲಿ ಬೆಂಬಲ ಪಡೆಯಲು ಅಮಿತ್ ಶಾ ಅವರು ರಜನಿಕಾಂತ್ ಅವರನ್ನು ಭೇಟಿಯಾಗಬಹುದು ಎಂದು ಬಿಜೆಪಿಯ ಬಹು ಮೂಲಗಳು ತಿಳಿಸಿವೆ.
ನವದೆಹಲಿ: ನಟ ರಜನಿಕಾಂತ್ (Rajanikanth) ರಾಜಕೀಯ ಪ್ರವೇಶಕ್ಕೂ ಮುನ್ನವೇ ಪಲಾಯನ ಮಾಡಿರುವ ನಿರ್ಧಾರವು ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ (Tamilnadu Assembly Election) ಮತಗಳ ವಿಭಜನೆಯಿಂದ ಲಾಭ ಗಳಿಸಲು ನೋಡುತ್ತಿದ್ದ ಬಿಜೆಪಿ (BJP)ಗೆ ಹಿನ್ನಡೆಯಾಗಿರಬಹುದು. ಆದರೂ ತಮಿಳುನಾಡಿನಲ್ಲಿ ಖಾತೆ ತೆರೆಯಲು ಆತೊರೆಯುತ್ತಿರುವ ಬಿಜೆಪಿ ಅಲ್ಲಿನ ಪ್ರಮುಖ ಹಬ್ಬವಾದ 'ಪೊಂಗಲ್' (Pongal) ದಿನ ರಾಜ್ಯವ್ಯಾಪಿ ಕಾರ್ಯಕ್ರಮ ಹಮ್ಮಿಕೊಂಡಿದೆ.
ಪಕ್ಷದ ಅಗ್ರ ನಾಯಕ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ (Amith Sha) ಜನವರಿ 14ರಂದು ತಮಿಳುನಾಡಿಗೆ ಭೇಟಿ ನೀಡಲಿದ್ದಾರೆ. ಇದು ಕಳೆದ ಎರಡು ತಿಂಗಳಲ್ಲಿ ಅವರು ತಮಿಳುನಾಡಿಗೆ ನೀಡುತ್ತಿರುವ ಎರಡನೇ ಭೇಟಿಯಾಗಿದೆ.
ಇದಲ್ಲದೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ (JP Nadda) ಅವರು ಮಧುರೈ ಬಳಿಯ ಜಲ್ಲಿಕಟ್ಟು (Jallikattu) ಕಾರ್ಯಕ್ರಮಕ್ಕೆ ಹಾಜರಾಗುವ ಸಾಧ್ಯತೆಗಳಿವೆ. ಅಮಿತ್ ಶಾ ತಮಿಳುನಾಡು ಭೇಟಿಯ ಮರುದಿನ ಜೆ.ಪಿ. ನಡ್ಡಾ ಮಧುರೈಗೆ ಭೇಟಿ ನೀಡುವ ಸಾಧ್ಯತೆಗಳಿವೆ.
ಇದನ್ನೂ ಓದಿ : COVID-19 ನಿರ್ಬಂಧಗಳೊಂದಿಗೆ ಜಲ್ಲಿಕಟ್ಟು ಆಚರಣೆಗೆ ತಮಿಳುನಾಡು ಸರ್ಕಾರದ ಅನುಮತಿ
ಬಿಜೆಪಿ ಪೊಂಗಲ್ (Pongal) ಆಚರಣೆ ವೇಳೆ "ನಮ್ಮ ಒರು ಪೊಂಗಲ್” ಎಂಬ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ. ಬಿಜೆಪಿ ಉತ್ತರ ಭಾರತದ ಪಕ್ಷ ಎಂದು ಗುರುತಿಸಿಕೊಂಡಿರುವುದರಿಂದ ತಮಿಳುನಾಡಿನಲ್ಲಿ ತನ್ನ ಇಮೇಜ್ ಬದಲಿಸಿಕೊಳ್ಳಲು "ನಮ್ಮ ಒರು ಪೊಂಗಲ್” ಕಾರ್ಯಕ್ರಮ ಆಯೋಜಿಸುತ್ತಿದೆ ಎಂದು ಹೇಳಲಾಗುತ್ತಿದೆ. ಕಳೆದ ವರ್ಷ ನವೆಂಬರ್‌ನಲ್ಲಿ ತಮಿಳು ಸಂಸ್ಕೃತಿ ಮತ್ತು ಅಸ್ಮಿತೆಗೆ ಸಂಬಂಧಿಸಿದಂತೆ ಪಕ್ಷವು ತಮಿಳು ದೇವತೆ ಮುರುಗವನ್ನು ಆಚರಿಸಲು ವೆಲ್ ಯಾತ್ರೆಯನ್ನು ಆಯೋಜಿಸಿತ್ತು.
