ನವದೆಹಲಿ: ದೇಶಾದ್ಯಂತ ಕೊರೊನಾ ವೈರಸ್ ತನ್ನ ಪಾದಗಳನ್ನು ಪಸರಿಸುತ್ತಲೇ ಇಡೀ ದೇಶದಲ್ಲಿ ಕೋಲಾಹಲ ಸೃಷ್ಟಿಯಾಗಿದೆ. ಆದ್ರೆ, ಇವೆಲ್ಲವುಗಳ ನಡುವೆ ಒಂದು ಸಂತಸದ ಸುದ್ದಿ ಪ್ರಕಟಗೊಂಡಿದ್ದು, ಈ ಮಾರಕ ಕಾಯಿಲೆಯಿಂದ ಗುನಮುಖರಾದವರ ಸಂಖ್ಯೆ 100 ಕ್ಕೆ ಏರಿಕೆಯಾಗಿದೆ. ಸೋಮವಾರ ಪಶ್ಚಿಮ ಬಂಗಾಳ, ಗುಜರಾತ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ತಲಾ ಒಂದು-ಒಂದು ಮಂದಿ ಮೃತಪಟ್ಟಿದ್ದಾರೆ. ಇದರಿಂದ ದೇಶಾದ್ಯಂತ ಈ ಮಾರಕ ಕಾಯಿಲೆಗೆ ಬಲಿಯಾದವರ ಸಂಖ್ಯೆ ಇದೀಗ 29ಕ್ಕೆ ತಲುಪಿದೆ. ಕೇಂದ್ರ ಆರೋಗ್ಯ ಇಲಾಖೆ ಜಾರಿಗೊಳಿಸಿರುವ ಅಂಕಿ-ಅಂಶಗಳ ಪ್ರಕಾರ, ದೇಶಾದ್ಯಂತ ಈ ಮಾರಕ ಸೋಂಕಿಗೆ ಗುರಿಯಾದವರ ಸಂಖ್ಯೆ ಇದೀಗ 1071ಕ್ಕೆ ತಲುಪಿದೆ.


COMMERCIAL BREAK
SCROLL TO CONTINUE READING

ಯಾವುದೇ ಪರಿಸ್ಥಿತಿಯಲ್ಲಿ ಸಮಾಜದ ಪ್ರತಿಯೊಬ್ಬರ ಸಹಕಾರದ ಅವಶ್ಯಕತೆ ಇದೆ ಎಂದು ಸರ್ಕಾರ ಹೇಳಿದೆ. ಒಂದು ವೇಳೆ ಯಾವುದೇ ವ್ಯಕ್ತಿ ಉಳಿದರೆ ಅಥವಾ ಸಹಕಾರ ನೀಡದೆ ಹೋದಲ್ಲಿ ಎಲ್ಲವೂ ಶೂನ್ಯಕ್ಕೆ ಬಂದು ತಲುಪಲಿದೆ. ಇದಕ್ಕಾಗಿ ಶೇ.100 ರಷ್ಟು ಪ್ರಯತ್ನದ ಅಗತ್ಯವಿದೆ. ಕೇಂದ್ರ ಸರ್ಕಾರದ ವತಿಯಿಂದ ದೇಶಾದ್ಯಂತ ಎಲ್ಲ ರೀತಿಯ ಸಿದ್ಧತೆಗಳನ್ನು ಕೈಗೊಳ್ಳಲು ಹಾಗೂ ಯಾವುದೇ ರೀತಿಯ ಪರಿಸ್ಥಿತಿಯನ್ನು  ನಿಭಾಯಿಸಲು ಪ್ರಧಾನಿ ನರೇಂದ್ರ ಮೋದಿ ಅವರು 10 ಎಂಪಾವರ್ಡ್ ಗುಂಪುಗಳನ್ನು ನಿರ್ಮಿಸಿದ್ದಾರೆ. ಆರೋಗ್ಯ ವಿಭಾಗದ ಸಂಯುಕ್ತ ಕಾರ್ಯದಶಿಯಾಗಿರುವ ಲವ್ ಅಗರವಾಲ್ ಹೇಳುವ ಪ್ರಕಾರ. ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮಾರ್ಗಸೂಚಿಗಳನ್ನು ಶೇ.100ರಷ್ಟು ಅನುಸರಿಸುವ ಅಗತ್ಯತೆ ಇದೆ. ಶೇ.99ರಷ್ಟು ಅನುಸರಿಸಿದರೂ ಕೂಡ ಎಲ್ಲವು ವಿಫಲವಾಗಲಿದೆ ಎಂದು ಹೇಳಿದ್ದಾರೆ. 


