ನವದೆಹಲಿ:  ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಬಿಕ್ಕಟ್ಟಿನ ಮಧ್ಯೆ ಭಾರತ ಸರ್ಕಾರ (Government of India) ಒಂದು ಮಹತ್ವದ ಹೆಜ್ಜೆ ಇಟ್ಟಿದೆ. ಭಾರತಕ್ಕೆ ಪ್ರವೇಶಿಸಲು ಇಚ್ಛಿಸುವ ಜನರ ವೀಸಾ ಅರ್ಜಿಗಳನ್ನು ತ್ವರಿತಗತಿಯಲ್ಲಿ ಪತ್ತೆ ಹಚ್ಚಲು ಸರ್ಕಾರವು 'ಇ-ಎಮರ್ಜೆನ್ಸಿ ಎಕ್ಸ್-ಮಿಸ್ಕ್ ವೀಸಾ' (e-Emergency X- Misc Visa) ಹೆಸರಿನ ಹೊಸ ವರ್ಗದ ಎಲೆಕ್ಟ್ರಾನಿಕ್ ವೀಸಾವನ್ನು ಪರಿಚಯಿಸಿದೆ.


COMMERCIAL BREAK
SCROLL TO CONTINUE READING

ಅಫ್ಘಾನಿಸ್ತಾನದಲ್ಲಿನ  ಬಿಕ್ಕಟ್ಟಿನ ಪರಿಸ್ಥಿತಿಗಳ ದೃಷ್ಟಿಯಿಂದ ಭಾರತ ಸರ್ಕಾರವು ವೀಸಾ ನಿಬಂಧನೆಗಳನ್ನು ಪರಿಶೀಲಿಸಿದೆ. ಇದರೊಂದಿಗೆ, ಇ-ಎಮರ್ಜೆನ್ಸಿ ಎಕ್ಸ್-ಮಿಸ್ಕ್ ವೀಸಾ (e-Emergency X- Misc Visa) ಹೆಸರಿನ ಎಲೆಕ್ಟ್ರಾನಿಕ್ ವೀಸಾ ಪಡೆಯುವ ಹೊಸ ವರ್ಗವನ್ನು ಆರಂಭಿಸಲಾಯಿತು. ಇದರಿಂದ ದೇಶವನ್ನು ಪ್ರವೇಶಿಸಲು ಬಯಸುವ ಜನರ ವೀಸಾ ಅರ್ಜಿಗಳನ್ನು ತ್ವರಿತವಾಗಿ ಪ್ರಕ್ರಿಯೆಗೊಳಿಸಬಹುದು ಎಂದು ಗೃಹ ಸಚಿವಾಲಯದ ವಕ್ತಾರರು, ಮಂಗಳವಾರ ಸುದ್ದಿ ಸಂಸ್ಥೆ ANI ಗೆ ತಿಳಿಸಿದರು.


ಇದನ್ನೂ ಓದಿ-  India on Afghanistan Crisis: ಕಾಬೂಲ್‌ನಲ್ಲಿ ಹದಗೆಟ್ಟ ಭದ್ರತಾ ಪರಿಸ್ಥಿತಿ: ನಾವು ಸಿಖ್, ಹಿಂದೂ ಸಮುದಾಯಗಳ ಸಂಪರ್ಕದಲ್ಲಿದ್ದೇವೆ ಎಂದ ಭಾರತ


ಸಾಮಾನ್ಯವಾಗಿ ನಾವು ಬಸ್ ಅಥವಾ ರೈಲು ಪ್ರಯಾಣದಲ್ಲಿ ಜನಜಂಗುಳಿ ಅನ್ನು ಕಂಡಿದ್ದೇವೆ. ಆದರೆ ಪ್ರಸ್ತುತ ಅಫ್ಘಾನಿಸ್ತಾನದಲ್ಲಿ ದೇಶ ತೊರೆಯಲು ಮುಂದಾಗಿರುವ ಹಲವು ಮಂದಿ ಪ್ರಾಣ ಉಳಿದರೆ ಸಾಕಪ್ಪಾ... ಎಂದು ಬೇರೆ ದೇಶಕ್ಕೆ ಹಾರಲು  ಹಪಹಪಿಸುತ್ತಿದ್ದಾರೆ.  ಕಾಬೂಲ್‌ನ ಹಮೀದ್ ಕರ್ಜೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೋಮವಾರ ವಿಮಾನವೇರಲು ಹರಸಾಹಸಪಡುತ್ತಿದ್ದ ನಾಗರೀಕರ ದೃಶ್ಯ ಹೃದಯ ವಿದ್ರಾವಕವಾಗಿತ್ತು. 


ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರಕ್ಕೆ ಬಂದ ಎರಡು ದಿನಗಳ ನಂತರ, ತಾಲಿಬಾನ್ ಭಯೋತ್ಪಾದಕರ (Taliban Terrorist) ಅಟ್ಟಹಾಸಕ್ಕೆ ಬೆಚ್ಚಿಬಿದ್ದಿರುವ ಅಫ್ಘಾನ್ ನಾಗರಿಕರು ದೇಶವನ್ನು ತೊರೆಯಲು ಮುಂದಾದರು. ಅಫ್ಘಾನಿಸ್ತಾನವನ್ನು ತೊರೆಯಲು ಸಾವಿರಾರು ಅಫ್ಘಾನ್ ನಾಗರಿಕರು ಸೋಮವಾರ ಕಾಬೂಲ್‌ನ ಮುಖ್ಯ ವಿಮಾನ ನಿಲ್ದಾಣವನ್ನು ತಲುಪಿದರು. ಆದರೆ ಇಲ್ಲಿ ಎಂದೂ ಕೂಡ ಕೇಳಿ ಕಂಡರೆಯದಂತಹ ದೃಶ್ಯಗಳು ಕಂಡು ಬಂದವು. 


ಇದನ್ನೂ ಓದಿ- ಜಾಗತಿಕ ಭಯೋತ್ಪಾದಕ ಬೆದರಿಕೆಯ ನಿಗ್ರಹಕ್ಕೆ ಜಗತ್ತು ಒಂದಾಗಬೇಕಾಗಿದೆ-ವಿಶ್ವಸಂಸ್ಥೆ


ವಾಸ್ತವವಾಗಿ ಅಫ್ಘಾನಿಸ್ತಾನದಿಂದ ಯುಎಸ್ ಸೈನ್ಯದ ನಿರ್ಗಮನವು ಮೂಲಭೂತವಾದಿ ಇಸ್ಲಾಮಿಕ್ ಗುಂಪು ತಾಲಿಬಾನ್ ಅನ್ನು ಎಷ್ಟು ಶಕ್ತಿಶಾಲಿಯನ್ನಾಗಿ ಮಾಡಿತು ಎಂದರೆ ರಾಜಧಾನಿ ಕಾಬೂಲ್ ಸೇರಿದಂತೆ ಇಡೀ ಅಘ್ಘಾನಿಸ್ತಾನ (Afghanistan) ತಾಲಿಬಾನಿಗಳ ಕಪಿಮುಷ್ಠಿಯಲ್ಲಿ ಸಿಲುಕಿತು. ಇದರ ನಂತರ, ಭಯಭೀತರಾದ ನಾಗರಿಕರು ತಮ್ಮ ದೇಶವನ್ನು ತೊರೆಯಲು ಮುಂದಾಗಿದ್ದರು.  ಹೀಗಾಗಿ ಟೇಕಾಫ್ ಆಗುತ್ತಿರುವ ಇತರ ದೇಶದ ವಿಮಾನಗಳನ್ನು ಹತ್ತಲು ಜನರು ಮುಗಿಬಿದ್ದಿದ್ದಾರೆ. ಇನ್ನು ಅಮೆರಿಕಾದ ವಿಮಾನ ಹತ್ತಲು ಪ್ರಯತ್ನಿಸಿ ವಿಫಲವಾದ ಕೆಲ ಅಫ್ಘಾನ್ ನಾಗರಿಕರು ವಿಮಾನದ ಟೈರ್ ಮೇಲೆ ಹತ್ತಿ ಕುಳಿತುಕೊಂಡಿದ್ದಾರೆ. ವಿಮಾನ ಆಗಸಕ್ಕೆ ಹಾರುತ್ತಿದ್ದಂತೆ  ಮಧ್ಯಭಾಗದಿಂದ ಇಬ್ಬರು ಕೆಳಗೆ ಬೀಳುತ್ತಿರುವ ಭೀಕರ ದೃಶ್ಯ ಸೆರೆಯಾಗಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