ಅಮಿತ್ ಷಾ ಅವರ ಭೇಟಿಯನ್ನು ದೃಢಕರಿಸಿರುವ ಬಿಜೆಪಿಯ ಹಿರಿಯ ಮುಖಂಡರು, “ಜಲ್ಲಿಕಟ್ಟು ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ನಡ್ಡಾ ಕೂಡ ತಮಿಳುನಾಡನ್ನು ತಲುಪಬಹುದು. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಸಿ.ಟಿ. ರವಿ (CT Ravi) ಮತ್ತು ಬಿ.ಎಲ್. ಸಂತೋಷ್ (BL Santhosh) ಸೇರಿದಂತೆ ವಿವಿಧ ರಾಜ್ಯಗಳ ನಮ್ಮ ರಾಷ್ಟ್ರೀಯ ನಾಯಕರು ಕೂಡ ಪೊಂಗಲ್ ಆಚರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇತರ ನಾಯಕರ ಪಟ್ಟಿಯನ್ನು ಇನ್ನೂ ಅಂತಿಮಗೊಳಿಸಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಬಿಜೆಪಿಗೆ ಸೆಡ್ಡು ಹೊಡೆಯಲು ದೀದಿಯಿಂದ 'ಹೊಸ ಆಸ್ತ್ರ'..!
ತಮಿಳು ಸಂಸ್ಕೃತಿ ಮತ್ತು ರೈತರು ಸಂಭ್ರಮ ಸಡಗರದಿಂದ ಆಚರಿಸುವ ಉತ್ಸವವಾದ ಪೊಂಗಲ್ ಗಾಗಿ ಬಿಜೆಪಿಯ ವಾರಪೂರ್ತಿ ಕಾರ್ಯಕ್ರಮವು ಮೇ ತಿಂಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ (Assembly Election) ಮುನ್ನ ಒಂದು ಕಾರ್ಯತಂತ್ರದ ಕ್ರಮಕ್ಕಿಂತ ಹೆಚ್ಚಾಗಿರಬಹುದು. ಇದು ದ್ರಾವಿಡ ಪಕ್ಷಗಳಿಂದ ಹೆಚ್ಚಾಗಿ ಆಳಲ್ಪಟ್ಟ ರಾಜ್ಯದಲ್ಲಿ ಸ್ವೀಕಾರವನ್ನು ಪಡೆಯುವ ಪಕ್ಷದ ದೀರ್ಘಕಾಲೀನ ಯೋಜನೆಗಳ ಭಾಗವೆಂದು ತೋರುತ್ತದೆ. ಕೇಂದ್ರದಲ್ಲಿ ಆಡಳಿತ ಪಕ್ಷವಾಗಿ 2017ರ ಪೊಂಗಲ್ ಸಮಯದಲ್ಲಿ ಬಿಜೆಪಿ ರಾಜ್ಯದಲ್ಲಿ ಜಲ್ಲಿಕಟ್ಟು ಪ್ರತಿಭಟನೆಯನ್ನು ಸ್ವೀಕರಿಸುವ ಹಂತದಲ್ಲಿದ್ದ ಕಾರಣ ಇದು ಗಮನಾರ್ಹವಾಗಿದೆ. ಆದಾಗ್ಯೂ ಪೊಂಗಲ್ ಅನ್ನು ಜನರ ಹಬ್ಬವೆಂದು ಪರಿಗಣಿಸಲಾಗಿರುವುದರಿಂದ ಈ ಕ್ರಮವು ದ್ರಾವಿಡ ಪಕ್ಷಗಳಿಗೆ ಆಶ್ಚರ್ಯವಾಗಬಹುದು ಮತ್ತು ರಾಜಕೀಯವಾಗಿ ಅದನ್ನು ಲಾಭ ಮಾಡಿಕೊಳ್ಳಲು ಈ ಹಿಂದೆ ಯಾವುದೇ ಗೋಚರ ಪ್ರಯತ್ನಗಳು ನಡೆದಿಲ್ಲ.
