ನವದೆಹಲಿ: ಅರಿಶಿಣ ಬೆರೆಸಿದ ಹಾಲು ಹಲವು ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ. ಇದನ್ನೇ ಗಮನದಲ್ಲಿಟ್ಟುಕೊಂಡು ಏಷ್ಯಾದ ಅತಿ ದೊಡ್ಡ ಹಾಲು ಉತ್ಪಾದಕ ಬ್ರಾಂಡ್ ಅಮೂಲ್ 'ಅರಿಶಿಣಯುಕ್ತ ಹಾಲು' ಬಿಡುಗಡೆ ಮಾಡಿದೆ. ಹಲವಾರು ವಿಧದ ಸೊಂಕುಗಳಿಂದ ಕಾಪಾಡಲು ಅರಿಶಿಣಯುಕ್ತ ಹಾಲು ಒಂದು ಉತ್ತಮ ವಿಕಲ್ಪವಾಗಿ ಹೊರಹೊಮ್ಮಲಿದೆ ಎಂದು ಕಂಪನಿ ವಿಶ್ವಾಸ ವ್ಯಕ್ತಪಡಿಸಿದೆ. ಯುವಜನರನ್ನು ಗಮನದಲ್ಲಿಟ್ಟುಕೊಂಡು ಅಮೂಲ್ ಈ ಉತ್ಪನ್ನವನ್ನು ಬಿಡುಗಡೆಗೊಳಿಸಿದೆ. ಗುಜರಾತ್ ಕೋ-ಆಪ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಶನ್ (GCMMF) ಅಮೂಲ್ ಬ್ರಾಂಡ್ ನ ಮಾರ್ಕೆಟಿಂಗ್ ಜವಾಬ್ದಾರಿಯನ್ನು ಹೊತ್ತುಕೊಂಡಿದೆ. ಇದೆ ಕಂಪನಿಗೆ ಸಂಬಂಧಿಸಿದ ಕೈರಾ ಡಿಸ್ಟ್ರಿಕ್ಟ್ ಕೋ-ಆಪರೇಟಿವ್ ಮಿಲ್ಕ್ ಪ್ರೊಡ್ಯೂಸರ್ ಯುನಿಯನ್ ಲಿಮಿಟೆಡ್ ಹಾಲಿಯ ಎರಡು ಹೊಸ ವರೈಟಿಗಳ ಉತ್ಪಾದನೆಯನ್ನು ಆರಂಭಿಸಿದೆ. ಕೈರಾ ಡಿಸ್ಟ್ರಿಕ್ಟ್ ಕೋ-ಆಪರೇಟಿವ್ ಮಿಲ್ಕ್ ಪ್ರೊಡ್ಯೂಸರ್ಸ್ ಯುನಿಯನ್ ಲಿಮಿಟೆಡ್ ಅನ್ನು ಅಮೂಲ್ ಡೈರಿ ಹೆಸರಿನಿಂದಲೂ ಕೂಡ ಗುರುತಿದಲಾಗುತ್ತದೆ. ಈ ಹಾಲನ್ನು ಕ್ಯಾನ್ ಗಳ ಮೂಲಕ ಅಮೂಲ್ ವಿತರಿಸಲಿದೆ.


COMMERCIAL BREAK
SCROLL TO CONTINUE READING

200 ಮಿಲಿ ಬಾಟಲ್ ನಲ್ಲಿಯೂ ಕೂಡ ಸಿಗಲಿದೆ
ಅಮೂಲ್ 200 ಮಿ.ಲೀ ಹಾಲಿನ ಬಾಟಲ್ ಗಳನ್ನೂ ಸಹ ಬಿಡುಗಡೆ ಮಾಡಿದೆ. ಇದರ ಬೆಲೆ ರೂ.30 ನಿಗದಿಪಡಿಸಲಾಗಿದೆ. ರೋಗಗಳ ವಿರುದ್ಧ ಹೋರಾಟ ನಡೆಸಲು ಶಾರೀರಿಕ ಕ್ಷಮತೆಯನ್ನು ಹೆಚ್ಚಿಸುವಲ್ಲಿ ಈ ಗೋಲ್ಡನ್ ಹಾಲು ತುಂಬಾ ಸಹಾರಿಯಾಗಲಿದೆ. ಮುಂಬರುವ ದಿನಗಳಲ್ಲಿ ಸಂಸ್ಥೆ ಶುಂಟಿ, ತುಳಸಿ ಸೇರಿದಂತೆ ಹಲವು ರೀತಿಯ ಹಾಲು ಉತ್ಪನ್ನಗಳನ್ನು ಸಹ ಮಾಡಲು ಸಿದ್ಧತೆ ನಡೆಸಿದೆ. ಈ ಕುರಿತು ಮಾಹಿತಿ ನೀಡಿರುವ ಅಮೂಲ್ ಮಿಲ್ಕ್ ನ MD ಡಾ.ಕೆ. ರತ್ನಂ,  ನಿತ್ಯ ಈ ಎರಡೂ ವಿಧದ ಹಾಲುಗಳ ಸುಮಾರು 1.50 ಲಕ್ಷ ಯುನಿಟ್ ತಯಾರಿಕೆಯ ಸಾಮರ್ಥ್ಯ ಈಗಾಗಲೇ ಕಂಪನಿ ಹೊಂದಿದೆ ಎಂದು ಹೇಳಿದ್ದಾರೆ. ಈ ಎರಡೂ ವರೈಟಿಯ ಹಾಳುಗಳನ್ನು ಗುಜರಾತ್ ನ ಆನಂದ್ ಜಿಲ್ಲೆಯಲ್ಲಿರುವ ಅಮೂಲ್ ಡೈರಿ ಪ್ಲಾಂಟ್ ನಲ್ಲಿ ಸಿದ್ಧಪಡಿಸಲಾಗುತ್ತಿದೆ.


ಈ ಅರಿಶಿನದ ಹಾಲು ಬಿಡುಗಡೆಗೆ ಕಾರಣ ಇಲ್ಲಿದೆ
ಇದಕ್ಕೆ ಸಂಬಂಧಿಸದಂತೆ ಮಾಹಿತಿ ನೀಡಿರುವ ಫೆಡರೇಶನ್ ನ MD ಆರ್. ಎಸ್ ಸೋಧಿ, ದೇಹದ ರೋಗ ಪ್ರತಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಅರಿಶಿಣವನ್ನು ಸೂಪರ್ ಫುಡ್ ಎಂದು ಭಾವಿಸಲಾಗುತ್ತದೆ. ಅದರಲ್ಲೂ ವಿಶೇಷವಾಗಿ ಹಾಲಿನ ಜೊತೆಗೆ ಇದನ್ನು ಬೆರೆಸಿ ಹಲವು ರೋಗಗಳ ನಿವಾರಣೆಗಾಗಿ ತಲಾಂತರದಿಂದ ಬಲಸಲಾಗುತ್ತದೆ. ಕೇವಲ ಭಾರತ ಅಷ್ಟೇ ಅಲ್ಲ ಇಡೀ ವಿಶ್ವಾದ್ಯಂತ ಅರಿಶಿಣದ ಹಾಲಿಗೆ ಭಾರಿ ಬೇಡಿಕೆ ಇದೆ ಎಂದು ಹೇಳಿದ್ದಾರೆ.