ನವ ದೆಹಲಿ: ನಿನ್ನೆಯಷ್ಟೇ ಮೋದಿ ಸಚಿವ ಸಂಪುಟದಲ್ಲಿ ಸ್ಥಾನ ಪಡೆದಿರುವ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಅನಂತ್ ಕುಮಾರ್ ಹೆಗಡೆ ಇಂದು ಕೌಶಲ್ಯ ಅಭಿವೃದ್ಧಿ ರಾಜ್ಯ ಖಾತೆ ಸಚಿವರಾಗಿ ತಮ್ಮ ಅಧಿಕಾರ ವಹಿಸಿಕೊಳ್ಳಲಿದ್ದಾರೆ. 


COMMERCIAL BREAK
SCROLL TO CONTINUE READING

ಹೆಗಡೆಯವರು ಐದನೇ ಬಾರಿಗೆ ಲೋಕಸಭಾ ಸಂಸದರಾಗಿ ಆಯ್ಕೆಯಾಗಿದ್ದು ಭಾನುವಾರ ನಡೆದ ಮೋದಿ ಸಂಪುಟ ವಿಸ್ತರಣೆಯಲ್ಲಿ ಕೌಶಲ್ಯಾಭೀವೃದ್ದಿ ರಾಜ್ಯ ಖಾತೆ ಸಚಿವರಾಗಿ ಸ್ಥಾನ ಪಡೆದಿದ್ದಾರೆ. 


ಕೇಂದ್ರ ಕೌಶಲ್ಯಾಭಿವೃದ್ಧಿ ರಾಜ್ಯ ಖಾತೆ ಸಚಿವರಾಗಿ ದೆಹಲಿಯ ಶಿವಾಜಿ ಸ್ಟೇಡಿಯಂನಲ್ಲಿರುವ ಕಚೇರಿಯಲ್ಲಿ ಅನಂತ್ ಕುಮಾರ್ ಹೆಗಡೆ ಅಧಿಕಾರ ಸ್ವೀಕರಿಸಿದರು. 


ಅಧಿಕಾರ ಸ್ವಿಕಾರದ ಬಳಿಕ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅನಂತಕುಮಾರ್ ಹೆಗಡೆ ಕೌಶಲ್ಯಭಿವೃದ್ದಿ ಖಾತೆ ನನಗೆ ಹೊಸದಾಗಿದೆ. ಇಲಾಖೆಯ ಬಗ್ಗೆ ಅಧ್ಯಯನ ಮಾಡಿ ಕೆಲಸ ನಿರ್ವಹಿಸುವೆ ಮತ್ತು ಹಿರಿಯ ಸಚಿವರ ಸಹಕಾರದಿಂದ ಒಳ್ಳೆಯ ಕೆಲಸ ಮಾಡುವೆ ಎಂದು ತಿಳಿಸಿದರು. ಅಲ್ಲದೆ ಕೈಗಾರಿಕೆ, ಉದ್ದಿಮೆಗಳು, ವಿವಿಗಳ ಜೊತೆ ಸಮನ್ವಯ ಸಾಧಿಸಿ ನಿರುದ್ಯೋಗ ಸಮಸ್ಯೆಗೆ ಪರಿಹಾರ ಕಂಡುಹಿಡಿಯುವುದಾಗಿ ಆಶ್ವಾಸನೆ ನೀಡಿದರು.