ಪಕ್ಷದ ಹಿರಿಯ ನಾಯಕಿ ಖುಷ್ಬೂ ಸುಂದರ್ (Kushbu Sundar) ಮಾತನಾಡಿ, ಬಿಜೆಪಿಯಂತಹ ಪಕ್ಷವು ಪೊಂಗಲ್ ಅನ್ನು ಆಚರಿಸುವುದು ಕೇವಲ ಹಬ್ಬವಲ್ಲ, ಆದರೆ ಇದು ಜನರ ಸಂಸ್ಕೃತಿ ಮತ್ತು ಜೀವನಶೈಲಿಯ ಬಗ್ಗೆಯೂ ಇದೆ. "ನಾವು ಅದನ್ನು ದೊಡ್ಡ ರೀತಿಯಲ್ಲಿ ಆಚರಿಸುತ್ತಿದ್ದೇವೆ ಎಂದು ನನಗೆ ಖುಷಿಯಾಗಿದೆ" ಎಂದು ಅವರು ಹೇಳಿದ್ದಾರೆ.
ತಮ್ಮ ಭೇಟಿಯ ಸಮಯದಲ್ಲಿ, ದಿವಂಗತ ಚೋ ರಾಮಸ್ವಾಮಿಯ ತುಘಲಕ್ ನಿಯತಕಾಲಿಕೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಅಮಿತ್ ಶಾ (Amith Shah) ಭಾಗವಹಿಸಲಿದ್ದಾರೆ. ಚುನಾವಣೆಯಲ್ಲಿ ಬೆಂಬಲ ಪಡೆಯಲು ಅಮಿತ್ ಶಾ ಅವರು ರಜನಿಕಾಂತ್ ಅವರನ್ನು ಭೇಟಿಯಾಗಬಹುದು ಎಂದು ಬಿಜೆಪಿಯ ಬಹು ಮೂಲಗಳು ತಿಳಿಸಿವೆ. ಆದಾಗ್ಯೂ ರಜನಿಕಾಂತ್ ಅವರ ಆಪ್ತರು ಮುಂಬರುವ ಚುನಾವಣೆಯಲ್ಲಿ ಬಿಜೆಪಿಯ ಪರವಾಗಿ ರಾಜಕೀಯ ಹೇಳಿಕೆ ನೀಡುವ ಯಾವುದೇ ಅವಕಾಶವನ್ನು ತಳ್ಳಿಹಾಕಿದ್ದಾರೆ.
ಇದನ್ನೂ ಓದಿ : TMC ಶಾಸಕರ ರಾಜೀನಾಮೆ ಪರ್ವದ ಬೆನ್ನಲ್ಲೇ ಪಶ್ಚಿಮ ಬಂಗಾಳಕ್ಕೆ ಅಮಿತ್ ಶಾ ಭೇಟಿ
ಸಂಭ್ರಮಾಚರಣೆಯಲ್ಲಿ ಹಿರಿಯ ನಾಯಕರು ಮತ್ತು ಗಣ್ಯರಾದ ಎಚ್. ರಾಜ, ಪೊನ್ ರಾಧಾಕೃಷ್ಣನ್, ರಾಜ್ಯ ಅಧ್ಯಕ್ಷ ಎಲ್. ಮುರುಗನ್, ಸಿ.ಪಿ. ರಾಧಾಕೃಷ್ಣನ್, ಖುಷ್ಬೂ ಮತ್ತು ಗಾಯತ್ರಿ ರಘುರಾಮ್ ಭಾಗವಹಿಸಲಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.