ಹಿರಿಯ ನಾಗರಿಕರಿಗೆ ಕೊರೊನಾ ವೈರಸ್ ನಿಂದ ಹೆಚ್ಚಿನ ಅಪಾಯವಿದೆ. ಅವರು ಹೆಚ್ಚಿಗೆ ಜಾಗರೂಕರಾಗಿರುವ ಅಗತ್ಯತೆ ಇದೆ. ಹಿರಿಯ ನಾಗರಿಕರು ಹೆಚ್ಚಿಗೆ ಏನು ಮಾಡಬೇಕು ಹಾಗೂ ಏನು ಮಾಡಬಾರದು ಎಂಬುದರ ಕುರಿತು ಕೇಂದ್ರ ಸರ್ಕಾರ ಈಗಾಗಲೇ ಅಡ್ವೈಸರಿ ಜಾರಿಗೊಳಿಸಿದೆ. ಕೊರೊನಾ ವೈರಸ್ ಅನ್ನು ಹತ್ತಿಕ್ಕಲು ಡೆಡಿಕೆಟೆಡ್ ಆಸ್ಪತ್ರೆಗಳ ನಿರ್ಮಾಣದ ಮೇಲೆ ಫೋಕಸ್ ಮಾಡಲಾಗಿದ್ದು, ದೇಶಾದ್ಯಂತ ಇವುಗಳ ನಿರ್ಮಾಣ ಕಾರ್ಯ ಈಗಾಗಲೇ ಆರಂಭಗೊಂಡಿದೆ. ಕೇವಲ ಜಾಗರೂಕರಾಗಿರುವ ಮತ್ತು ಎಚ್ಚರಿಕೆಯಿಂದ ಇರುವ ಅಗತ್ಯತೆ ಇದೆ; ಎಂದು ಅಗರವಾಲ್ ಹೇಳಿದ್ದಾರೆ.


ಈ ಕುರಿತು ವಿಶೇಷವಾಗಿ ಹೇಳಿದೆ ನೀಡಿರುವ ಕೇಂದ್ರ ಆರೋಗ್ಯ ಇಲಾಖೆ ಒಂದು ವೇಳೆ ನಿಮಗೆ ಸ್ವಲ್ಪ ಕೂಡ ಶಂಕೆ ಬಂದರೂ ಕೂಡ ಅದನ್ನು ಮರೆಮಾಚಬೇಡಿ ಎಂದು ಹೇಳಿದೆ. ಒಂದು ವೇಳೆ ಮರೆಮಾಚಿದೆ ಅದರ ಪರಿಣಾಮ ತುಂಬಾ ಭಯಂಕರವಾಗಲಿದೆ ಎಂದು ಹೇಳಿದೆ.


