ಅಮರಾವತಿಯೊಂದೇ ಆಂಧ್ರಪ್ರದೇಶದ ರಾಜಧಾನಿ-ಸಿಎಂ ಚಂದ್ರಬಾಬು ನಾಯ್ಡು ಘೋಷಣೆ
ಆಂಧ್ರಪ್ರದೇಶದ ನಿಯೋಜಿತ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ರಾಜ್ಯವು ಅಮರಾತಿಯೊಂದನ್ನು ಮಾತ್ರ ರಾಜಧಾನಿಯಾಗಿ ಹೊಂದಿರುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
ವಿಜಯವಾಡ: ಆಂಧ್ರಪ್ರದೇಶದ ನಿಯೋಜಿತ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ರಾಜ್ಯವು ಅಮರಾತಿಯೊಂದನ್ನು ಮಾತ್ರ ರಾಜಧಾನಿಯಾಗಿ ಹೊಂದಿರುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
ಈಗ ಈ ಕುರಿತಾಗಿ ಪ್ರತಿಕ್ರಿಯಿಸಿರುವ ಅವರು ನಮ್ಮ ಸರ್ಕಾರದಲ್ಲಿ ಮೂರು ರಾಜಧಾನಿಗಳ ನೆಪದಲ್ಲಿ ಆಟ ನಡೆಯುವುದಿಲ್ಲ. ನಮ್ಮ ರಾಜಧಾನಿ ಅಮರಾವತಿ ಮಾತ್ರ, ಇನ್ನೂ ವಿಶಾಖಪಟ್ಟಣ ನಮ್ಮ ಆರ್ಥಿಕ ರಾಜಧಾನಿ ಮತ್ತು ಆಧುನಿಕ ನಗರವಾಗಲಿದೆ ಎಂದು ಚಂದ್ರಬಾಬು ನಾಯ್ಡು ಹೇಳಿದ್ದಾರೆ.
ಈ ಹಿಂದೆ ಜಗನ್ ಮೋಹನ್ ರೆಡ್ಡಿ ಆಂಧ್ರಪ್ರದೇಶಕ್ಕೆ ಮೂರು ರಾಜಧಾನಿಗಳನ್ನು ಹಂಚಿಕೆ ಮಾಡುವುದಾಗಿ ಹೇಳಿದ್ದರು.ಈಗ ಆಂಧ್ರಪ್ರದೇಶದಲ್ಲಿ ಎನ್ ಡಿ ಎ ಒಕ್ಕೂಟದ ಸರ್ಕಾರ ಅಧಿಕಾರ ಬಂದಿರುವ ಹಿನ್ನೆಲೆಯಲ್ಲಿ ಈ ಹಿಂದಿನ ಸರ್ಕಾರದ ಮೂರು ರಾಜಧಾನಿಗಳ ನಿರ್ಧಾರವನ್ನು ರದ್ದುಗೊಳಿಸಿ ಅಮರಾವತಿಯೊಂದೇ ರಾಜಧಾನಿಯಾದಲಿದೆ ಎಂದು ಅವರು ಈಗ ತಿಳಿಸಿದ್ದಾರೆ.
ಇದನ್ನೂ ಓದಿ-ಯುವ ಪತ್ನಿ ಶ್ರೀದೇವಿಗೆ ಅನೈತಿಕ ಸಂಬಂಧ? ಆತನಿಂದಲೇ ಮಗು ಪಡೆಯುವ ಇಚ್ಛೆ!! ಈ ʻರಾಧಯ್ಯʼ ಯಾರು ಗೊತ್ತೇ?
ವಿಜಯವಾಡದಲ್ಲಿ ನಡೆದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‌ಡಿಎ) ಶಾಸಕರ ಸಭೆಯಲ್ಲಿ, ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ನಾಯ್ಡು ಅವರ ನಾಮನಿರ್ದೇಶನವನ್ನು ಪ್ರಸ್ತಾಪಿಸಿದರು, ಇದನ್ನು ಬಿಜೆಪಿ ರಾಜ್ಯಾಧ್ಯಕ್ಷೆ ಮತ್ತು ಸಂಸದೆ ಡಿ ಪುರಂದೇಶ್ವರಿ ಅನುಮೋದಿಸಿದರು.
ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಪವನ್ ಕಲ್ಯಾಣ್ 'ಚಂದ್ರಬಾಬು ನಾಯ್ಡು ಅವರು ಸಾಕಷ್ಟು ಸಹಿಸಿಕೊಂಡಿದ್ದಾರೆ. ನಾನು ಅವರನ್ನು ಜೈಲಿನಲ್ಲಿ ನೋಡಿದ್ದೇನೆ. ನಾನು ಅವರಿಗೆ ಮತ್ತು ಭುವನೇಶ್ವರಿ ಅವರಿಗೆ (ಅವರ ಪತ್ನಿ) ಉತ್ತಮ ದಿನಗಳು ಬರಲಿವೆ ಎಂದು ಭರವಸೆ ನೀಡಿದ್ದೇನೆ ಮತ್ತು ಈಗ ಅವರು ಬಂದಿದ್ದಾರೆ" ಎಂದು ಹೇಳಿದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