ನವದೆಹಲಿ: ಕೇಂದ್ರ ಸರ್ಕಾರ 2019-20ನೇ ಸಾಲಿನ ಬಜೆಟ್‌ನಲ್ಲಿ 3.18 ಲಕ್ಷ ಕೋಟಿ ರೂಗಳನ್ನು ರಕ್ಷಣಾ ಕ್ಷೇತ್ರಕ್ಕೆ ಹಂಚಿಕೆ ಮಾಡಿದೆ. ಕಳೆದ ಬಜೆಟ್ ನಲ್ಲಿ ಒಟ್ಟು 2.98 ಲಕ್ಷ ಕೋಟಿ ರೂ ಹಂಚಿಕೆ ಮಾಡಲಾಗಿತ್ತು ಎನ್ನಲಾಗಿದೆ.


COMMERCIAL BREAK
SCROLL TO CONTINUE READING

ಈ ಹಿಂದೆ ರಕ್ಷಣಾ ಸಚಿವರಾಗಿದ್ದ ನಿರ್ಮಲಾ ಸೀತಾರಾಮನ್, ಈಗ ಹಣಕಾಸು ಸಚಿವರಾಗಿ ಮೊದಲ ಬಾರಿಗೆ ಬಜೆಟ್ ಮಂಡಿಸಿದ್ದಾರೆ. ಈ ಬಾರಿಯ ಕೇಂದ್ರ ಬಜೆಟ್ ನಲ್ಲಿ ಅವರು ರಕ್ಷಣಾ ಕ್ಷೇತ್ರಕ್ಕೆ ಧಾರಾಳವಾಗಿ ಹಣವನ್ನು ಮೀಸಲಿಟ್ಟಿದ್ದಾರೆ ಎನ್ನಲಾಗಿದೆ. 


ಒಟ್ಟು ಹಂಚಿಕೆಯಲ್ಲಿ 1,08,248 ಕೋಟಿ ರೂ.ಗಳನ್ನು ಹೊಸ ಶಸ್ತ್ರಾಸ್ತ್ರಗಳು, ಪ್ಲಾಟ್‌ಫಾರ್ಮ್‌ಗಳು ಮತ್ತು ಮಿಲಿಟರಿ ಯಂತ್ರಾಂಶಗಳನ್ನು ಖರೀದಿಸಲು ಮೀಸಲಿಡಲಾಗಿದೆ. 2018-19ರಲ್ಲಿ ಸಂಬಳ ಪಾವತಿ ಮತ್ತು ಸಂಸ್ಥೆಗಳ ನಿರ್ವಹಣೆಯ ವೆಚ್ಚಗಳನ್ನು ಒಳಗೊಂಡಿರುವ ಆದಾಯ ವೆಚ್ಚ1,88,118 ಕೋಟಿ ರೂ ಆಗಿತ್ತು. ಆದರೆ ಈ ಬಾರಿ 2,10,682 ಕೋಟಿ ಆಗಿದೆ ಎನ್ನಲಾಗಿದೆ.


ಫೆಬ್ರವರಿ 1 ರಂದು ಮಧ್ಯಂತರ ಬಜೆಟ್‌ನಲ್ಲಿ ನಿಗದಿಪಡಿಸಿದ ಮೊತ್ತಕ್ಕೆ ಹೋಲಿಸಿದರೆ ರಕ್ಷಣಾ ವಲಯದ ಮೀಸಲಿಟ್ಟಿರುವ ಹಣ ದಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎನ್ನಲಾಗಿದೆ. ಒಟ್ಟು ವಿನಿಯೋಗದಲ್ಲಿ ಪಿಂಚಣಿಗಾಗಿ ಹಂಚಿಕೆಯನ್ನು ಸೇರಿಸಿದ್ದರೆ, ರಕ್ಷಣೆಗೆ ಒಟ್ಟು ವಿನಿಯೋಗವು 4.31 ಲಕ್ಷ ಕೋಟಿ ರೂ. ಆಗುತ್ತಿತ್ತು ಎನ್ನಲಾಗಿದೆ, ಇದು 2019-20ನೇ ಸಾಲಿನ ಒಟ್ಟು ಕೇಂದ್ರ ಸರ್ಕಾರದ ಖರ್ಚಿನ ಶೇಕಡಾ 15.47 ರಷ್ಟು ಎನ್ನಲಾಗಿದೆ.


2019-20 ರಲ್ಲಿನ ಬಜೆಟ್ ಅಂದಾಜು ರಕ್ಷಣಾ ಸಚಿವಾಲಯದ ಬಂಡವಾಳ ಹಂಚಿಕೆ ಒಟ್ಟು ಕೇಂದ್ರ ಸರ್ಕಾರದ ಬಂಡವಾಳ ವೆಚ್ಚದ ಶೇಕಡಾ 31.97 ರಷ್ಟಿದೆ ರಕ್ಷಣಾ  ಕಚೇರಿ ಟ್ವೀಟ್ ಮಾಡಿದೆ.