ಅತ್ತ ಇನ್ನೊಂದೆಡೆ ರಾಷ್ಟ್ರರಾಜಧಾನಿ ದೆಹಲಿಯಿಂದ ಪಲಾಯನಗೈಯುತ್ತಿದ್ದ ಜನರಿಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೆಜ್ರಿವಾಲ್ ಮತ್ತೊಮ್ಮೆ ಮನವಿ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿರುವ ಕೆಜ್ರಿವಾಲ್, ಯಾರು ಎಲ್ಲೇ ಇದ್ದರು ಅಲ್ಲೇ ಇರಿ. ಸರ್ಕಾರ ಎಲ್ಲ ರೀತಿಯ ಸಹಾಯ ಮಾಡಲು ಸಿದ್ಧವಿದೆ ಎಂದು ಪುನರುಚ್ಚರಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಇದುವರೆಗೆ ಕೊರೊನಾ ವೈರಸ್ ಸೋಂಕಿನ ಒಟ್ಟು 72 ಪ್ರಕರಣಗಳು ಬೆಳಕಿಗೆ ಬಂದಿವೆ. ಇನ್ನೊಂದೆಡೆ ನೋಯ್ಡಾದಲ್ಲಿರುವ ಒಂದು ಕಂಪನಿಯ ಮೇಲೆ FIR ದಾಖಲಿಸಲಾಗಿದ್ದು, ಕಂಪನಿ ಲಂಡನ್ ನಿಂದ ಆಡಿಟರ್ ಕರೆಯಿಸಿತ್ತು, ಇದರಿಂದ ಕಂಪನಿಯಲ್ಲಿದ್ದ ಒಟ್ಟು 20 ರೋಗಿಗಳಿಗೆ ಕೊರೊನಾ ವೈರಸ್ ಸೋಂಕು ಹರಡಿತ್ತು.


ಇನ್ನೊಂದೆಡೆ ವಿಶ್ವಾದ್ಯಂತ ಕೊರೊನಾ ವೈರಸ್ ಪ್ರಕರಣಗಳ ಕುರಿತು ಹೇಳುವುದಾದರೆ, ಇದುವರೆಗೆ 34 ಸಾವಿರ ಜನರು ಈ ಮಾರಕ ಕಾಯಿಲೆಗೆ ಬಲಿಯಾಗಿದ್ದು, 7 ಲಕ್ಷಕ್ಕೂ ಅಧಿಕ ಜನರಿಗೆ ಈ ಸೋಂಕು ತಗುಲಿದೆ. ದೇಶಾದ್ಯಂತ ಲಾಕ್ ಡೌನ್ ನ ಇಂದು ಆರನೆಯ ದಿನವಾಗಿದೆ. ಕೇಂದ್ರ ಸರ್ಕಾರ ರಾಜ್ಯಸರ್ಕಾರಗಳಿಗೆ ಲಾಕ್ ಡೌನ್ ಅನ್ನು ಪರಿಪಾಲಿಸುವಂತೆ ಮಾಡಲು ನಿರ್ದೇಶನಗಳನ್ನು ನೀಡಿದೆ. ಲಾಕ್ ಡೌನ್ ನಿಯಮಗಳನ್ನು ಉಲ್ಲಂಘಿಸಿದವರಿಗೆ 14ದಿನಗಳ ಕ್ವಾರಂಟೀನ್ ಗೆ ಕಳುಹಿಸಲಾಗುವುದು ಎಂದು ಹೇಳಲಾಗಿದೆ. ಅತ್ತ ಇಂದೋರ್ ನಲ್ಲಿ ಕೊರೊನಾ ವೈರಸ್ ಪೀಡಿತರೊಬ್ಬರು ಮೃತಪಟ್ಟಿದ್ದಾರೆ. 41 ವರ್ಷ ವಯಸ್ಸಿನ ಈ ಕೊರೊನಾ ಪೀಡಿತ ಸಿರಪುರ್ ರಹವಾಸಿಯಾಗಿದ್ದಾನೆ. ಮಧ್ಯಪ್ರದೇಶದಲ್ಲಿ ಕೊರೊನಾ ವೈರಸ್ ನಿಂದ ಇದುವರೆಗೆ ಸುಮಾರು ನಾಲ್ಕು ಮಂದಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.